ಇಂಧನ ಉಳಿಸಿ, ಪರಿಸರ ಸಂರಕ್ಷಿಸಿ: ಡಾ. ರವೀಂದ್ರ ಬೆಳ್ಳಿ

ಸಂಜೆವಾಣಿ ವಾರ್ತೆ,
ವಿಜಯಪುರ,ಫೆ. 24: ಇಂದಿನ ಬೆಳೆಯುತ್ತಿರುವ ನಗರ ಹಾಗೂ ಜನಸಂಖ್ಯೆಯಿಂದಾಗಿ ಪರಿಸರ ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಇಂಧನ ಉಳಿಸಿ ಪರಿಸರ ಸಂರಕ್ಷಿಸುವ ಹೊಣೆ ಪ್ರತಿಯೊಬ್ಬರದ್ದಾಗಿರಬೇಕು ಎಂದು ಸಹ ವಿಸ್ತರಣಾ ನಿರ್ದೇಶಕ ಡಾ. ರವೀಂದ್ರ ಬೆಳ್ಳಿ ಹೇಳಿದರು. ಶುಕ್ರವಾರ ವಿಜಯಪುರ ನಗರದಲ್ಲಿ ಮಾನವ ವಿಕಾಸ ಕೇಂದ್ರ(ರಿ) ಹಾಗೂ ವಿಜಯಪುರ ಸಹ್ಯಾದ್ರಿ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಮಹಾವಿದ್ಯಾಲಯ ಇವರ ಸಂಯುಕ್ತಾಶ್ರಯದಲ್ಲಿ ಜರುಗಿದ ಗ್ರಾಮೀಣ ಅಭಿವೃದ್ಧಿಯಲ್ಲಿ ಗ್ರಾಮೀಣ ಇಂಧನದ ಮಹತ್ವ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
ಇಂದು ವಾಹನಗಳ ದಟ್ಟನೆಯಿಂದಾಗಿ ವಾಯುಮಾಲಿನ್ಯ ಉಂಟಾಗುತ್ತಿದೆ. ವಿದ್ಯುತ್ ತಯಾರಿಸಲು ಕಲ್ಲಿದ್ದಲು, ನೈಸರ್ಗಿಕ ಅನಿಲ, ಖನಿಜ ತೈಲಗಳ ಬಳಕೆಯಿಂದ ಹೆಚ್ಚು ಶಾಖ ಬಿಡುಗಡೆ ಜೊತೆಗೆ ಕಾರ್ಬನ್ ಡೈ ಅಕ್ಸೈಡ್ ಬಿಡುಗಡೆಗೊಂಡು ಜಾಗತಿಕ ತಾಪಮಾನ ಹೆಚ್ಚಾಗಿ ಪರಿಸರ ಮಾಲಿನ್ಯ ಉಂಟಾಗುತ್ತಿದೆ. ಕಾರಣ ಸೌರಶಕ್ತಿ, ಪವನಶಕ್ತಿ, ಜಲಶಕ್ತಿಯಿಂದ ತಯಾರಾಗುವ ವಿದ್ಯುತ್ ಬಳಸಬೇಕು ನಮ್ಮ ನೈಸರ್ಗಿಕ ಸಂಪನ್ಮೂಲಗಳನ್ನು ಕಾಪಾಡಬೇಕೆಂದರು.
ಸತ್ಯಣ್ಣ ಹಡಪದ ಪ್ರಾಸ್ತಾವಿಕವಾಗಿ ಮಾತನಾಡಿ, ಇಂದು ನಾವು ಗ್ರಾಮೀಣ ಭಾಗದಲ್ಲಿ ಅನೇಕ ಅರಿವು ಮೂಡಿಸುವ ಕಾರ್ಯಕ್ರಮ ಮಾಡುತ್ತಿದ್ದು, ಅದರಲ್ಲಿ ಇಂಧನ ಉಳಿತಾಯ, ಪರಿಸರ ಸಂರಕ್ಷಣೆ ಗ್ರಾಮೀಣ ಭಾಗದಲ್ಲಿ ಆರೋಗ್ಯ ತಪಾಸಣೆ, ಸ್ವಚ್ಛತೆ, ಕೃಷಿ ಅಭಿವೃದ್ಧಿ ಕುರಿತು ಗ್ರಾಮೀಣ ಭಾಗದ ಜನರಿಗೆ ತಿಳುವಳಿಕೆ ಮತ್ತು ಅಳವಡಿಕೆ ಮಾಡುತ್ತಿರುವದಾಗಿ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಬಿ.ಎಸ್. ಬಾಪಗೊಂಡ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಅನುಭವ ನೀಡಲು ಅನೇಕ ವಿಶೇಷ ಶಿಬಿರಗಳನ್ನು ಆಯೋಜಿಸುತ್ತಿರುವುದಾಗಿ ತಿಳಿಸಿದರು. ಸಮಾರಂಭದಲ್ಲಿ ಉಪನ್ಯಾಸಕರಾದ ಓಂಕಾರ ನಾವಿ, ಕೆ. ಎಸ್. ಆಲಮೇಲ, ಎಮ್. ಆರ್. ಬಿರಾದಾರ, ಎಮ್. ಕೆ. ಕುಂಬಾರ, ಎಸ್. ಜಿ. ರೆಬಿನಾಳ, ಎಸ್. ಬಿ. ಮಠಪತಿ, ಪ್ರಶಾಂತ ಬಿರಾದಾರ, ಎಸ್. ಎಸ್. ಲೋಣಿ, ಎಸ್.ಎಸ್. ಪಾಟೀಲ, ಎ.ಹೆಚ್. ಶೇಖ, ಅನುಪ್ರಿಯಾ ಬಿರಾದಾರ, ಮಲ್ಲಿಕಾರ್ಜುನ ಎಲ್ಲ ಉಪನ್ಯಾಸಕರ ಬಳಗ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.