ಇಂದು ಸಿರಿಗೇರಿಯಲ್ಲಿ ಸಾಂಸ್ಕ-ತಿಕ ಕಾರ್ಯಕ್ರಮ


ಸಂಜೆವಾಣಿ ವಾರ್ತೆ
ಸಿರಿಗೇರಿ ಫೆ25. ಇಂದು ಸಂಜೆ ಸಿರಿಗೇರಿ ಗ್ರಾಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಹಾಗೂ ಸ್ಥಳೀಯ ಧಾತ್ರಿ ರಂಗ ಸಂಸ್ಥೆ ಇವರ ಸಹ ಪ್ರಾಯೋಜಕತ್ವದಲ್ಲಿ, ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಸೀತಾಪಹರಣ ನಾಟಕ ಪ್ರದರ್ಶನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಗ್ರಾಮದ ಶ್ರೀನಾಗನಾಥೇಶ್ವರ ದೇವಸ್ಥಾನದ ಆವರಣದಲ್ಲಿ ಸಂಜೆ 6-30ಕ್ಕೆ ಕಾರ್ಯಕ್ರಮ ನಡೆಯಲಿದೆ. ಸದರಿ ಕಾರ್ಯಕ್ರಮದಲ್ಲಿ ರಾಜ್ಯದ ಸಾರಿಗೆ ಇಲಾಖೆ, ಪರಿಶಿಷ್ಟವರ್ಗಗಗಳ ಕಲ್ಯಾಣ ಸಚಿವರು, ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಶ್ರೀರಾಮುಲು ರವರು ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದಾರೆಂದು, ಸಿರುಗುಪ್ಪ ಶಾಸಕರಾದ ಎಂ.ಎಸ್.ಸೋಮಲಿಂಗಪ್ಪ, ತಹಶೀಲ್ದಾರ್ ಮಂಜುನಾಥಸ್ವಾಮಿ ಹಾಗೂ ಸ್ಥಳೀಯ ಪ್ರಜಾಪ್ರತಿನಿಧಿಗಳು, ಮುಖಂಡರು ಭಾಗಿಯಾಗಲಿದ್ದಾರೆ. ಈ ಕಾರ್ಯಕ್ರಮಕ್ಕೆ ಸಿರಿಗೇರಿ ಮತ್ತು ಸುತ್ತಲಿನ ಎಲ್ಲಾ ಗ್ರಾಮಗಳ ಕಲಾಸಕ್ತರು, ಹಿರಿಯರು, ಯುವಕರು ಬಂದು ಪಾಲ್ಗೊಳ್ಳಬೇಕೆಂದು ಧಾತ್ರಿ ರಂಗ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ, ನಾಟಕ ಮತ್ತು ಸಿನಿಮಾ ಕಲಾವಿದ ಸಿರಿಗೇರಿಯ ನಿನಾಸಂ ಮಂಜುನಾಥ ಮಾಹಿತಿ ನೀಡಿದ್ದಾರೆ.