ಇಂಧನ ದರ ಮತ್ತೆ ದುಬಾರಿ


ನವದೆಹಲಿ, ಮೇ.೩೧-ದಿನದಿಂದ ದಿನಕ್ಕೆ ಪೆಟ್ರೋಲ್ ಮತ್ತು ಡೀಸೆಲ್ ದರ ದುಬಾರಿಯಾಗುತ್ತಿದೆ. ಇಂದು ಸತತ ೧೬ನೇ ಬಾರಿ ಇಂಧನ ದರ ಏರಿಕೆಯಾಗಿದ್ದು, ವಾಹನ ಸವಾರರ ಜೀಬಿಗೆ ಕತ್ತರಿ ಬೀಳುತ್ತಿದೆ.
ಇಂದು ಪ್ರತಿ ಲೀಟರ್ ಪೆಟ್ರೋಲ್ ದರ ೨೯ ಪೈಸೆ ಹಾಗು ಪ್ರತಿ ಲೀಟರ್ ಡೀಸೆಲ್ ದರ ೫೯ ಪೈಸೆಯಷ್ಟುಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಹೆಚ್ಚಿಸಿವೆ.
ಹೀಗಾಗಿ ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ ೧೦೦ ರೂ ೪೭ ಪೈಸೆಯಷ್ಟಿದೆ. ಡೀಸೆಲ್ ದರ ೯೨.೪೫ ಪೈಸೆಗೆ ಮಾರಾಟ ಮಾಡಲಾಗುತ್ತಿದೆ. ಕೊಲ್ಕತ್ತದಲ್ಲಿ ೯೪.೨೫ ಹಾಗೂ ಡೀಸೆಲ್ ೮೭.೭೪ ರೂ ನಷ್ಟಿದೆ.
ಬೆಂಗಳೂರು ನಗರದಲ್ಲಿ ಪೆಟ್ರೋಲ್ ದರ ೯೭.೦೭ ಹಾಗೂ ಡೀಸೆಲ್ ದರ ೮೯.೯೯ ಪೈಸೆಯಷ್ಟಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ದರ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಇಂಧನ ದರವನ್ನು ಪ್ರತಿನಿತ್ಯ ಪರಿಷ್ಕರಿಸುತ್ತಿವೆ.
ಡೀಸೆಲ್ ದರ ಏರಿಕೆಯಾದರೆ, ಅಗತ್ಯ ವಸ್ತುಗಳ ದರ ಗಗನಕ್ಕೇರುತ್ತಿದೆ. ಇದರಿಂದಾಗಿ ಶ್ರೀಸಾಮಾನ್ಯನಿಗೆ ಹೊರೆಯಾಗುತ್ತಿದೆ. ಇಂಧನ ದರ ಇಳಿಕೆಗೆ ಕೇಂದ್ರ ಸರ್ಕಾರ ಕ್ರಮಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.