ಇಂದು792 ಜನರಿಗೆ ಸೋಂಕು, 2 ಸಾವು

ಬೆಂಗಳೂರು, ಜ.10- ರಾಜ್ಯದಲ್ಲಿ ಇಂದು ಕೊರೊನಾ ಸೋಂಕು ಗಣನೀಯ ಇಳಿಕೆ ಕಂಡಿದೆ.
ಸಾವಿನ ಸಂಖ್ಯೆಯೂ ಕಡಿಮೆಯಾಗಿದೆ ಅಧಿಕ ಕರೋನಾ ಸಾವು ಸಂಭವಿಸುತ್ತಿದ್ದ ಬೆಂಗಳೂರಿನಲ್ಲಿ ಇಂದು ಒಂದು ಕೊರನಾ ಸಾವು ವರದಿಯಾಗಿಲ್ಲ ಕಳೆದ 24 ಗಂಟೆಗಳಲ್ಲಿ ಇಬ್ಬರು ಸೋಂಕಿತರು ಮೃತಪಟ್ಟಿದ್ದು ಮೈಸೂರು, ತುಮಕೂರಿನಲ್ಲಿ ತಲಾ ಒಂದು ಕೊರೋನಾ ಮರಣ ಸಂಭವಿಸಿದೆ.

ರಾಜಧಾನಿ ಬೆಂಗಳೂರಿನಲ್ಲೂ ಸೋಂಕಿತರ ಸಂಖ್ಯೆ ಇಳಿಕೆಯಾಗಿದೆ.
,ಇಂದು ರಾಜ್ಯದಲ್ಲಿ 792ಜನರಿಗೆ ಸೋಂಕು ದೃಡಪಟ್ಟಿದೆ ಕಳೆದ 24 ಗಂಟೆಗಳಲ್ಲಿ593ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ , ಇಂದು ಕೊರೊನಾದಿಂದ ಇಬ್ಬರು ಸೋಂಕಿತರು ಮೃತಪಟ್ಟಿದ್ದಾರೆ.
ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 927559ಕ್ಕೆ ಏರಿದೆ. ಇವರಲ್ಲಿ905751ಜನ ಸೋಂಕಿನಿಂದ ಗುಣಮುಖರಾಗಿದ್ದಾರೆ. ರಾಜ್ಯದಲ್ಲಿ ಒಟ್ಟಾರೆ 9649ಸಕ್ರಿಯ ಪ್ರಕರಣಗಳಿವೆ , ಇನ್ನು, ಇದುವರೆಗೂ 12140ಜನ ಕೊರೊನಾ ಕಾರಣದಿಂದ ಸಾವನ್ನಪ್ಪಿದ್ದರೆ, 202 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ರಾಜಧಾನಿ ಬೆಂಗಳೂರಿನಲ್ಲಿ ಸೋಂಕು ಗಣನೀಯ ಪ್ರಮಾಣದಲ್ಲಿ ತಗ್ಗಿದೆ. ಕಳೆದ 24 ಗಂಟೆಗಳಲ್ಲಿ 453 ಜನರಿಗೆ ಸೋಂಕು ಧೃಡಪಟ್ಟಿದೆ ಬೆಂಗಳೂರಿನಲ್ಲಿ ಇಂದು261 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಇಂದು ಬೆಂಗಳೂರಿನಲ್ಲಿ ಕೊರೋನಾ ದಿಂದ ಯಾವುದೇ ಸಾವು ಸಂಭವಿಸಿಲ್ಲ.
ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ 392581ಕ್ಕೆ ಏರಿದೆ. ಇದುವರೆಗೂ 382166 ಜನ ಗುಣಮುಖರಾಗಿದ್ದಾರೆ. 6068 ಸಕ್ರಿಯ ಪ್ರಕರಣಗಳಿವೆ ಇದುವರೆಗೂ ಬೆಂಗಳೂರಿನಲ್ಲಿ 4346ಜನ ಕೊರೊನಾಗೆ ಬಲಿಯಾಗಿದ್ದಾರೆ.
ಜಿಲ್ಲಾವಾರು ಸೋಂಕಿತರ ವಿವರ

ಬಾಗಲಕೋಟೆಯಲ್ಲಿ 00, ಬಳ್ಳಾರಿ 18, ಬೆಳಗಾವಿ12, ಬೆಂಗಳೂರು ಗ್ರಾಮಾಂತರ 22, ಬೀದರ್‌ 10, ಚಾಮರಾಜನಗರ 07, ಚಿಕ್ಕಬಳ್ಳಾಪುರ 27, ಚಿಕ್ಕಮಗಳೂರು 13, ಚಿತ್ರದುರ್ಗ 05, ದಕ್ಷಿಣ ಕನ್ನಡ 39, ದಾವಣಗೆರೆ 19, ಧಾರವಾಡ 09, ಗದಗದಲ್ಲಿ 01, ಹಾಸನದಲ್ಲಿ 23, ಹಾವೇರಿ 01, ಕಲಬುರಗಿ 18, ಕೊಡಗು15, ಕೋಲಾರ 13, ಕೊಪ್ಪಳ 03, ಮಂಡ್ಯ 03, ಮೈಸೂರು 20, ರಾಯಚೂರು 07, ರಾಮನಗರ 01, ಶಿವಮೊಗ್ಗ 05, ತುಮಕೂರು 16, ಉಡುಪಿ 06, ಉತ್ತರ ಕನ್ನಡ 13, ವಿಜಯಪುರ 06 ಹಾಗೂ ಯಾದಗಿರಿಯಲ್ಲಿ 07 ಪ್ರಕರಣಗಳು ಪತ್ತೆಯಾಗಿವೆ.