ಇಂದು ಸಂಜೆ ನಾಟಕ ಪ್ರದರ್ಶನ

ತುಮಕೂರು, ಡಿ. ೯- ನಗರದ ಡಾ. ಗುಬ್ಬಿವೀರಣ್ಣ ಕಲಾಕ್ಷೇತ್ರದಲ್ಲಿ ನಾಟಕ ಮನೆ ವತಿಯಿಂದ ನಾಟಕ ಪ್ರದರ್ಶನ ಹಾಗೂ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ನಾಟಕಮನೆ ಮಹಾಲಿಂಗು ಹೇಳಿದ್ದಾರೆ.
ಡಿ. ೯ ರಂದು ಸಂಜೆ ೫.೩೦ ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಭಾರತೀಯ ಕರಣ್ ಆಫ್ ಸೋಶಿಯಲ್ ವರ್ಕ್ ಸಂಶೋಧನೆ ಕುರಿತು ಪ್ರೌಢ ಪ್ರಬಂಧಕ್ಕೆ ಡಾಕ್ಟರೇಟ್ ಪದವಿ ಪಡೆದ ಲಕ್ಷ್ಮಿರಂಗಯ್ಯ ಕೆ.ಎನ್. ರವರನ್ನು ಅಭಿನಂದಿಸಲಾಗುವುದು. ನಂತರ ಮಹಾಕವಿ ಭಾಸನ ಮಧ್ಯಮ ವ್ಯಾಯೋಗ, ಧೂತಘಟೋತ್ಕಚ, ಕರ್ಣಭಾರ ಮತ್ತು ಊರುಭಂಗ ನಾಟಕಗಳನ್ನು ಸಂಯೋಗಿಸಿಕೊಂಡು ಭಾಸ ಭಾರತ ಎಂಬ ರಂಗಪ್ರಯೋಗವನ್ನು ಶಿವು ಹೊನ್ನಿಗನಹಳ್ಳಿ ರವರ ನಿರ್ದೇಶನದಲ್ಲಿ ನಾಟಕ ಪ್ರದರ್ಶನಗೊಳ್ಳಲಿದೆ.
ಕಲಾಸಕ್ತರು ಹೆಚ್ಚಿನ ಸಂಖ್ಕೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ರಂಗ ಸಂಘಟಕ ನಾಟಕಮನೆ ಮಹಾಲಿಂಗು ಮನವಿ ಮಾಡಿದ್ದಾರೆ.