ಇಂದು ಶಿಷ್ಯೋಪನಯನ ಸಂಸ್ಕಾರ ಕಾರ್ಯಕ್ರಮ

ಬಾದಾಮಿ, ಏ 2: ನಗರದ ಶ್ರೀ ವೀರ ಪುಲಿಕೇಶಿ ಗ್ರಾಮೀಣ ಆಯುರ್ವೇದ ಮಹಾವಿದ್ಯಾಲಯದಲ್ಲಿ 2020-21 ನೇ ಶೈಕ್ಷಣಿಕ ಸಾಲಿಗೆ ಪ್ರವೇಶ ಪಡೆದ ಪ್ರಥಮ ವರ್ಷದ ಬಿ.ಎ.ಎಮ್.ಎಸ್ 60 ವಿದ್ಯಾರ್ಥಿಗಳಿಗೆ ಸಂಪ್ರದಾಯದಂತೆ ಇಂದು 5 ಗಂಟೆಗೆ ಶಿಷ್ಯೋಪನಯನ ಸಂಸ್ಕಾರ ಕಾರ್ಯಕ್ರಮವನ್ನು ಆಯೋಜಿಸಿಲಾಗಿದೆ ಎಂದು ಪ್ರೊ.ಗಿರೀಶ ದಾನಪ್ಪಗೌಡರ ಹೇಳಿದರು.
ನಗರದ ಮಯೂರ ಚಾಲುಕ್ಯ ಹೋಟೆಲ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಅಂದು ಮುಂಜಾನೆ ಶ್ರೀ ಧನ್ವಂತರಿ ಹೋಮವನ್ನು ನೆರವೇರಿಸಿ, ಇಂದು ಪ್ರಮಾಣ ವಚನ ಬೋಧನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ. ಗೌರವ ಅತಿಥಿಗಳಾಗಿ ರಾಜೀವ ಗಾಂಧೀ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಬೆಂಗಳೂರು ಸೆನೇಟ್ ಸದಸ್ಯ ಡಾ. ಲಕ್ಷ್ಮಣ. ವಿ ಅರಮನಿ, ಮುಖ್ಯ ಅತಿಥಿಗಳಾಗಿ ಪ್ರಭಾವಿ ವಾಗ್ಮಿ ಮಹೇಶ ಮಾಶಾಳರವರು ಆಗಮಿಸುವರು. ಡಾ. ಸಿದ್ದನಗೌಡ ಪಾಟೀಲ, ಡಾ. ಶಂಕರಗೌಡ ಸಂಕದಾಳ, ಪ್ರಾಚಾರ್ಯ ಡಾ. ಡಿ.ಎಮ್ ಪಾಟೀಲ ಉಪಸ್ಥಿತರಿರುವರು. ಮಹೇಶಗೌಡ ತಲೆಗೌಡರ ಅಧ್ಯಕ್ಷತೆ ವಹಿಸುವರು ಎಂದರು.
ನಾಳೆ ಸಾಯಂಕಾಲ 4 ಗಂಟೆಗೆ ದೀಕ್ಷಾಂತ ಸಮಾರೋಹ ಸಮಾರಂಭವನ್ನು ಏರ್ಪಡಿಸಲಾಗಿದೆ, ಈ ಸಮಾರಂಭದಲ್ಲಿ ಮಹಾವಿದ್ಯಾಲಯದ 2014-15 ಹಾಗೂ 2015-16 ಬ್ಯಾಚಿನ 88 ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣ ವಿತರಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಕಾರ್ಯಕ್ರಮದಲ್ಲಿ ರಾಜೀವ ಗಾಂಧೀ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಬೆಂಗಳೂರು ಆಯುರ್ವೇದ ನಿಖಾಯದ ಡೀನ್ ಡಾ. ಶ್ರೀನಿವಾಸ ಬನ್ನಿಗೋಳ ದೀಕ್ಷಾಂತ ಭಾಷಣವನ್ನು ನೆರವೇರಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಕರ್ನಾಟಕ ಆಯುರ್ವೇದ ಮತ್ತು ಯುನಾನಿ ವೈದ್ಯರ ನೊಂದಣಿ ಮಂಡಳಿ ರಜಿಸ್ಟ್ರಾರ್ ಡಾ. ಶುಹಾಬುದ್ದಿನ, ಬೆಂಗಳೂರು ರಾಜೀವ ಗಾಂಧೀ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಬೋರ್ಡ ಆಫ್ ಸ್ಟಡೀಸ್ ಚೇರಮನ್ನ ಡಾ. ಚಂದ್ರಶೇಖರ ಕುಪ್ಪಿ, ಕೆ.ಎ.ಯು.ಪಿ ಬೋರ್ಡ ಸದಸ್ಯ ಡಾ. ಆನಂದ ಕಿರಿಶ್ಯಾಳ, ಕರ್ನಾಟಕ ಸರಕಾರಿ ವೈದ್ಯರ ಸಂಘದ ಗೌರವ ಅಧ್ಯಕ್ಷ ಡಾ. ರಾಜು ಶೇಟ್ ಪಾಲ್ಗೊಳ್ಳುವರು.
ಗೌರವ ಅತಿಥಿಗಳಾಗಿ ಕರ್ನಾಟಕ ಆಯುಷ್ ಇಲಾಖೆಯ ಜಂಟಿ ನಿರ್ದೇಶಕ ಡಾ. ಬಿ.ಎಸ್ ಶ್ರೀಧರ ಭಾಗವಹಿಸುವರು. ಬೆಂಗಳೂರು ರಾಜೀವ ಗಾಂಧೀ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಉಪಕುಲಸಚಿವ ಡಾ. ಸಂತೋಷ ಯಡಹಳ್ಳಿ ಇವರು ಪ್ರಮಾಣ ವಚನ ಬೋಧಿಸುವರು.
ಕಾರ್ಯಕ್ರಮದಲ್ಲಿ ಪೋಷಕರಾದ ಶ್ರೀ ವೀರ ಪುಲಿಕೇಶಿ ವಿದ್ಯಾವರ್ಧಕ ಸಂಸ್ಥೆಯ ಚೇರಮನ್ನ ಎ.ಸಿ ಪಟ್ಟಣದ, ಆಯುರ್ವೇದ ಮಹಾವಿದ್ಯಾಲಯದ ಆಡಳಿತ ಮಂಡಳಿ ಚೇರಮನ್ನ ಮಹಾಂತೇಶ ಮಮದಾಪೂರ, ಡಾ. ಬಸವರಾಜ ಮುಲ್ಕೀಪಾಟೀಲ, ಡಾ. ಗಿರೀಶ ದಾನಪ್ಪಗೌಡರ ಉಪಸ್ಥಿತರಿರುವರು. ಖ್ಯಾತ ನರರೋಗ ಶಸ್ತ್ರಚಿಕಿತ್ಸಕ ಡಾ. ಕ್ರಾಂತಿಕಿರಣರವರು ಅಧ್ಯಕ್ಷತೆಯನ್ನು ವಹಿಸುವರು.
2015-16 ಬ್ಯಾಚಿನ ಕುಮಾರಿ ಸುಷ್ಮಾ ಜಾನೋಪಂತರ 5 ಸ್ವರ್ಣಪದಕಗಳನ್ನು ಪಡೆದಿದ್ದು ಬಂಗಾರದ ಹುಡುಗಿ ಎಂದು ಹಾಗೂ ಕುಮಾರ ಸುನೀಲ ಜೋಗಿ 3 ಸ್ವರ್ಣಪದಕಗಳನ್ನು ಪಡೆದಿದ್ದು ಬಂಗಾರದ ಹುಡುಗ ಎಂದು ಆಯ್ಕಯಾಗಿದ್ದಾರೆ ಎಂದರು. ಈ ಸಂದರ್ಭದಲ್ಲಿ ಬಸವರಾಜ ಮುಲ್ಕಿ ಪಾಟೀಲ ಹಾಜರಿದ್ದರು.