ಇಂದು ಸಂಜೆ ಕೂಡ್ಲಿಗಿ ಶ್ರೀ ಊರಮ್ಮದೇವಿ ಕಾರ್ತಿಕೋತ್ಸವ.

ಕೂಡ್ಲಿಗಿ.ಡಿ.29:- ಪಟ್ಟಣದ ಆರಾಧ್ಯ ದೈವ ಶ್ರೀ ಊರಮ್ಮದೇವಿಯ ಕಾರ್ತಿಕೋತ್ಸವವು ಇಂದು ಸಂಜೆ ಭಕ್ತಿ ಪೂರ್ವಕವಾಗಿ ಜರುಗಲಿದೆ ಎಂದು ದೇವಸ್ಥಾನದ ಸದ್ಭಕ್ತ ಮಂಡಳಿ ತಿಳಿಸಿದೆ. ದೇಶದಲ್ಲಿ ಕೊರೋನಾ ಮಹಾಮಾರಿ ವಕ್ಕರಿಸಿದಾಗ ದೇವರ ಮೊರೆ ಹೋಗಿ ಮೊದಲ ಪೂಜೆ ಶ್ರೀ ದೇವಿ ಊರಮ್ಮಗೆ ಇಲ್ಲಿನ ಭಕ್ತರು, ದೇವಸ್ಥಾನ ಮಂಡಳಿಯವರು ಮಹಾಮಾರಿ ದೇಶಬಿಟ್ಟು ತೊಲಗಲಿ ಎಲ್ಲರ ಆರೋಗ್ಯ ಕಾಪಾಡು ತಾಯೇ ಎಂದು ದೇವಿಗೆ ವಿಶೇಷ ಪೂಜೆ ಅಂದೇ ಸಲ್ಲಿಸಲಾಗಿತ್ತು ಮತ್ತು ಮಹಾಮಾರಿ ತಾಂಡವದಿಂದ ಈ ಬಾರಿ 9ವರ್ಷಕ್ಕೊಮ್ಮೆ ನಡೆಯಬೇಕಿದ್ದ ದೇವಿಯ ವಿಜೃಂಭಣೆ ಜಾತ್ರೆ ಕೋವಿಡ್ ಲಾಕ್ ಡೌನ್ ನಿಂದ ಸರ್ಕಾರದ ಆದೇಶದನ್ವಯ ರದ್ದುಪಡಿಸಲಾಗಿತ್ತು ಈಗ ಕೋವಿಡ್ ನಿಯಮ ಸಡಿಲಿಕೆಯಲ್ಲಿ ಜಾಸ್ತಿ ಜನಸಂದಣಿ ಸೇರದಂತೆ ಹಬ್ಬಗಳು, ಕಾರ್ತಿಕೋತ್ಸವಗಳು ಜರುಗುತ್ತಿದ್ದು ಇಂದು ಸಂಜೆ ಶ್ರೀ ಊರಮ್ಮದೇವಿ ಕಾರ್ತಿಕೋತ್ಸವವನ್ನು ಭಕ್ತರು ಸಾಮಾಜಿಕ ಅಂತರ ಕಾಯ್ದುಕೊಂಡು ಪೂಜೆ ಸಲ್ಲಿಸಿ ಕಾರ್ತಿಕೋತ್ಸವದ ದೀಪ ಬೆಳಗುವಂತೆ ದೇವಸ್ಥಾನ ಮಂಡಳಿ ಭಕ್ತ ಸಮೂಹಕ್ಕೆ ವಿನಂತಿಸಿದೆ.