ಇಂದ್ರಧನುಷ್ ಅಭಿಯಾನ ಯಶಸ್ವಿಗೊಳಿಸಿ:ಡಿಸಿ ಬಿ ಫೌಜಿಯಾ ತರನ್ನುಮ್

ಕಲಬುರಗಿ,ಆ.7:ಲಸಿಕೆಗಳಿಂದ ವಂಚಿತವಾದ 0.5 ವರ್ಷದ ಮಕ್ಕಳನ್ನು ಗುರುತಿಸಿ ಇಂದ್ರಧನುಷ್ ಅಭಿಯಾನದ ಮೂಲಕ ಲಸಿಕೆಗಳನ್ನು ನೀಡುವ ಕಾರ್ಯಕ್ರಮ ಇದಾಗಿದ್ದು, ರುಬೆಲ್ಲಾ ಧಡಾರದಂತ ರೋಗಳಿಂದ ಮಕ್ಕಳನ್ನು ರಕ್ಷಣೆ ಮಾಡಲು ಲಸಿಕೆ ನೀಡಲಾಗುತ್ತಿದ್ದು, ಪಾಲಕರು ತಪ್ಪದೆ ತಮ್ಮ ಮಕ್ಕಳಿಗೆ ಲಸಿಕೆ ಹಾಕಬೇಕೆಂದು ಎಂದು ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ತಿಳಿಸಿದರು.
ಸೋಮವಾರದಂದು ಕಲಬುರಗಿಯ ಶಿವಾಜಿನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ದುಬೈ ಕಾಲೋನಿ ಸರ್ಕಾರಿ ಯುನಾನಿ ಆಸ್ಪತ್ರೆಗಳಲ್ಲಿ 5-0 ವರ್ಷದ ಮಕ್ಕಳಿಗೆ ಡಿಸಿ ಬಿ ಫೌಜಿಯಾ ತರನ್ನಮ್ ಲಸಿಕೆ ಹಾಕುವುದರ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ಮಿಶನ ಇಂದ್ರಧನುಷ್ ಅಭಿಯಾನ ಜಿಲ್ಲೆಯಲ್ಲಿ ಮೂರು ಹಂತದಲ್ಲಿ ಲಸಿಕೆ ನೀಡಲಾಗುತ್ತಿದ್ದು, ಮೊದಲನೆ ಸುತ್ತು ಆಗಸ್ಟ್ 7 ರಿಂದ 12 ರವರೆಗೆ ನಡೆಯಲಿದೆ ಎರಡನೇ ಸುತ್ತು ಸೆಪ್ಟೆಂಬರ್ 11 ರಿಂದ 16 ರವರೆಗೆ ಲಸಿಕೆ ಹಾಕಲಾಗುವುದು ಹಾಗೂ ಮೂರನೇ ಸುತ್ತು ಅಕ್ಟೋಬರ್ 9 ರಿಂದ 14 ರವರೆಗೆ ಲಸಿಕಾ ಅಭಿಯಾನ ನಡೆಸಲಾಗುವುದು ಎಂದರು.
ಈಗಾಗಲೇ ಅನೇಕ ಸಭೆಗಳನ್ನು ನಡೆಸಿ ಎಲ್ಲಾ ಅಧಿಕಾರಿಗಳಿಗೆ ಮಾರ್ಗದರ್ಶನ ನೀಡಿದ್ದು, ಫಲಾನುಭವಿಗಳಿಗೆ ಜಾಗೃತಿ ಮೂಡಿಸುವ ಕೆಲಸ ಸಹ ಮಾಡಲಾಗಿದೆ. ದಢಾರ ರುಬೆಲ್ಲಾ ಲಸಿಕೆಯಿಂದ ಮಕ್ಕಳು ವಂಚಿತರಾಗದಂತೆ ನೋಡಿಕೊಳ್ಳಬೇಕು ಎಂದರು.
ಯಾವುದೇ ಮಕ್ಕಳಿಗೆ ದಡಾರ ರುಬೆಲ್ಲಾ ರೋಗಗಳ ಲಕ್ಷಣಗಳು (ಜ್ವರ, ದದ್ದು, ಮೂಗು ಸೋರುವಿಕೆ, ರೆಡ್ ಐಸ್)ಕಂಡು ಬಂದಲ್ಲಿ ಹತ್ತಿರದ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಬೇಕೆಂದರು.
ಪರಿಣಾಮಕಾರಿ ಮಿಶನ ಇಂದ್ರಧನುಷ್ 5.0 ರಲ್ಲಿ ನೀಡಲಾದ ಲಸಿಕೆಗಳ ವಿವರವನ್ನು ಯುವಿನ್ ಪೆÇೀರ್ಟಲನಲ್ಲಿ ದಾಖಲಿಸಿ ಇ-ಲಸಿಕಾಕರಣ ಪ್ರಮಾಣ ಪತ್ರ ಸೃಜಿಸಲಾಗುವುದು ಎಂದರು.
ಜಿಲ್ಲಾ ಪಂಚಾಯತ್ ಸಿ.ಇ.ಓ. ಭಂವರ್ ಸಿಂಗ್ ಮೀನಾ ಅವರು ಮಾತನಾಡಿ, ಎಲ್ಲಾ ತಾಯಿ ಕಾರ್ಡ್ ಎಲ್ಲಾ ಪಾಲಕರು ಕಡ್ಡಾಯವಾಗಿ ಒದಗಿಬೇಕು. ಅದರಲ್ಲಿ ಮಕ್ಕಳ ಬೆಳವಣಿಗೆ ಪೌಷ್ಠಿಕತೆ ಲಸಿಕೆಗಳ ಸಂಪೂರ್ಣ ಮಾಹಿತಿ ಇದ್ದು, ಪ್ರತಿಯೊಬ್ಬರು ತಪ್ಪದೇ ವಯಸ್ಸಿಗೆ ಅನುಗುಣವಾಗಿ ಲಸಿಕೆಗಳನ್ನು ಸಮೀಪದ ಸರಕಾರಿ ಆಸ್ಪತ್ರೆಯಲ್ಲಿ ಅಥವಾ ಅಂಗನವಾಡಿ ಕೇಂದ್ರಗಳಲ್ಲಿ ಪಡೆಯಬಹುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಆರ್.ಸಿ.ಹೆಚ್. ಅಧಿಕಾರಿ ಶರಣಬಸಪ್ಪ ಖ್ಯಾತನಾಳ ಅವರು ಪ್ರಸ್ತಾವಿಕವಾಗಿ ಮಾತನಾಡಿ, ಪರಿಣಾಮಕಾರಿ ಮಿಶನ್ ಇಂದ್ರ ಧನುμï 5.0 ಕಾರ್ಯಕ್ರಮ ದೇಶದಾದ್ಯಂತ ಕರ್ನಾಟಕ 31 ಜಿಲ್ಲೆಗಳಲ್ಲಿ ಅನುμÁ್ಠನ ಗೊಳಿಸಲಾಗುತ್ತಿದ್ದು, ಜಿಲ್ಲೆಯಲ್ಲಿ ಒಟ್ಟು ಜನಸಂಖ್ಯೆ 2900289 ಇದ್ದು, ಈ ಕಾರ್ಯಕ್ರಮದಲ್ಲಿ 2635 ಅರ್ಹ ಗರ್ಭಿಣಿಯರು, 2 ವರ್ಷದೊಳಗಿನ ಅರ್ಹ ಮಕ್ಕಳು 10068 ಹಾಗೂ 2 ರಿಂದ 5 ವರ್ಷದೊಳಗಿನ ಅರ್ಹ ಮಕ್ಕಳು 2584 ಫಲಾನುಭವಿಗಳಿಗೆ ಲಸಿಕೆಯನ್ನು ನೀಡಲಾಗುತ್ತದೆ. ಜಿಲ್ಲೆಯಲ್ಲಿ ಒಟ್ಟು 544 ಲಸಿಕಾ ತಂಡಗಳು, 87 ಸಂಚಾರಿ ತಂಡಗಳು ಹಾಗೂ 1538 ಲಸಿಕಾ ಸತ್ರಗಳನ್ನು ಆಯೋಜಿಸಿ, 1088 ಲಸಿಕಾ ತಂಡದ ಸಿಬ್ಬಂದಿ ಹಾಗೂ 217 ಮೇಲ್ವಿಚಾರಕರು ಕಾರ್ಯನಿರ್ವಹಿಸಲಿದ್ದಾರೆ ಎಂದು ಅವರು ಹೇಳಿದರು.
ಇದೇ ಸಂದರ್ಭದಲ್ಲಿ ಉತ್ತಮ ಗುಣಮಟ್ಟದ ಆಸ್ಪತ್ರೆಯೆಂದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿರುವುದರಿಂದ ಆಡಳಿತ ವೈದ್ಯಾಧಿಕಾರಿ ಡಾ.ಸಂಧ್ಯಾರಾಣಿ ಹಾಗೂ ಸಿಬ್ಬಂಧಿ ವರ್ಗದವರು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಸರ್ಜನ್ ಡಾ. ಅಂಬರಾಯ ರುದ್ರವಾಡಿ, ಆಡಳಿತಾಧಿಕಾರಿ ವೈದ್ಯಾಧಿಕಾರಿ ಭಾರತೀಯ ಮಕ್ಕಳ ವೈದ್ಯರ ಸಂಸ್ಥೆಯ ಕಲಬುರಗಿ ಘಟಕದ ಅಧ್ಯಕ್ಷರಾದ ಡಾ. ವಿನೋದ ಉಪಳಾಂವಕರ್, ಡಾ. ಸಂಧ್ಯಾರಾಣಿ, ಕ್ಷಯ ರೋಗ ನಿರ್ಮೂಲನೆ ಅಧಿಕಾರಿ ಡಾ. ಚಂದ್ರಕಾಂತ ನರಿಬೋಳ, ಪ್ರಾಂಶಪಾಲರಾದ ರವಿಕಾಂತಿ ಖ್ಯಾತನಾಳ, ಸುರೇಶ ಮೇಕಿನ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಗಳು ಆಶಾ ಕಾರ್ಯಕರ್ತರು ಅಂಗನವಾಡಿ ಕಾರ್ಯಕರ್ತರು, ಮೇಲ್ವಿಚಾರಕರು, ತಾಲೂಕಾ ವೈದ್ಯಾಧಿಕಾರಿಗಳು, ಸಾರ್ವಜನಿಕರು ಭಾಗವಹಿಸಿದ್ದರು.

ಪ್ರಾರಂಭದಲ್ಲಿ ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜಶೇಖರ ಮಾಲಿ ಅವರು ಸ್ವಾಗತಿಸಿದರು.