ಇಂದು 4,373 ಸೋಂಕು ದೃಢ

ಬೆಂಗಳೂರು, ಏ.೮- ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಎರಡನೇ ಅಲೆ ಮುಂದುವರೆದಿದ್ದು, ಗುರುವಾರ ಮಧ್ಯಾಹ್ನ ವೇಳೆಗೆ ೪,೩೭೩ ಜನರಲ್ಲಿ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ.
ನಿನ್ನೆಯಷ್ಟೇ ೫ ಸಾವಿರ ಗಡಿ ತಲುಪಿದ್ದ, ಕೋವಿಡ್ ಪ್ರಕರಣ ಇಂದು ಕೊಂಚ ಇಳಿಕೆಯಾಗಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆಯೂ ೩೫,೭೮೯ ಕ್ಕೆ ಏರಿಕೆಯಾಗಿದೆ.ಇನ್ನೂ, ಕಳೆದ ೨೪ ಗಂಟೆಯಲ್ಲಿ ೨೫ ಜನರನ್ನು ಕೋವಿಡ್ ಬಲಿ ತೆಗೆದುಕೊಂಡಿತ್ತು.
ಕೋವಿಡ್‌ನಿಂದ ಸಾವನ್ನಪ್ಪುತ್ತಿರುವ ಜನರಲ್ಲಿ ೫೦ ವರ್ಷ ಮೇಲ್ಪಟ್ಟವರೇ ಹೆಚ್ಚಿದ್ದಾರೆ. ೭೦ ವರ್ಷ ಮೇಲ್ಪಟ್ಟವರ ಮರಣ ಪ್ರಮಾಣ ಶೇ೩೪ರಷ್ಟು ಇದ್ದು, ೬೦ ರಿಂದ ೬೯ ವರ್ಷದವರ ಮರಣ ಪ್ರಮಾಣ ಶೇ.೨೭ರಷ್ಟು ೫೦-೫೯ ವರ್ಷದವರ ಮರಣ ಪ್ರಮಾಣ ಶೇ.೨೧ರಷ್ಟು, ೪೦ ವರ್ಷ ಮೇಲ್ಪಟ್ಟವರ ಮರಣ ಪ್ರಮಾಣ ಶೇ.೧೧ರಷ್ಟು ಮೂವತ್ತು ವರ್ಷ ಮೇಲ್ಪಟ್ಟವರ ಮರಣ ಪ್ರಮಾಣ ಶೇ.೫ ರಷ್ಟಿದೆ.
ಸದ್ಯ ಲಸಿಕೆ ವಿತರಣೆ ಕೂಡಾ ೪೫ ವರ್ಷ ಮೇಲ್ಪಟ್ಟವರಿಗೆ ನೀಡುತ್ತಿದ್ದು, ಹೆಚ್ಚು ಕೋವಿಡ್ ಪ್ರಕರಣ ಕಂಡುಬರುವ ಪ್ರದೇಶಗಳಲ್ಲಿ ತೀವ್ರವಾಗಿ ಬಿಬಿಎಂಪಿ ವ್ಯಾಕ್ಸಿನೇಷನ್ ಡ್ರೈವ್ ನಡೆಸುತ್ತಿದೆ. ಆಶಾ ಕಾರ್ಯಕರ್ತೆಯರ ಮೂಲಕ ವಯಸ್ಕರನ್ನು ಪ್ರಾಥಮಿಕ ಹೆಲ್ತ್ ಸೆಂಟರ್?ಗಳಿಗೆ ಕರೆತಂದು ಲಸಿಕೆ ನೀಡಲಾಗುತ್ತಿದೆ ಎಂದು ಪಾಲಿಕೆ ಮೂಲಗಳು ತಿಳಿಸಿವೆ.