ಇಂದು 3,252 ಸೋಂಕು ಪ್ರಕರಣ

ಬೆಂಗಳೂರು, ಜೂ.೪- ರಾಜಧಾನಿ ಬೆಂಗಳೂರಿನಲ್ಲಿ ಕೋವಿಡ್ ಎರಡನೇ ಅಲೆಯಲ್ಲಿ ಪ್ರಕರಣ ಸಂಖ್ಯೆಯಲ್ಲಿ ಏರಿಳಿತ ಕಂಡು ಬರುತ್ತಿದ್ದು, ಶುಕ್ರವಾರ ೩,೨೫೨ ಹೊಸ ಕೋವಿಡ್ ಸೋಂಕಿನ ಪ್ರಕರಣಗಳು ವರದಿಯಾಗಿದೆ.
ನಗರದ ಮಹಾದೇವಪುರದಲ್ಲಿ ೪೬೧, ಪೂರ್ವ ವಲಯ ೪೩೫, ಬೊಮ್ಮನಹಳ್ಳಿ ೩೫೬, ದಾಸರಹಳ್ಳಿ ೯೪, ಆರ್‌ಆರ್ ನಗರ ೨೫೮, ದಕ್ಷಿಣ ವಲಯ ೨೪೪, ಪಶ್ಚಿಮ ವಲಯ ೨೭೦, ಯಲಹಂಕದಲ್ಲಿ ೨೫೭ ಜನರು ಸೇರಿದಂತೆ ಒಟ್ಟು ೩೨೫೨ ಜನರಿಗೆ ಕೋವಿಡ್ ಸೋಂಕು ತಗುಲಿದೆ ಎಂದು ಬಿಬಿಎಂಪಿ ತಿಳಿಸಿದೆ.
ಒಟ್ಟಾರೆ ನಗರ ವ್ಯಾಪ್ತಿಯಲ್ಲಿ ಪಾಸಿಟಿವಿಟಿ ಪ್ರಮಾಣ ಶೇ.೭.೫೮ಕ್ಕೆ ಇಳಿಕೆಯಾಗಿದ್ದು, ಮರಣ ಪ್ರಮಾಣ ಶೇ.೬.೧೦ರಷ್ಟು ಇದೆ.
ಇನ್ನು, ಕಳೆದ ೨೪ ಗಂಟೆಗಳಲ್ಲಿ ನಗರದಲ್ಲಿ ೩,೫೩೩ ಪ್ರಕರಣಗಳು ಪತ್ತೆಯಾಗಿದ್ದವು. ೩೪೭ ಮಂದಿ ಮೃತಪಟ್ಟಿದ್ದರು. ಈವರೆಗೆ ೧,೩೪,೩೮೪ ಸಕ್ರಿಯ ಪ್ರಕರಣಗಳಿವೆ ಎಂದು ಆರೋಗ್ಯ ಇಲಾಖೆ ಮಾಹಿತಿ ಹಂಚಿಕೊಂಡಿದೆ.