ಇಂಧನ ದರ ಏರಿಕೆ


ನವದೆಹಲಿ,ಜ.೬- ರಾಜಧಾನಿ ದೆಹಲಿಯಲ್ಲಿ ಇಂದು ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕ್ರಮವಾಗಿ ೨೬ ಪೈಸೆ ಮತ್ತು ೨೫ ಪೈಸೆ ಏರಿಕೆಯಾಗಿದೆ.ಇಂದಿನ ದರದ ಮಾಹಿತಿಯನ್ವಯ ಲೀಟರ್ ಪೆಟ್ರೋಲ್‌ಗೆ ೮೩.೯೭ ಹಾಗೂ ಡೀಸಲ್‌ಗೆ ೭೪.೧೨ ರೂ.ಗೆ ನಿಗದಿಯಾಗಿದೆ. ಒಂದು ತಿಂಗಳ ನಂತರ ಪೆಟ್ರೋಲ್-ಡೀಸಲ್ ಬೆಲೆಯನ್ನು ಏರಿಕೆ ಮಾಡಲಾಗಿದೆ.
ಕಳೆದ ತಿಂಗಳು ಓಎಂಸಿಗಳು ವಿರಾಮದ ಮೊರೆ ಹೋಗಿದ್ದವು. ಈ ವೇಳೆ ಕೊರೊನಾ ಲಸಿಕೆ ಅಭಿವೃದ್ಧಿ ಕುರಿತಂತೆ ಅನೇಕ ಮಾಹಿತಿಗಳು ಹೊರ ಬೀಳುತ್ತಿದ್ದವು. ಇದರಿಂದ ದೊಡ್ಡ ಮಟ್ಟದ ತೈಲ ಬೇಡಿಕೆ ಸಾಧ್ಯತೆಯನ್ನು ಇಂಧನ ವಿತರಕರು ಎದುರು ನೋಡುತ್ತಿದ್ದಾರೆ.
ಬ್ರೆಂಟ್ ಕಚ್ಛಾ ತೈಲ ೫೦ ಡಾಲರ್‌ನಿಂದ ೫೪ ಡಾಲರ್‌ಗೆ ಏರಿಕೆಯಾಗಿದೆ. ಕಳೆದ ಡಿ. ೭ ರಂದು ಪೆಟ್ರೋಲ್ ಬೆಲೆ ೮೩.೭೧ ತಲುಪಿತ್ತು. ಆದರೆ, ಓಎಂಸಿಗಳಿಂದ ಬೆಲೆ ಪರಿಷ್ಕರಣೆ ಸ್ಥಗಿತಗೊಂಡಿತ್ತು. ಆದರೆ, ಇಂದು ಮತ್ತೆ ಇಂಧನ ಬೆಲೆ ಏರಿಕೆ ಗ್ರಾಹಕರಿಗೆ ಬಿಸಿ ಮುಟ್ಟಿಸಿದೆ.