ಇಂಧನ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳ ಪ್ರವಾಸ

ಕಲಬುರಗಿ,ಆ.02:ಇಂಧನ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳಾದ ಗೌರವ್ ಗುಪ್ತ ಅವರು ಬೆಂಗಳೂರಿನ ವಿಮಾನದ ಮೂಲಕ ಇದೇ ಆಗಸ್ಟ್ 4 ರಂದು ಮಧ್ಯಾಹ್ನ 2.40 ಗಂಟೆಗೆ ಕಲಬುರಗಿಗೆ ಆಗಮಿಸುವರು.
ಮಧ್ಯಾಹ್ನ 3.30 ಗಂಟೆಗೆ ಗೃಹಜ್ಯೋತಿ ಅನುಷ್ಠಾನ ಬಗ್ಗೆ ಮಾಡಿರುವ ವ್ಯವಸ್ಥೆಗಳ ಪರಿಶೀಲನೆ ನಡೆಸುವರು. ನಂತರ ಕಲಬುರಗಿಯಲ್ಲಿ ವಾಸ್ತವ್ಯ ಮಾಡುವರು.
ಇದೇ ಆಗಸ್ಟ್ 5 ರಂದು ಬೆಳಿಗ್ಗೆ ಮಾನ್ಯ ಮುಖ್ಯಮಂತ್ರಿಗಳು ಉದ್ಘಾಟಿಸಲಿರುವ ಗೃಹಜ್ಯೋತಿ ಅನುಷ್ಠಾನದ ಕಾರ್ಯಕ್ರಮದಲ್ಲಿ ಭಾಗಹಿಸುವರು. ನಂತರ ಮಧ್ಯಾಹ್ನ 1.30 ಗಂಟೆಗೆ ಕಲಬುರಗಿಯಿಂದ ಬೆಂಗಳೂರಿಗೆ ಪ್ರಯಾಣಿಸುವರು.