ಇಂದು ಸಂಜೆ ನಗರಕ್ಕೆ ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮಾ.14: ಭಾರತೀಯ ಜನತಾ ಪಾರ್ಟಿಯ ವಿಜಯ ಸಂಕಲ್ಪ ಯಾತ್ರೆ ಇಂದು  ಸಂಜೆ ನಗರದಲ್ಲಿ ನಡೆಯಲಿದೆ.
ಸಂಜೆ ಐದು ಗಂಟೆಗೆ  ಕೊಳಗಲ್ಲು ಮಾರ್ಗವಾಗಿ ಬರುವ ಯಾತ್ರೆಯನ್ನು ಶಾಂತಿನಗರಬಳಿ ಸ್ವಾಗತಿಸಿ, ಸುಧಾ ಸರ್ಕಲ್, ಎಳುಮಕ್ಕಳ ತಾಯಿ ಗುಡಿ, ವಾಲ್ಮೀಕಿ ವೃತ್ತ,  ದೇವತೆ ಕನಕ ದುರ್ಗಮ್ಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ   ಅಂಡರ್ ಬ್ರಿಡ್ಜ್, ಗಡಗಿ ಚೆನ್ನಪ್ಪ ಸರ್ಕಲ್, ಬೆಂಗಳೂರು ರಸ್ತೆ ಮೂಲಕ ಎಪಿಎಂಸಿ ಸರ್ಕಲ್  ಗೆ ಬಂದು ಅಲ್ಲಿ ಬಹಿರಂಗ ಸಭೆ ನಡೆಯಲಿದೆ.
ಯಾತ್ರೆಯಲ್ಲಿ ಅಸ್ಸಾಂ ಮುಖ್ಯ ಮಂತ್ರಿ ಡಾ. ಹಿಂಮತ್ ಬಿಸ್ವಾ ಶರ್ಮ, ಹರಿಯಾಣ ಮುಖ್ಯ ಮಂತ್ರಿ ಮನೋಹರ್ ಲಾಲ್ ಕಟ್ಟರ್, ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ, ಪಕ್ಷದ ರಾಜ್ಯ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್, ಮಾಜಿ ಮುಖ್ಯ ಮಂತ್ರಿ ಜಗದೀಶ್ ಶೆಟ್ಟರ್,  ಸಚಿವರಾದ ಶ್ರೀರಾಮುಲು, ವಿಧಾನ ಪರಿಷತ್ ಸದಸ್ಯ ವೈ.ಎಂ.ಸತೀಶ್, ನಗರ ಶಾಸಕ ಗಾಲಿ ಸೋಮಶೇಖರ ರೆಡ್ಡಿ ಜಿಲ್ಲಾ ಬಿಜೆಪಿ ಅಧ್ಯಕ್ಷ  ಗೋನಾಳ್   ಮುರಹರಗೌಡ ಮೊದಲಾದವರು ಪಾಲ್ಗೊಳ್ಳಲಿದ್ದಾರೆ.
ಎಪಿಎಂಸಿ ಸರ್ಕಲ್ ನಲ್ಲಿ ವಾಹನದಲ್ಲಿಯೇ ನಿಂತು ಗಣ್ಯರು ಚುನಾವಣಾ ಪ್ರಚಾರದ  ಮಾತುಗಳನ್ನು ಆಡಲಿದ್ದಾರೆ. ಜೊತೆಗೆ ಕೇಂದ್ರ ಮತ್ತು ರಾಜ್ಯ ಸರಗಕಾರಗಳು‌ ಜನತಗೆ ನೀಡಿರುವ, ನೀಡಲಿರುವ ಕೊಡುಗೆಗಳ ಬಗ್ಗೆ ತಿಳಿಸಲಿದ್ದಾರೆ.
ಯಾತ್ರೆ ಸಾಗಿ ಬರುವ ರಸ್ತೆಗಳಲ್ಲಿ ಬಿಜೆಪಿ ಬಾವುಟಗಳು, ಬಂಟಿಗ್ಸ್, ಬ್ಯಾನರ್ ಗಳಿಂದ ನಗರ ಕೇಸರಿ ಮಯವಾಗಿದೆ.

One attachment • Scanned by Gmail