ಇಂದು 761 ಜನರಿಗೆ ಕೊರೊನಾ ಸೊಂಕು

ಬೆಂಗಳೂರು, ಜ.7- ರಾಜ್ಯದಲ್ಲಿ ಕೊರೋನಾ ಸೋಂಕು ಇಂದು ನಿನ್ನೆಗಿಂತ ಇಳಿಮುಖವಾಗಿದೆ. ಹೊಸ ಸೋಂಕು ಪ್ರಕರಣಗಳು ಸಾವಿರಕ್ಕಿಂತ ಕಡಿಮೆ ಇದೆ ಬೆಂಗಳೂರಿನಲ್ಲೂ ಹೊಸ ಸೋಂಕು ಪ್ರಕರಣಗಳು 400ರ ಆಸುಪಾಸಿನಲ್ಲಿದೆ.
ಇಂದು ರಾಜ್ಯದಲ್ಲಿ_ ಹೊಸದಾಗಿ 761 ಜನರಿಗೆಸೊಂಕು ದೃಢ ಪಟ್ಟಿದೆ.
ಇಂದು 812 ಸೋಂಕಿತರು ಗುಣಮುಖರಾಗಿದ್ದಾರೆ ಹಾಗೆಯೇ ಸೋಂಕಿಗೆ 07ಸೋಂಕಿತರು ಮೃತಪಟ್ಟಿದ್ದಾರೆ ಬೆಂಗಳೂರಿನಲ್ಲಿ ಐದು, ತುಮಕೂರು ಮತ್ತು ಕೋಲಾರದಲ್ಲಿ ತಲಾ ಒಬ್ಬರು ಕೊರೊನಾದಿಂದ ಮೃತಪಟ್ಟಿದ್ದು ಉಳಿದ ಜಿಲ್ಲೆಗಳಲ್ಲಿ ಶೂನ್ಯ ಕರೋನಾ ಸಾವು ವರದಿಯಾಗಿದೆ.
ರಾಜ್ಯದಲ್ಲಿ ಒಟ್ಟು ಕೋವಿಡ್ ಸೋಂಕಿತರ ಸಂಖ್ಯೆ924898ಕ್ಕೆ ಏರಿಕೆಯಾಗಿದೆ.
ರಾಜ್ಯದಲ್ಲಿ ಒಟ್ಟು903629 ಕೋವಿಡ್ ಸೊಂಕಿತರು ಚೇತರಿಸಿಕೊಂಡಿದ್ದಾರೆ. ಮತ್ತು ಸದ್ಯಕ್ಕೆ ರಾಜ್ಯದಲ್ಲಿ ಒಟ್ಟು 9119 ಸಕ್ರಿಯ ಸೋಂಕು ಪ್ರಕರಣಗಳಿವೆ. ಸೋಂಕಿನಿಂದ ಈವರೆಗೆ 12131ಜನ ಸಾವಿಗೀಡಾಗಿದ್ದಾರೆ.
ರಾಜ್ಯದಲ್ಲಿ 205 ಸೋಂಕಿತರು ತುರ್ತು ನಿಗಾ ಘಟಕದಲ್ಲಿ ದಾಖಲುಗೊಂಡು ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.

ಬೆಂಗಳೂರಿನಲ್ಲಿ ಕಳೆದ 24 ಗಂಟೆಯಲ್ಲಿ 399 ಮಂದಿಗೆ ಕೊರೊನಾ ಸೋಂಕು ಪ್ರಕರಣಗಳು ದೃಢಪಟ್ಟಿದ್ದು, ಒಟ್ಟಾರೆ ಸೋಂಕಿನ ಸಂಖ್ಯೆ 391184ಕ್ಕೆ ಏರಿಕೆಯಾಗಿದೆ.
ನಗರದಲ್ಲುಕಳೆದ24ಗಂಟೆಗಳಲ್ಲಿ ಸೊಂಕಿಗೆ 05ಮಂದಿಬಲಿಯಾಗಿದ್ದು , ಒಟ್ಟಾರೆ ಸಾವಿನ ಸಂಖ್ಯೆ 4341ಕ್ಕೆ ಏರಿಕೆಯಾಗಿದೆ.
ಇಂದು451ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ ಬೆಂಗಳೂರುನಲ್ಲಿ ಒಟ್ಟು5622 ಸಕ್ರಿಯ ಪ್ರಕರಣಗಳಿವೆ.

ಜಿಲ್ಲಾ ವಾರು ಸೊಂಕಿತರ ವಿವರ

ಬಾಗಲಕೋಟೆ 00ಬಳ್ಳಾರಿ 19 ಬೆಳಗಾವಿ16ಬೆಂಗಳೂರು ಗ್ರಾಮಾಂತರ 13ಬೀದರ್06 ಚಾಮರಾಜನಗರ 05 ಚಿಕ್ಕಬಳ್ಳಾಪುರ 20ಚಿಕ್ಕಮಗಳೂರು 05ಚಿತ್ರದುರ್ಗ 04ದಕ್ಷಿಣ ಕನ್ನಡ 37ದಾವಣಗೆರೆ 13ಧಾರವಾಡ 16 ಗದಗ 00ಹಾಸನ 25ಹಾವೇರಿ 03ಕಲಬುರಗಿ 17ಕೊಡಗು 08ಕೋಲಾರ 16ಕೊಪ್ಪಳ 02ಮಂಡ್ಯ 07ಮೈಸೂರು 45ರಾಯಚೂರು 02ರಾಮನಗರ 02ಶಿವಮೊಗ್ಗ 23ತುಮಕೂರು 25ಉಡುಪಿ 04ಉತ್ತರ ಕನ್ನಡ 12ವಿಜಯಪುರ 15 ಹಾಗುಯಾದಗಿರಿ 02.