ಇಂದು 6976ಜನರಿಗೆ ಸೋಂಕು; 35ಸಾವು

ಬೆಂಗಳೂರು, ಏ.7- ಕೊರೊನಾ ಸೋಂಕು ಪ್ರಕರಣಗಳ ಸತತ ಏರಿಕೆ ಮುಂದುವರೆದಿದ್ದು ಹೊಸ ಪ್ರಕರಣಗಳು ಏಳು ಸಾವಿರ ಸನಿಹದಲ್ಲಿದೆ.
ಬೆಂಗಳೂರು ನಗರದಲ್ಲೂ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಬೆಂಗಳೂರು ನಗರದಲ್ಲಿ ಸೋಂಕಿತರ ಸಂಖ್ಯೆ ಐದು ಸಾವಿರ ಹತ್ತಿರದಲ್ಲಿದೆ.
ಕೊರೊನಾದಿಂದ ಸಾವನ್ನಪ್ಪುವ ಸಂಖ್ಯೆಯು ಹೆಚ್ಚಾಗಿದೆ ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ 35 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ.

ಬೆಂಗಳೂರು ನಗರದಲ್ಲಿ 25 ಸೋಂಕಿತರು ಮೃತಪಟ್ಟಿದ್ದಾರೆ ಕಲ್ಬುರ್ಗಿ, ಮೈಸೂರಿನಲ್ಲಿ ತಲಾ ಇಬ್ಬರು ಸೋಂಕಿತರು ಕೊರೊನಾದಿಂದ ಮೃತಪಟ್ಟಿದ್ದಾರೆ. ಹಾಗೆಯೇ ಬಳ್ಳಾರಿ ,ಬೀದರ್, ದಕ್ಷಿಣ ಕನ್ನಡ ,ಹಾಸನ ,ತುಮಕೂರು ಹಾಗೂ ವಿಜಯಪುರದಲ್ಲಿ ತಲಾ ಒಬ್ಬರು ಕೊರೊನಾದಿಂದ ಮೃತಪಟ್ಟಿದ್ದಾರೆ.
ಉಳಿದ ಜಿಲ್ಲೆಗಳಲ್ಲಿ ಕೊರೊನಾದಿಂದ ಮರಣ ಸಂಭವಿಸಿಲ್ಲ. ಸಕ್ರಿಯ ಪ್ರಕರಣಗಳ ಸಂಖ್ಯೆಯೂ ಏರಿಕೆಯಾಗುತ್ತಿದ್ದು ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಐವತ್ತು ಸಾವಿರ ಸಮೀಪದಲ್ಲಿದೆ

ಇಂದು ರಾಜ್ಯದಲ್ಲಿ6976 ಜನರಿಗೆಸೊಂಕು ದೃಢ ಪಟ್ಟಿದೆ. ಇಂದು2794ಸೋಂಕಿತರು ಗುಣಮುಖರಾಗಿದ್ದಾರೆ ಹಾಗೆಯೇ35ಸೋಂಕಿತರು ಮೃತಪಟ್ಟಿದ್ದಾರೆ
ರಾಜ್ಯದಲ್ಲಿ ಒಟ್ಟು ಕೋವಿಡ್ ಸೋಂಕಿತರ ಸಂಖ್ಯೆ1033560ಕ್ಕೆ ಏರಿಕೆಯಾಗಿದೆ.
ರಾಜ್ಯದಲ್ಲಿ ಒಟ್ಟು971556 ಕೋವಿಡ್ ಸೊಂಕಿತರು ಚೇತರಿಸಿಕೊಂಡಿದ್ದಾರೆ. ಮತ್ತು ಸದ್ಯಕ್ಕೆ ರಾಜ್ಯದಲ್ಲಿ ಒಟ್ಟು 49254 ಸಕ್ರಿಯ ಸೋಂಕು ಪ್ರಕರಣಗಳಿವೆ. ಸೋಂಕಿನಿಂದ ಈವರೆಗೆ 12731 ಜನ ಸಾವಿಗೀಡಾಗಿದ್ದಾರೆ.
ರಾಜ್ಯದಲ್ಲಿ 353 ಸೋಂಕಿತರು ತುರ್ತು ನಿಗಾ ಘಟಕದಲ್ಲಿ ದಾಖಲುಗೊಂಡು ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.

ಬೆಂಗಳೂರಿನಲ್ಲಿ ಕಳೆದ 24 ಗಂಟೆಯಲ್ಲಿ 4991 ಮಂದಿಗೆ ಕೊರೊನಾ ಸೋಂಕು ಪ್ರಕರಣಗಳು ದೃಢಪಟ್ಟಿದ್ದು, ಒಟ್ಟಾರೆ ಸೋಂಕಿತರ ಸಂಖ್ಯೆ 460016ಕ್ಕೆ ಏರಿಕೆಯಾಗಿದೆ.
ನಗರದಲ್ಲಿ ಕಳೆದ24ಗಂಟೆಗಳಲ್ಲಿ ಸೊಂಕಿಗೆ 25 ಸೋಂಕಿತರು ಬಲಿಯಾಗಿದ್ದು , ಬೆಂಗಳೂರಿನಲ್ಲಿ ಒಟ್ಟಾರೆ ಸಾವಿನ ಸಂಖ್ಯೆ4718ಕ್ಕೆ ಏರಿಕೆಯಾಗಿದೆ.
ಇಂದು17812 ಮಂದಿ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ ಬೆಂಗಳೂರಿನಲ್ಲಿ ಇದುವರೆಗೂ419508 ಸೋಂಕಿತರು ಗುಣಮುಖರಾಗಿದ್ದಾರೆ ಬೆಂಗಳೂರುನಲ್ಲಿ ಒಟ್ಟು35789 ಸಕ್ರಿಯ ಪ್ರಕರಣಗಳಿವೆ.

ಜಿಲ್ಲಾ ವಾರು ಸೊಂಕಿತರ ವಿವರ

ಬಾಗಲಕೋಟೆ 13, ಬಳ್ಳಾರಿ 49, ಬೆಳಗಾವಿ 101, ಬೆಂಗಳೂರು ಗ್ರಾಮಾಂತರ 70, ಬೀದರ್ 214, ಚಾಮರಾಜನಗರ 39, ಚಿಕ್ಕಬಳ್ಳಾಪುರ 37, ಚಿಕ್ಕಮಗಳೂರು 38, ಚಿತ್ರದುರ್ಗ 20, ದಕ್ಷಿಣ ಕನ್ನಡ 122, ದಾವಣಗೆರೆ 20, ಧಾರವಾಡ 88, ಗದಗ 11, ಹಾಸನ 90, ಹಾವೇರಿ 12, ಕಲಬುರಗಿ 205, ಕೊಡಗು 10, ಕೋಲಾರ 29, ಕೊಪ್ಪಳ 24, ಮಂಡ್ಯ 58, ಮೈಸೂರ 243, ರಾಯಚೂರು 28, ರಾಮನಗರ 28, ಶಿವಮೊಗ್ಗ 34, ತುಮಕೂರು 204, ಉಡುಪಿ 89, ಉತ್ತರ ಕನ್ನಡ 35, ವಿಜಯಪುರ 50, ಯಾದಗಿರಿ 34.