
ಶ್ರೀಕೃಷ್ಣನ ಜನ್ಮದಿನವನ್ನು ಚಾಂದ್ರಮಾನ ರೀತಿಯಲ್ಲಿ ಶ್ರಾವಣ ಕೃಷ್ಣ ಅಷ್ಟಮಿಯಂದು ಸಿಂಹಮಾಸದ ರೋಹಿಣಿ ನಕ್ಷತ್ರದ ದಿನ ಆಚರಿಸುತ್ತಾರೆ. ಶ್ರಾವಣ ಮಾಸದಲ್ಲಿ ಬರುವ ಕೃಷ್ಣ ಪಕ್ಷದ ಅಷ್ಟಮಿ ಕೃಷ್ಣನು ಹುಟ್ಟಿದ ದಿನ. ಅಷ್ಟಮಿಯ ಮಧ್ಯರಾತ್ರಿ, ಕಾರಾಗೃಹದಲ್ಲಿ ಕೃಷ್ಣನ ಜನನವಾಯಿತೆಂದು ಪುರಾಣಗಳು ಹೇಳುತ್ತವೆ.
ಮಥುರಾದಲ್ಲಿ ಹುಟ್ಟಿದ ಶ್ರೀ ಕೃಷ್ಣನನ್ನು ಸೋದರಮಾವನಾದ ಕಂಸನಿಗೆ ತಿಳಿಯದಂತೆ ಗೋಕುಲಕ್ಕೆ ಕರೆದೊಯ್ಯಲಾಗುತ್ತದೆ. ಕೃಷ್ಣಣಿಗೆ ಜನ್ಮ ನೀಡಿದ ತಾಯಿಯ ಹೆಸರು ದೇವಕಿ. ಆದರೆ ಅವನನ್ನು ಸಾಕಿ ಸಲಹಿದವಳು ಯಶೋದೆ.
ಕೃಷ್ಣಾಷ್ಟಮಿ ದಿನದಂದು ಮನೆ ಮತ್ತು ದೇವಾಲಯಗಳನ್ನು ಅಲಂಕರಿಸಲಾಗುತ್ತದೆ. ಕೃಷ್ಣನ ಪುಟ್ಟ ಹೆಜ್ಜೆಗಳನ್ನು ರಂಗೋಲಿಯಲ್ಲಿ ಬಿಡಿಸಲಾಗುತ್ತದೆ. ಕೃಷ್ಣನ ವಿಗ್ರಹಗಳನ್ನು ಅಲಂಕರಿಸಿ, ವಿವಿದ ರೀತಿಯ ತಿಂಡಿಗಳನ್ನು ಮಾಡಿ ಕೃಷ್ಣನನ್ನು ಪೂಜಿಸಲಾಗುತ್ತದೆ. ಕೆಲವು ಕಡೆ ಮಧ್ಯರಾತ್ರಿಯವರೆಗೆ ಉಪವಾಸವಿದ್ದು ನಂತರ ಆಹಾರ ಸ್ವೀಕರಿಸುವ ಸಂಪ್ರದಾಯವು ಸಹ ಇದೆ.
ಜನ್ಮಾಷ್ಟಮಿಯನ್ನು ಆಚರಿಸಲಾಗುತ್ತದೆ.
ವಿಷ್ಣುವಿನ ಎಂಟನೇ ಅವತಾರ ಗೋಕುಲಾನಂದನ ಶ್ರೀಕೃಷ್ಣ,ಈ ದಿನ ಮಧ್ಯ ರಾತ್ರಿ ಶ್ರೀ ಕೃಷ್ಣ ಜನಿಸಿದ ಎಂದು ಶಾಸ್ತ್ರಗಳಲ್ಲಿ ಉಲ್ಲೇಖಿಸಲಾಗಿದೆ.
ಈ ಶುಭ ದಿನದಂದು ಇಡೀ ದೇಶಾದ್ಯಂತ ಸಡಗರ ಸಂಭ್ರಮದಿಂದ ಶ್ರೀ ಕೃಷ್ಣನ ಜನ್ಮಾಷ್ಟಮಿಯನ್ನು ಆಚರಿಸಲಾಗುವುದು. ಈ ಅವಧಿಯಲ್ಲಿ ಶ್ರೀ ಕೃಷ್ಣನ ದೇವಸ್ಥಾನಗಳನ್ನು ಸಿಂಗರಿಸಲಾಗುತ್ತದೆ ಮತ್ತು ಮನೆಗಳಲ್ಲಿಯೂ ಕೂಡ ತೊಟ್ಟಿಲನ್ನು ಸಿಂಗರಿಸಲಾಗುತ್ತದೆ. ಪಂಚ್ಯಖಾದ್ಯ ನೈವೇದ್ಯ ತಯಾರಿಸಿ ಶ್ರೀಕೃಷ್ಣನಿಗೆ ಅರ್ಪಿಸಿ ಪೂಜೆ ಸಲ್ಲಿಸಲಾಗುತ್ತದೆ.
ಭಾರತದ ವಿವಿಧ ಭಾಗಗಳಲ್ಲಿ ವಿವಿಧ ರೀತಿಯ ಸ್ಥಳೀಯ ಸಂಪ್ರದಾಯಗಳು ಮತ್ತು ಆಚರಣೆಗಳ ಪ್ರಕಾರ ಕೃಷ್ಣ ಜನ್ಮಾಷ್ಟಮಿ ಆಚರಿಸಲಾಗುತ್ತದೆ.
ಮಹಾರಾಷ್ಟ್ರದಲ್ಲಿ, ದಹಿ ಹಂಡಿಯನ್ನು ಸ್ಥಳೀಯ ಮತ್ತು ಪ್ರಾದೇಶಿಕ ಪ್ರಮಾಣದಲ್ಲಿ ಆಯೋಜಿಸಲಾಗುತ್ತಿದೆ .
ಮಜ್ಜಿಗೆ ತುಂಬಿದ ಮಣ್ಣಿನ ಮಡಕೆಯನ್ನು ಒಡೆಯುವ ಸಲುವಾಗಿ ಮಾನವ ಪಿರಮಿಡ್ ರಚನೆಯಾಗುತ್ತದೆ. ಭಾರಿ ಪೈಪೋಟಿ ಏರ್ಪಟ್ಟಿದ್ದು, ಈ ಕಾರ್ಯಕ್ರಮಗಳಿಗೆ ಬಹುಮಾನವಾಗಿ ಲಕ್ಷಗಟ್ಟಲೆ ಬಹುಮಾನಗಳನ್ನು ಘೋಷಿಸಲಾಗಿದೆ.
ಉತ್ತರ ಪ್ರದೇಶದಲ್ಲಿ ಈ ದಿನದಂದು ಪವಿತ್ರ ನಗರಗಳಾದ ಮಥುರಾ ಮತ್ತು ವೃಂದಾವನದಲ್ಲಿರುವ ಕೃಷ್ಣ ದೇವಾಲಯಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುತ್ತಾರೆ.
ಶ್ರೀಕೃಷ್ಣನಿಗೆ ಹಾಲು ಮತ್ತು ಗಂಗಾಜಲದಿಂದ ಸ್ನಾನ ಮಾಡಿ ಪೂಜಿಸಲಾಗುತ್ತದೆ. ಇಂದು ಕೃಷ್ಣನಿಗೆ ನವಿಲು ಗರಿಗಳು, ಕೊಳಲು, ಕಿರೀಟ, ಶ್ರೀಗಂಧ, ವೈಜಯಂತಿ ಮಾಲೆ, ತುಳಸಿ ದಳ ಇತ್ಯಾದಿಗಳಿಂದ ಅಲಂಕರಿಸಲಾಗುತ್ತದೆ.
ಕೊಳಲು : ಭಗವಾನ್ ಕೃಷ್ಣನು ಕೊಳಲನ್ನು ತುಂಬಾ ಪ್ರೀತಿಸುತ್ತಿದ್ದನು. ಹೀಗಾಗಿ ಅವನ ಜನಪ್ರಿಯ ಹೆಸರುಗಳಲ್ಲಿ ’ಮುರಳೀಧರ’ ಎಂಬ ಹೆಸರೂ ಕೂಡ ಒಂದು. ಕೊಳಲು ಒಂದು ಮಧುರ ವಾದ್ಯ. ನಮ್ಮ ಜೀವನವೂ ಕೊಳಲಿನಂತೆ ಮಧುರವಾಗಿರಬೇಕು ಎಂಬ ಸಂದೇಶವನ್ನು ನೀಡುತ್ತದೆ. ಯಾವುದೇ ಪರಿಸ್ಥಿತಿಯಿರಲಿ, ನಾವು ಯಾವಾಗಲೂ ಸಂತೋಷವಾಗಿರಬೇಕು.
ನವಿಲು ಗರಿ : ನವಿಲು ಗರಿ ಕೂಡ ಶ್ರೀ ಕೃಷ್ಣನ
ಮೆಚ್ಚಿನವುಗಳಲ್ಲಿ ಒಂದಾಗಿದೆ. ಅವನು ಅದನ್ನು ತನ್ನ ಕಿರೀಟದಲ್ಲಿ ಇಟ್ಟುಕೊಳ್ಳುತ್ತಿದ್ದನು ಎಂಬ ಅಂಶವು ಅವನ ಜೀವನದಲ್ಲಿ ಅದರ ಪ್ರಾಮುಖ್ಯತೆಯನ್ನು ಸ್ಥಾಪಿಸುತ್ತದೆ. ಧಾರ್ಮಿಕ ಗ್ರಂಥಗಳ ಪ್ರಕಾರವೂ ನವಿಲು ಗರಿ ಮಹತ್ವದ್ದಾಗಿದೆ. ಇದು ಜೀವನದಲ್ಲಿ ತೊಂದರೆಗಳನ್ನು ಕಡಿಮೆ ಮಾಡುತ್ತದೆ ಮತ್ತು ಸಂತೋಷ, ಶಾಂತಿ ಮತ್ತು ಸಮೃದ್ಧಿಯನ್ನು ತರುತ್ತದೆ.
ಬೆಣ್ಣೆ : ಕೃಷ್ಣನು ಬೆಣ್ಣೆಯನ್ನು ಪ್ರೀತಿಸುತ್ತಿದ್ದನು. ಅವನು ಗೋಪಿಗಳಿಂದ ಬೆಣ್ಣೆಯನ್ನು ಕದಿಯುತ್ತಿದ್ದುದರಿಂದ ಅವನಿಗೆ ಮಖನ್ ಚೋರ್ ಅಥವ ಬೆಣ್ಣೆ ಕಳ್ಳ ಎಂಬ ಹೆಸರು ಬಂದಿತು.