ಇಂದು ಹಾಲಾಪುರ ಗ್ರಾಮ : ಕರಿಯಪ್ಪ ತಾತನ ಜಾತ್ರೆ ಮಹೋತ್ಸವ ಭವ್ಯ ಮೆರವಣಿಗೆ

ಕವಿತಾಳ.ಆ.೦೨- ಸಮೀಪ ಹಾಲಪುರದ ಗನ ಮಹಿಮೆ ಕರಿಯಪ್ಪ ತಾತನ ಜಾತ್ರಾ ಮಹೋತ್ಸವ ಇಂದು ೨-೮- ೨೦೨೨ -ರಂದು ಅದ್ದೂರಿಯಾಗಿ ರಥೋತ್ಸವ ಜರಗಲಿದ್ದು ಮತ್ತು ಪ್ರತಿ ವರ್ಷ ನಾಗರ ಪಂಚಮಿ ಎಂದು ಬೆಳಗ್ಗೆ ೮-೩೦-ಕ್ಕೆ ಹುಚ್ಚಯ್ಯ ಕಾರ್ಯಕ್ರಮ ಇರುತ್ತದೆ ಆದರೆ ಈ ವರ್ಷ ಭಕ್ತರ ಬಹುದಿನದ ಆಸೆಯಂತೆ ರಥೋತ್ಸವ ಮಾಡುತ್ತಿರುವುದು ಸಂತೋಷದ ವಿಷಯ ಹಾವು ಚೋಳು ಕಡಿದವರಿಗೆ ಕಡಿಮೆ ಆಗುತ್ತದೆ ಎನ್ನುವ ನಂಬಿಕೆ ಇದೆ ಎಂದು ಗ್ರಾಮದ ಸಿದ್ದಾರ್ಥ ಪಾಟೀಲ್ ಹೇಳಿದರು.
ದೈವ ಪವಾಡ ಪುರುಷನ ಚರಿತ್ರೆ ಕರಿಯಪ್ಪ ತಾತನವರು ಮೂಲತಃ ಬಳ್ಳಾರಿ ಜಿಲ್ಲಾ ಸಿರುಗುಪ್ಪ ತಾಲೂಕಿನ ಹಚ್ಚೋಳ್ಳಿ ಗ್ರಾಮದವರು ತಂದೆ ರಾಮಪ್ಪ ತಾಯಿ ಹಂಪಮ್ಮ ಉದರದಲ್ಲಿ ಜನಿಸಿದರು ಚಿಕ್ಕ ಬಾಲಕ ೧೨ನೇ ವಯಸ್ಸಿನಲ್ಲಿ ಮನೆಯವರಿಗೆ ಹೇಳದೆ ಮನೆ ಬಿಟ್ಟು ಕಾಡು ಸಿದ್ದಪ್ಪಯ್ಯನ ಸಂಗಡ ಗಿರೊಂದಿಗೆ ಮನೆ ಬಿಟ್ಟು ಹೋದವರು ತಿರುಗಿ ಮದುವೆಯ ವಯಸ್ಸಿಗೆ ಪುನಃ ಹಚ್ಚೋಳ್ಳಿಗೆ ಬಂದರು ಬಹಳ ದಿನಗಳ ನಂತರ ಬಂದ ಮಗನನ್ನು ನೋಡಿ ಪ್ರೀತಿಯಿಂದ ತಂದೆ-ತಾಯಿ ವೆಂಕಮ್ಮ ಎನ್ನುವ ಹೆಣ್ಣು ಮಗಳ ಜೊತೆಗೆ ಮದುವೆ ಮಾಡಿಸಿದರು.
ಹೊಲದ ಕೆಲಸಕ್ಕೆ ಹೋದ ಕರಿಯಪ್ಪ ತಾತ ಮರಳಿ ಮನೆಗೆ ಬರಲಿಲ್ಲ ಆತ ಸಂಸಾರವನ್ನು ತ್ಯಜಿಸಿ ನಾಗರದ ಗಡ್ಡಿ ಮಠಕ್ಕೆ ಬಂದು ಸೇವೆ ಮಾಡುತ್ತಾ ಭಂಡಾರಿ ಗಿರಿಯಪ್ಪನ ಮಾತಿನಂತೆ ರಾಯಚೂರು ಜಿಲ್ಲೆಯ ಕಲ್ಮಲಕ್ಕೆ ಬಂದು ನೆಲೆಸಿದರು ಅಲ್ಲಿ ಇವರು ಹಾವು ಚೋಳು ವಿಷ ಜಂತು ಕಡಿದು ಸಾಯುವರನ್ನು ಬದುಕಿಸಿ ಮೃತ್ಯುಂಜಯನಾದ ಇಂಥ ಪವಾಡ ಪುರುಷನು ಯಮನಪ್ಪ ನಾಯಕ ಮೂಲಕ ಹಾಲಪುರ ಗ್ರಾಮಕ್ಕೆ ಬಂದು ಗುರು ಹಿರಿಯರ ಅಪ್ಪಣೆಯಂತೆ ಆಲಾಪುರದಲ್ಲಿ ಬಂದು ಉಳಿದುಕೊಂಡಾಗ ಅನೇಕ ಜನರು ಈತನ ಬಗ್ಗೆ ಮಾತನಾಡಲು ಸುರು ಮಾಡಿದರು ಇಂಥವರಿಗೆ ನನ್ನ ಪವಾಡ ತೋರಿಸಲೇಬೇಕೆಂದು ಅನೇಕ ಜನರೊಂದಿಗೆ ಪ್ರತ್ಯಕ್ಷವಾಗಿ ನೀರಿನಲ್ಲಿ ಬತ್ತಿಹಾಕಿ ದೀಪ ಬೆಳಗಿಸಿದ ಕೀರ್ತಿ ಇವರ ದೊಡ್ಡದಾಗಿತ್ತು.
ಸುತ್ತಮುತ್ತಲಿನ ಗ್ರಾಮದ ಜನರು ಇವರ ಪವಾಡವನ್ನು ಮೆಚ್ಚಿ ಹಾವು ಕಡಿಸಿ ಕೊಂಡವರು ಚೋಳು ಕಡಿಸಿಕೊಂಡವರು ಸಂತಾನ ಭಾಗ್ಯ ಸಂಪತ್ತು ಬೇಡಿ ಬಂದವರಿಗೆ ಕರುಣಾಮಯಾಗಿದ್ದಾರೆ ಇಂದು ಮಂಗಳವಾರ ೨-೮- ೨೦೨೨ ರಂದು ಬೆಳಿಗ್ಗೆ ಹುಚ್ಚಯ್ಯ ಕಾರ್ಯಕ್ರಮ ೫-೩೦-ಕ್ಕೆ ರಥೋತ್ಸವ ಕಾರ್ಯಕ್ರಮ ಜರಗಲಿದೆ ಈ ಕಾರ್ಯಕ್ರಮಕ್ಕೆ ಎಲ್ಲಾ ಭಕ್ತಾದಿಗಳು ಸೇರಿಕೊಳ್ಳಬೇಕೆಂದು ಸಣ್ಣ ಕರಿಯಪ್ಪ ಕಾಂಗ್ರೆಸ್ ಮುಖಂಡರು ಹಾಗೂ ಸೇವಾ ಸಮಿತಿ ಸದಸ್ಯರು ಹೇಳಿದರು.