ಇಂಧನ ತೆರಿಗೆಗೆ ಡಿಕೆಶಿ ವಿರೋಧ

ಬೆಂಗಳೂರು,ಜೂ,೧೦- ಪೆಟ್ರೋಲ್-ಡೀಸಲ್ ಮೇಲೆ ತೆರಿಗೆ ಭಾರವೇ ಅಧಿಕವಿದೆ, ಸೋಂಕಿತರಿಗೆ ನೆರವಾಗದ ಸರ್ಕಾರ ಅಧಿಕ ತೆರಿಗೆಯನ್ನು ವಿಧಿಸಿ ಅದನ್ನು ಏನು ಮಾಡುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪ್ರಶ್ನಿಸಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಆಕ್ಸಿಜನ್ ಸಿಲಿಂಡರ್ ಖರೀದಿ ಇಲ್ಲ, ಎಲ್ಲರಿಗೂ ಲಸಿಕೆ ಇಲ್ಲ, ವೆಂಟಿಲೇಟರ್‌ಗಳ ಖರೀದಿಯೂ ಇಲ್ಲ, ಹೊಸ ಆಸ್ಪತ್ರೆಗಳೂ ಇಲ್ಲ ಹೀಗಿದ್ದರೂ ಪೆಟ್ರೋಲ್ ಮೇಲಿನ ೬೫ ರೂ. ಬಿಜೆಪಿ ತೆರಿಗೆಯನ್ನು ಏಕೆ ಪಾವತಿಸಬೇಕು ಎಂದು ಟ್ವಿಟರ್‌ನಲ್ಲಿ ಹೇಳಿದ್ದಾರೆ.
ಪೆಟ್ರೋಲ್ ಪ್ರತಿ ಲೀಟರ್‌ಗೆ ೩೫ ರೂ. ಬೆಲೆ ಇದೆ,ಅದಕ್ಕೆ ಬಿಜೆಪಿಯು ೬೫ ರೂ. ತೆರಿಗೆ ವಿಧಿಸುತ್ತದೆ ಎಂದು ಅವರು ಟ್ವಿಟರ್‌ನಲ್ಲಿ ತಿಳಿಸಿದ್ದಾರೆ.