ಇಂದು 746 ಜನರಿಗೆ ಸೋಂಕು, ಮೂರು ಸಾವು

ಬೆಂಗಳೂರು, ಜ.13- ರಾಜ್ಯದಲ್ಲಿ ಇಂದು ಕೊರೊನಾ ಸೋಂಕಿನ ಇಳಿಕೆಯ ಹಾದಿ ಮುಂದುವರೆದಿದೆ ಹಾಗೆಯೇ ಸೋಂಕಿನಿಂದ ಗುಣಮುಖರಾಗುವ ಸಂಖ್ಯೆಯು ಏರುಮುಖವಾಗಿ ಸಾಗಿದ್ದು ರಾಜಧಾನಿ ಬೆಂಗಳೂರು ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ಸೋಂಕಿತರ ಸಂಖ್ಯೆಯಲ್ಲಿ ಇಳಿಮುಖವಾಗಿದೆ.
ರಾಜ್ಯದಲ್ಲಿ ಹಲವು ದಿನಗಳಿಂದ ಸೋಂಕಿತರ ಸಂಖ್ಯೆ ಸಾವಿರಕ್ಕಿಂತ ಕಡಿಮೆ ಇದ್ದು ಬೆಂಗಳೂರಿನಲ್ಲೂ ಸೋಂಕಿತರ ಸಂಖ್ಯೆ 450ರ ಆಸುಪಾಸಿನಲ್ಲಿದೆ.
ಇಂದು ರಾಜ್ಯದಲ್ಲಿ 746ಜನರಿಗೆ ಸೋಂಕು ದೃಡಪಟ್ಟಿದೆ ಕಳೆದ 24 ಗಂಟೆಗಳಲ್ಲಿ765 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ , ಇಂದು ಕೊರೊನಾದಿಂದ 03 ಸೋಂಕಿತರು ಮೃತಪಟ್ಟಿದ್ದಾರೆ ಬೆಂಗಳೂರು ನಗರದಲ್ಲಿ ಇಬ್ಬರು ಉತ್ತರ ಕನ್ನಡ ಜಿಲ್ಲೆಯಲ್ಲಿ ಒಬ್ಬ ಸೋಂಕಿತರು ಕೊರೊನಾದಿಂದ ಮೃತಪಟ್ಟಿದ್ದು ಉಳಿದ ಜಿಲ್ಲೆಗಳಲ್ಲಿ ಕರೋನಾ ಮರಣ ಸಂಭವಿಸಿಲ್ಲ.
ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 929552ಕ್ಕೆ ಏರಿದೆ. ಇವರಲ್ಲಿ908494 ಜನ ಸೋಂಕಿನಿಂದ ಗುಣಮುಖರಾಗಿದ್ದಾರೆ. ರಾಜ್ಯದಲ್ಲಿ ಒಟ್ಟಾರೆ 8887ಸಕ್ರಿಯ ಪ್ರಕರಣಗಳಿವೆ , ಇನ್ನು, ಇದುವರೆಗೂ 12152 ಜನ ಕೊರೊನಾ ಕಾರಣದಿಂದ ಸಾವನ್ನಪ್ಪಿದ್ದರೆ, 193 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ರಾಜಧಾನಿ ಬೆಂಗಳೂರಿನಲ್ಲಿ ಸೋಂಕು ಗಣನೀಯ ಪ್ರಮಾಣದಲ್ಲಿ ತಗ್ಗಿದೆ. ಕಳೆದ 24 ಗಂಟೆಗಳಲ್ಲಿ 426 ಜನರಿಗೆ ಸೋಂಕು ಧೃಡಪಟ್ಟಿದೆ ಬೆಂಗಳೂರಿನಲ್ಲಿ ಇಂದು385 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಇಂದು ಬೆಂಗಳೂರಿನಲ್ಲಿ 02 ಸೋಂಕಿತರು ಸಾವನ್ನಪ್ಪಿದ್ದಾರೆ.
ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ 393673ಕ್ಕೆ ಏರಿದೆ. ಇದುವರೆಗೂ 383642 ಜನ ಗುಣಮುಖರಾಗಿದ್ದಾರೆ. 5678 ಸಕ್ರಿಯ ಪ್ರಕರಣಗಳಿವೆ ಇದುವರೆಗೂ ಬೆಂಗಳೂರಿನಲ್ಲಿ 4352 ಜನ ಕೊರೊನಾಗೆ ಬಲಿಯಾಗಿದ್ದಾರೆ.
ಜಿಲ್ಲಾವಾರು ಸೋಂಕಿತರ ವಿವರ

ಬಾಗಲಕೋಟೆಯಲ್ಲಿ 07 ಬಳ್ಳಾರಿ 17ಬೆಳಗಾವಿ 18 ಬೆಂಗಳೂರು ಗ್ರಾಮಾಂತರ 18 ಬೀದರ್‌ 00ಚಾಮರಾಜನಗರ 05 ಚಿಕ್ಕಬಳ್ಳಾಪುರ 39ಚಿಕ್ಕಮಗಳೂರು 10 ಚಿತ್ರದುರ್ಗ24ದಕ್ಷಿಣ ಕನ್ನಡ 20 ದಾವಣಗೆರೆ 24 ಧಾರವಾಡ 05 ಗದಗದಲ್ಲಿ 03ಹಾಸನದಲ್ಲಿ 18 ಹಾವೇರಿ 00 ಕಲಬುರಗಿ 16 ಕೊಡಗು09 ಕೋಲಾರ 05ಕೊಪ್ಪಳ 00ಮಂಡ್ಯ 02ಮೈಸೂರು31 ರಾಯಚೂರು 04ರಾಮನಗರ 05 ಶಿವಮೊಗ್ಗ 15 ತುಮಕೂರು 12 ಉಡುಪಿ 04ಉತ್ತರ ಕನ್ನಡ 05 ವಿಜಯಪುರ 03ಹಾಗೂ ಯಾದಗಿರಿಯಲ್ಲಿ 01ಪ್ರಕರಣಗಳು ಪತ್ತೆಯಾಗಿವೆ.