ಇಂದು751 ಜನರಿಗೆ ಸೊಂಕು, 5 ಸಾವು

ಬೆಂಗಳೂರು, ಜ. 12- ರಾಜ್ಯದಲ್ಲಿ ಕೊರೋನಾ ಸೋಂಕು ಇಳಿಮುಖವಾಗಿದೆ. ಹೊಸ ಸೋಂಕು ಪ್ರಕರಣಗಳು ಸಾವಿರಕ್ಕಿಂತ ಕಡಿಮೆ ಇದೆ ಬೆಂಗಳೂರಿನಲ್ಲೂ ಹೊಸ ಸೋಂಕು ಪ್ರಕರಣಗಳು 400ರ ಆಸುಪಾಸಿನಲ್ಲಿದೆ.
ಇಂದು ರಾಜ್ಯದಲ್ಲಿ_ ಹೊಸದಾಗಿ 751ಜನರಿಗೆಸೊಂಕು ದೃಢ ಪಟ್ಟಿದೆ.
ಇಂದು 1183 ಸೋಂಕಿತರು ಗುಣಮುಖರಾಗಿದ್ದಾರೆ ಹಾಗೆಯೇ ಸೋಂಕಿಗೆ 05ಸೋಂಕಿತರು ಮೃತಪಟ್ಟಿದ್ದಾರೆ.
ಬೆಂಗಳೂರಿನಲ್ಲಿ 2 ತುಮಕೂರು ಬೆಂಗಳೂರು ಗ್ರಾಮಾಂತರ ಮತ್ತು ಕಲ್ಬುರ್ಗಿ ಯಲ್ಲಿ ತಲಾ ಒಬ್ಬರು ಕೊರೊನಾದಿಂದ ಮೃತಪಟ್ಟಿದ್ದು ಉಳಿದ ಜಿಲ್ಲೆಗಳಲ್ಲಿ ಶೂನ್ಯ ಕರೋನಾ ಸಾವು ವರದಿಯಾಗಿದೆ.
ರಾಜ್ಯದಲ್ಲಿ ಒಟ್ಟು ಕೋವಿಡ್ ಸೋಂಕಿತರ ಸಂಖ್ಯೆ928806ಕ್ಕೆ ಏರಿಕೆಯಾಗಿದೆ.
ರಾಜ್ಯದಲ್ಲಿ ಒಟ್ಟು907729 ಕೋವಿಡ್ ಸೊಂಕಿತರು ಚೇತರಿಸಿಕೊಂಡಿದ್ದಾರೆ. ಮತ್ತು ಸದ್ಯಕ್ಕೆ ರಾಜ್ಯದಲ್ಲಿ ಒಟ್ಟು 8909 ಸಕ್ರಿಯ ಸೋಂಕು ಪ್ರಕರಣಗಳಿವೆ. ಸೋಂಕಿನಿಂದ ಈವರೆಗೆ 12149ಜನ ಸಾವಿಗೀಡಾಗಿದ್ದಾರೆ.
ರಾಜ್ಯದಲ್ಲಿ 203 ಸೋಂಕಿತರು ತುರ್ತು ನಿಗಾ ಘಟಕದಲ್ಲಿ ದಾಖಲುಗೊಂಡು ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.
ಬೆಂಗಳೂರಿನಲ್ಲಿ ಕಳೆದ 24 ಗಂಟೆಯಲ್ಲಿ 384ಮಂದಿಗೆ ಕೊರೊನಾ ಸೋಂಕು ಪ್ರಕರಣಗಳು ದೃಢಪಟ್ಟಿದ್ದು, ಒಟ್ಟಾರೆ ಸೋಂಕಿನ ಸಂಖ್ಯೆ 393247ಕ್ಕೆ ಏರಿಕೆಯಾಗಿದೆ.
ನಗರದಲ್ಲುಕಳೆದ24ಗಂಟೆಗಳಲ್ಲಿ ಸೊಂಕಿಗೆ 02ಮಂದಿಬಲಿಯಾಗಿದ್ದು , ಒಟ್ಟಾರೆ ಸಾವಿನ ಸಂಖ್ಯೆ 4350ಕ್ಕೆ ಏರಿಕೆಯಾಗಿದೆ.
ಇಂದು719ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ ಬೆಂಗಳೂರುನಲ್ಲಿ ಒಟ್ಟು5639 ಸಕ್ರಿಯ ಪ್ರಕರಣಗಳಿವೆ.

ಜಿಲ್ಲಾ ವಾರು ಸೊಂಕಿತರ ವಿವರ

ಬಾಗಲಕೋಟೆ 03ಬಳ್ಳಾರಿ 14 ಬೆಳಗಾವಿ12ಬೆಂಗಳೂರು ಗ್ರಾಮಾಂತರ 17ಬೀದರ್04 ಚಾಮರಾಜನಗರ 01 ಚಿಕ್ಕಬಳ್ಳಾಪುರ 53ಚಿಕ್ಕಮಗಳೂರು 10ಚಿತ್ರದುರ್ಗ 17ದಕ್ಷಿಣ ಕನ್ನಡ 24ದಾವಣಗೆರೆ 16ಧಾರವಾಡ 13 ಗದಗ 00ಹಾಸನ 32ಹಾವೇರಿ 02ಕಲಬುರಗಿ 20ಕೊಡಗು 04ಕೋಲಾರ 09ಕೊಪ್ಪಳ 01ಮಂಡ್ಯ 13ಮೈಸೂರು 35ರಾಯಚೂರು 07ರಾಮನಗರ 02ಶಿವಮೊಗ್ಗ 12ತುಮಕೂರು 20ಉಡುಪಿ 03ಉತ್ತರ ಕನ್ನಡ 10ವಿಜಯಪುರ 09ಯಾದಗಿರಿ 04