
ಸಂಜೆವಾಣಿ ವಾರ್ತೆ
ದಾವಣಗೆರೆ.ಆ.೧೮: ನಗರದ ಪಿಜೆ ಬಡಾವಣೆಯಲ್ಲಿನ ವಿಶ್ವೇಶ್ವರಯ್ಯ ಪಾರ್ಕ್ ಸಮೀಪದ 4ನೇ ಮುಖ್ಯ ರಸ್ತೆ, 9ನೇ ತಿರುವಿನಲ್ಲಿರುವ ಶ್ರೀ ಬನ್ನಿ ಮಹಾಂಕಾಳಿ ದೇವಸ್ಥಾನದ 9ನೇ ವಾರ್ಷಿಕೋತ್ಸವವನ್ನು ಇಂದು ಸಂಜೆ 6ಕ್ಕೆ ನಡೆಸಲಾಗುವುದು. ಈ ವೇಳೆ ವಿಶೇಷ ಪೂಜಾ ಕಾರ್ಯಕ್ರಮ, ಅಭಿಷೇಕ ಸೇರಿದಂತೆ ಇನ್ನಿತರ ವಿಧಿವಿಧಾನಗಳ ಜತೆ ಇನ್ನಿತರ ಕಾರ್ಯಕ್ರಮಗಳನ್ನು ನಡೆಸಲಾಗುವುದು. ಮಹಾಮಂಗಳಾರತಿ ನಂತರ ಪ್ರಸಾದ ವಿನಯೋಗ ಮಾಡಲಾಗುವುದು ಕಾರಣ ಸರ್ವ ಭಕ್ತರು ಕಾರ್ಯಕ್ರಮಕ್ಕೆ ಆಗಮಿಸುವಂತೆ ದೇವಸ್ಥಾನ ಸಮಿತಿ ಮನವಿ ಮಾಡಿಕೊಂಡಿದೆ.