
ಸಂಜೆವಾಣಿ ವಾರ್ತೆ
ದಾವಣಗೆರೆ; ಆ. ೮: ಸರ್ಕಾರದ ನೂತನ ಹೆಜ್ಜೆ ಸಂಪೂರ್ಣ ಲಸಿಕೆ ಪಡೆಯುವುದು ಪ್ರತಿ ಮಗುವಿನ ಜನ್ಮಸಿದ್ಧ ಹಕ್ಕು ಎಂದು ಪ್ರಾಥಮಿಕ ಆರೋಗ್ಯ ಕೇಂದ್ರದ ಹಿರಿಯ ವೈದ್ಯಾಧಿಕಾರಿ ಡಾ.ವೆಂಕಟೇಶ್ ತಿಳಿಸಿದರು. ಆವರಗೊಳ್ಳದ ಉಪಕೇಂದ್ರದಲ್ಲಿ ಇಂದ್ರ ಧನುಷ್ ಅಭಿಯಾನ ಮತ್ತು ಸ್ತನ್ಯಪಾನ ಸಪ್ತಾಹ ಚುಚ್ಚುಮದ್ದು ಕಾರ್ಯಕ್ರಮ ಕುರಿತು ಮಾತನಾಡಿದರು. ಇಂದ್ರಧನುಷ್ ಅಭಿಯಾನಕ್ಕೆ ಇಂದೇ ಕೈ ಜೋಡಿಸಿ ಪ್ರಾಣ ಉಳಿಸುವ ಲಸಿಕೆಗಳನ್ನು ಎಲ್ಲಾ ಮಕ್ಕಳಿಗೆ ಕೊಡಿಸಿ. ಸಾರ್ವತ್ರಿಕ ಲಸಿಕಾಕರಣದಲ್ಲಿ ಮುಖ್ಯವಾಗಿ ತಾಯಂದಿರಿಗೆ ತಿಳಿದಿರಬೇಕಾದ ನಾಲ್ಕು ಮಾಹಿತಿಗಳನ್ನು ತಿಳಿಸಿದರು. ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಶ್ರೀಮತಿ ಇಮಾಂಬಿ ಲಸಿಕೆ ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಮಗು ಜನಿಸಿದ ಒಂದು ಗಂಟೆ ಒಳಗೆ ತಾಯಿಯ ಎದೆ ಹಾಲನ್ನು ನೀಡುವುದು ಹಾಗೂ ಆರು ತಿಂಗಳವರೆಗೆ ಎದೆ ಹಾಲನ್ನು ಮಾತ್ರ ನೀಡುವುದು, ಆರು ತಿಂಗಳ ನಂತರ ಎದೆ ಹಾಲಿನ ಜೊತೆಗೆ ಮನೆ ಪೂರಕ ಆಹಾರವನ್ನು ನೀಡುವುದರೊಂದಿಗೆ ಎರಡು ವರ್ಷಗಳ ಕಾಲ ಎದೆಹಾಲನ್ನು ಉಣಿಸುವುದು ಬಹು ಮುಖ್ಯವಾಗಿರುತ್ತದೆ. ತಾಯಿಯ ಹಾಲು ಶಿಶುಗಳಿಗೆ ಆರೋಗ್ಯಕರ ಬೆಳವಣಿಗೆ ಮತ್ತು ಅಗತ್ಯವಾದ ಪೆÇೀಷಕಾಂಶಗಳನ್ನು ಒಳಗೊಂಡಿರುತ್ತದೆ. ನೀವು ಎಷ್ಟು ಹೆಚ್ಚು ಹಾಲುಣಿಸುವಿರಿ ಅಷ್ಟು ಹೆಚ್ಚಿನ ಪ್ರಯೋಜನಗಳು ಮಗುವಿಗೆ ಸಿಗಲಿದೆ.ಎದೆ ಹಾಲು ಕುಡಿದ ಮಕ್ಕಳು ದೀರ್ಘಕಾಲದ ಸಾಂಕ್ರಾಮಿಕ ರೋಗಗಳಿಗೆ ಕಡಿಮೆ ಒಳಗಾಗುತ್ತಾರೆ. ಸ್ತನ್ಯಪಾನವು ತಾಯಿಗೆ ಸಂಭವಿಸುವ ಅಪಾಯವನ್ನು ಕಡಿಮೆ ಮಾಡುತ್ತದೆ. ಸ್ತನ ಮತ್ತು ಅಂಡಾಶಯದ ಕ್ಯಾನ್ಸರ್ ತಡೆಗಟ್ಟುತ್ತದೆ, ಹೃದಯ ರಕ್ತನಾಳದ ಕಾಯಿಲೆ ಮತ್ತು ಬೊಜ್ಜು ಮೂಳೆ ಸವೆತವನ್ನು ತಡೆಗಟ್ಟುತ್ತದೆ. ಈ ಎಲ್ಲಾ ಮಾಹಿತಿಯನ್ನು ತಿಳಿಸಿಕೊಟ್ಟರು. ಸಾರ್ವತ್ರಿಕ ಲಸಿಕಾಕರಣದಲ್ಲಿ ಡಿಜಿಟಲ್ ಪ್ರಮಾಣ ಪತ್ರವನ್ನು ಮಗುವಿನ ತಾಯಿಗೆ ನೀಡುವುದರೊಂದಿಗೆ U-Win ತಂತ್ರಾಂಶದ ಬಗ್ಗೆ ಮಾಹಿತಿ ಕೊಡಲಾಯಿತು.ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿ ವರ್ಗದವರು. ಆಶಾ ಕಾರ್ಯಕರ್ತರು ಅಂಗನವಾಡಿ ಕಾರ್ಯಕರ್ತರು ಮುಖ್ಯವಾಗಿ ಗರ್ಭಿಣಿಯರು ಹಾಗೂ ಮಗುವಿನ ತಾಯಂದಿರು ಗ್ರಾಮಸ್ಥರು ಈ ಸಭೆಯಲ್ಲಿ ಭಾಗವಹಿಸಿದ್ದರು.