ಇಂದ್ರಧನುಷ 5.0 ಗೆ ಜಿಲ್ಲೆಯಲ್ಲಿ ಚಾಲನೆ

ಧಾರವಾಡ,ಆ8: ಜಿಲ್ಲೆಯಲ್ಲಿ ಪರಿಣಾಮಕಾರಿ ಇಂದ್ರಧನುμï 5.0 ಕಾರ್ಯಕ್ರಮ ಯಶಸ್ವಿಯಾಗಿಸಲು ಎಲ್ಲ ತಾಯಂದಿರು ಮತ್ತು ಗರ್ಭಿಣಿ ಸ್ತ್ರೀಯರು ಸಕ್ರಿಯವಾಗಿ ಭಾಗವಹಿಸಿ, ಅಗತ್ಯ ಲಸಿಕೆಗಳನ್ನು ಪಡೆದುಕೊಳ್ಳಬೇಕು ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ವರೂಪ ಟಿ.ಕೆ. ಅವರು ಹೇಳಿದರು.

ಅವರು ಜಿಲ್ಲಾಸ್ಪತ್ರೆಯ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ವಿಭಾಗದಲ್ಲಿ ಪರಿಣಾಮಕಾರಿ ಇಂದ್ರಧನುಷ 5.0 ಕಾರ್ಯಕ್ರಮದಲ್ಲಿ ಮಕ್ಕಳಿಗೆ ಲಸಿಕೆ ನೀಡುವ ಮೂಲಕ ಲಸಿಕಾಕರಣಕ್ಕೆ ಚಾಲನೆ ನೀಡಿ, ಅವರು ಮಾತನಾಡಿದರು.

ಇಂದ್ರಧನುಷ ಕಾರ್ಯಕ್ರಮದಡಿ ನೀಡುವ ಲಸಿಕೆಗಳಿಂದ ಪ್ರಮುಖ ಕಾಯಿಲೆಗಳಿಂದ ಹಸಗೂಸು, ಮಕ್ಕಳು ಮತ್ತು ತಾಯಂದಿರು, ಗರ್ಭಿಣಿಯರನ್ನು ರಕ್ಷಿಸಬಹುದು ಎಂದು ಅವರು ತಿಳಿಸಿದರು.

ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದ ವೇಳಾಪಟ್ಟಿಯನುಸಾರ ವಯಸ್ಸಿಗನುಗುಣವಾಗಿ ಲಸಿಕೆ ಪಡೆಯದ, ಬಿಟ್ಟುಹೋದ, ಲಸಿಕೆ ವಂಚಿತ ಮತ್ತು ಲಸಿಕಾಕರಣಕ್ಕೆ ಬಾಕಿಯಿರುವ ಗರ್ಭಿಣಿಯರು ಹಾಗೂ 5 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ತೀವ್ರತರವಾದ ಮಿಷನ್ ಇಂದ್ರಧನುμï 5.0 ರಲ್ಲಿ ಲಸಿಕೆ ನೀಡಲಾಗುವುದು.

ವಿಶೇಷವಾಗಿ ಧಡಾರ್ ರುಬೆಲ್ಲಾ ರೋಗನಿರೋಧಕತೆಯ ಅಂತರವನ್ನು ಕಡಿಮೆ ಮಾಡಲಾಗುವದು. ಈ ಕಾರ್ಯಕ್ರಮದಲ್ಲಿ ದುರ್ಬಲ ಸಮುದಾಯವನ್ನು ತಲುಪುವುದು ಮತ್ತು ಸಮುದಾಯ ಪಾಲ್ಗೊಳ್ಳುವಿಕೆಗೆ ಆದ್ಯತೆ ನೀಡಲಾಗುತ್ತಿದೆ ಎಂದು ಜಿ.ಪಂ. ಸಿಇಓ ಸ್ವರೂಪ ಟಿ.ಕೆ. ಅವರು ಹೇಳಿದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ.ಪಾಟೀಲ ಶಶಿ ಅವರು ಮಾತನಾಡಿ, ಪರಿಣಾಮಕಾರಿ ಮಿಷನ್ ಇಂದ್ರಧನುμï 5.0 ರಲ್ಲಿ ನೀಡಲಾದ ಲಸಿಕೆಗಳ ವಿವರವನ್ನು ಯು.ವೀನ್ ಪೆÇೀರ್ಟಲ್‍ನಲ್ಲಿ ದಾಖಲಿಸಿ, ಇ-ಲಸಿಕಾಕರಣ ಪ್ರಮಾಣ ಪತ್ರ ವಿತರಿಸಲಾಗುತ್ತದೆ ಎಂದು ತಿಳಿಸಿದರು.

ಮಿಷನ್ ಇಂದ್ರಧನುμï 5.0 ಕಾರ್ಯಕ್ರಮವನ್ನು ಮೊದಲ ಸುತ್ತು ಆಗಸ್ಟ್ 7 ರಿಂದ 12 ರ ವರೆಗೆ, ಎರಡನೇಯ ಸುತ್ತು ಸಪ್ಟೆಂಬರ್ 11 ರಿಂದ 16 ರ ವರೆಗೆ ಮತ್ತು ಮೂರನೇ ಸುತ್ತು ಅಕ್ಟೋಬರ್ 9 ರಿಂದ 14 ರ ವರೆಗೆ ನಡೆಸಲಾಗುವುದು. ಈ ದಿನಾಂಕಗಳಲ್ಲಿ ಆಶಾ, ಆರೋಗ್ಯ ಕಾರ್ಯಕರ್ತರು ನಿಗಧಿತ ಸ್ಥಳಗಳಲ್ಲಿದ್ದು, ಅರ್ಹರಿಗೆ ಲಸಿಕೆ ನೀಡುತ್ತಾರೆ. ಇದರಲ್ಲಿ ಮಹಿಳಾ ಮಕ್ಕಳ ಕಲ್ಯಾಣ ಇಲಾಖೆ, ಶಾಲಾ ಶಿಕ್ಷಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳು ಸಹಕಾರ ನೀಡಲಿವೆ ಎಂದು ಡಿಎಚ್‍ಓ ತಿಳಿಸಿದರು.

ಆರ್‍ಸಿಎಚ್‍ಓ ಡಾ.ಎಸ್.ಎಂ.ಹೊನಕೇರಿ ಪ್ರಾಸ್ತಾವಿಕವಾಗಿ ಮಾತನಾಡಿ, ಜಿಲ್ಲೆಯಲ್ಲಿ ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದಡಿ ಒಟ್ಟು 0-1 ವರ್ಷದ ಮಕ್ಕಳ ಸಂಖ್ಯೆ-36010 ಮತ್ತು ಗರ್ಭಿಣಿ ಮಹಿಳೆಯರ ಸಂಖ್ಯೆ – 39430 ಆಗಿದೆ.

ಮಿಷನ್ ಇಂದ್ರಧನುμï 5.0 ದಲ್ಲಿ ಜಿಲ್ಲೆಯ ಒಟ್ಟು 589 ಸ್ಥಳಗಳಲ್ಲಿ ಲಸಿಕಾಕರಣ ಮಾಡಲಾಗುತ್ತಿದ್ದು, ಇದರಲ್ಲಿ 0-2 ವರ್ಷದ ಮಕ್ಕಳು -3506 ಮತ್ತು 2-5 ವರ್ಷದ ಮಕ್ಕಳು- 509, ಗರ್ಭಿಣಿ ಮಹಿಳೆಯರು- 696 ಸೇರಿದ್ದಾರೆ ಎಂದು ತಿಳಿಸಿದರು.
ಜಿಲ್ಲಾ ಆಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಸಂಗಪ್ಪ ಗಾಬಿ ಅವರು ಮಾತನಾಡಿ, ಜಿಲ್ಲಾ ಆಸ್ಪತ್ರೆಯ ತಾಯಿ ಮತ್ತು ಮಕ್ಕಳ ವಿಭಾಗ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಪರಿಣಾಮಕಾರಿ ಇಂದ್ರಧನುಷ ಯಶಸ್ವಗೊಳಿಸಲು ಅಗತ್ಯ ಮೂಲಸೌಕರ್ಯ, ಸಿಬ್ಬಂದಿಗಳನ್ನು ನೀಡಲಾಗಿದೆ. ಪ್ರತಿ ದಿನ ಆಗಮಿಸುವ ಗರ್ಭಿಣಿಯರಿಗೆ, ಜನಿಸುವ ಮಕ್ಕಳಿಗೆ, ತಾಯಂದಿರಿಗೆ ನಿಯಮಿತವಾಗಿ ಲಸಿಕೆ ನೀಡಲಾಗುತ್ತಿದೆ ಎಂದು ಅವರು ತಿಳಿಸಿದರು.

ಜಿಲ್ಲಾ ಆಸ್ಪತ್ರೆಯ ಸ್ಥಾನಿಕ ವೈದ್ಯಾಧಿಕಾರಿ ಡಾ.ರಾಜೇಂದ್ರ ಹಳ್ಳಿಕೇರಿ ಸ್ವಾಗತಿಸಿದರು. ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ನಾಗವೇಣಿ ವಂದಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಆಸ್ಪತ್ರೆಯ ಹಿರಿಯ ತಜ್ಞ ವೈದ್ಯ ಡಾ.ಶ್ರೀನಿವಾಸುಲು, ಜಿಲ್ಲಾ ಆಯುಷ್ಯ ಅಧಿಕಾರಿ ಡಾ. ಬಿ.ಪಿ.ಪೂಜಾರ, ಡಾ.ಸಂತೋಷ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು, ಜಿಲ್ಲಾ ಆಸ್ಪತ್ರೆಯ ವೈದ್ಯರು, ಸಿಬ್ಬಂದಿಗಳು, ತಾಯಂದಿರು, ಗರ್ಭಿಣಿ ಮಹಿಳೆಯರು ಭಾಗವಹಿಸಿದ್ದರು.