ಇಂದು ವಿಶ್ವ ರೆಡ್ ಕ್ರಾಸ್ ದಿನ

೧೯೪೮ ರಿಂದ, ಪ್ರತಿ ವರ್ಷ ಮೇ ೮ ರಂದು ವಿಶ್ವ ರೆಡ್ ಕ್ರಾಸ್ ದಿನವನ್ನು ಪ್ರಪಂಚದಾದ್ಯಂತ ಆಚರಿಸಲಾಗುತ್ತದೆ.
ವಿಶ್ವ ರೆಡ್ ಕ್ರಾಸ್ ಮತ್ತು ರೆಡ್ ಕ್ರೆಸೆಂಟ್ ದಿನದ ಮುಖ್ಯ ಉದ್ದೇಶವೆಂದರೆ ಪ್ರವಾಹ, ಭೂಕಂಪಗಳು, ನೈಸರ್ಗಿಕ ವಿಕೋಪಗಳಿಂದ ಹಾನಿಗೊಳಗಾದ ಜನರಿಗೆ ಸಹಾಯ ಮಾಡಲು ಮತ್ತು ತುರ್ತು ಪರಿಸ್ಥಿತಿಗಳಿಂದ ಅವರ ಜೀವಗಳನ್ನು ಉಳಿಸಲು ರೆಡ್ ಕ್ರಾಸ್ ಸಂಸ್ಥೆಗಳ ಪ್ರಯತ್ನಗಳನ್ನು ಗುರುತಿಸುವುದು.
ಈ ವಿಶ್ವ ರೆಡ್ ಕ್ರಾಸ್ ದಿನದ ಮುಖ್ಯ ಉದ್ದೇಶ ರಕ್ತವನ್ನು ಸಂಗ್ರಹಿಸುವುದು.
ಜಗತ್ತಿನಲ್ಲಿ ಯುದ್ಧ ಮತ್ತು ವಿಪತ್ತುಗಳಿಂದ ಹಾನಿಗೊಳಗಾದವರಿಗೆ ಮಾನವೀಯ ಪರಿಹಾರ ಕಾರ್ಯಗಳನ್ನು ಕೈಗೊಳ್ಳಲು ವಿಶ್ವ ರೆಡ್ ಕ್ರಾಸ್ ಮತ್ತು ರೆಡ್ ಕ್ರೆಸೆಂಟ್ ದಿನವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಸ್ಥಾಪಿಸಲಾಗಿದೆ. ರೆಡ್ ಕ್ರಾಸ್ ಮತ್ತು ರೆಡ್ ಕ್ರೆಸೆಂಟ್ ಹೆಸರಿನಲ್ಲಿ ಭಿನ್ನವಾಗಿದ್ದರೂ, ಎರಡು ಸಂಸ್ಥೆಗಳು ಮೂಲಭೂತವಾಗಿ ಒಂದೇ ಉದ್ದೇಶವನ್ನು ಹೊಂದಿದೆ.
ಸ್ವಿಟ್ಜರ್ಲೆಂಡ್‌ನ ಜೀನ್ ಹೆನ್ರಿ ಡ್ಯುನಾಂಟ್ , ಮೊದಲ ನೊಬೆಲ್ ಶಾಂತಿ ಪ್ರಶಸ್ತಿ ವಿಜೇತರು ಮತ್ತು ಇಂಟರ್ನ್ಯಾಷನಲ್ ಕಮಿಟಿ ಆಫ್ ರೆಡ್‌ಕ್ರಾಸ್ ಯ ಸ್ಥಾಪಕ , ಮೇ ೦೮, ೧೮೨೮ ರಂದು ಜನಿಸಿದ್ದಾರೆ.
ಅವರ ನೆನಪಿಗಾಗಿ ಮೇ ೮ ರಂದು ಅವರ ಜನ್ಮದಿನವನ್ನು ವಿಶ್ವ ರೆಡ್ ಕ್ರಾಸ್ ದಿನವಾಗಿ ಆಚರಿಸಲಾಗುತ್ತದೆ.
ಆರಂಭದಲ್ಲಿ ವಿಶ್ವ ರೆಡ್ ಕ್ರಾಸ್ ದಿನವಾಗಿತ್ತು. ೧೯೮೪ ರಲ್ಲಿ ಇದು ವಿಶ್ವ ರೆಡ್ ಕ್ರಾಸ್ ಮತ್ತು ರೆಡ್ ಕ್ರೆಸೆಂಟ್ ದಿನವಾಗಿದೆ.
ಜೀನ್-ಹೆನ್ರಿ ಡ್ಯೂನಾಂಟ್ ನೆಪೋಲಿಯನ್ III ರೊಂದಿಗೆ ವ್ಯವಹಾರದ ಬಗ್ಗೆ ಮಾತನಾಡಲು ಇಟಲಿಯ ಸೊಲ್ಫೆರಿನೊ ನಗರಕ್ಕೆ ಹೋಗುತ್ತಾರೆ. ಆ ಸಮಯದಲ್ಲಿ ಅಲ್ಲಿ ಸೋಲ್ಫೆರಿನೊ ಕದನ ನಡೆಯುತ್ತದೆ .
ಆ ಯುದ್ಧದಲ್ಲಿ ಗಾಯಗೊಂಡವರನ್ನು ನೋಡಿ ಹೆನ್ರಿ ಡ್ಯೂನಾಂಟ್ ಭಾವುಕರಾದರು. ಅವರು ತಮ್ಮ ಕೆಲಸವನ್ನು ಬದಿಗಿಟ್ಟು ಗಾಯಾಳುಗಳಿಗೆ ಪ್ರಥಮ ಚಿಕಿತ್ಸೆ ನೀಡಲು ಪ್ರಾರಂಭಿಸಿದರು. ಇವರೊಂದಿಗೆ ಅನೇಕರು ಸಹಾಯ ಮಾಡಿದರು.
ಜಿನೀವಾಗೆ ಆಗಮಿಸಿದ ನಂತರ, ಹೆನ್ರಿ ಡ್ಯುನಾಂಟ್ ಅವರು ಸೋಲ್ಫೆರಿನೊದಲ್ಲಿನ ತಮ್ಮ ಅನುಭವಗಳ ಬಗ್ಗೆ ’ ಎ ಮೆಮೊರಿ ಆಫ್ ಸೋಲ್ಫೆರಿನೊ’ ಎಂಬ ಪುಸ್ತಕದಲ್ಲಿ ಬರೆದಿದ್ದಾರೆ . ಈ ಪುಸ್ತಕವನ್ನು ಹೆನ್ರಿ ಡ್ಯೂನಾಂಟ್ ಸ್ವತಃ ೧೮೬೨ ರಲ್ಲಿ ಪ್ರಕಟಿಸಿದ್ದಾರೆ.
ಈ ಘಟನೆಯೇ ಹೆನ್ರಿ ಡ್ಯೂನಾಂಟ್ ೧೮೬೩ ರಲ್ಲಿ ಇಂಟರ್ನ್ಯಾಷನಲ್ ರೆಡ್ ಕ್ರಾಸ್ ಎಂಬ ಸಂಸ್ಥೆಯನ್ನು ಸ್ಥಾಪಿಸಲು ಪ್ರೇರೇಪಿಸಿದೆ.
೧೮೬೪ ರಲ್ಲಿ ಅವರು ಜಿನೀವಾದಲ್ಲಿ ಅಂತರರಾಷ್ಟ್ರೀಯ ಸಮ್ಮೇಳನವನ್ನು ನಡೆಸಿದರು. ಆಗ ಮಾತ್ರ ೧೪ ದೇಶಗಳು ರೆಡ್ ಕ್ರಾಸ್ ಸ್ಥಾಪನೆಗೆ ಒಪ್ಪಿಕೊಂಡವು. ಈ ಸಭೆಯ ಪರಿಣಾಮವಾಗಿ, ಪ್ರಪಂಚದಾದ್ಯಂತ ರೆಡ್ ಕ್ರಾಸ್ ಸೇವಾ ಸಂಸ್ಥೆಗಳು ರೂಪುಗೊಂಡವು.
ಇದರ ಪ್ರಧಾನ ಕಛೇರಿ ಸ್ವಿಟ್ಜರ್ಲೆಂಡ್ ಜಿನೀವಾದಲ್ಲಿದೆ.
ಇಂಟರ್ನ್ಯಾಷನಲ್ ಕಮಿಟಿ ಆಫ್ ದಿ ರೆಡ್ ಕ್ರಾಸ್ ಒಂದು ಲಾಭರಹಿತ ಅಂತರಾಷ್ಟ್ರೀಯ ದತ್ತಿ ಸಂಸ್ಥೆಯಾಗಿದೆ.
ಇದನ್ನು ಸ್ವಿಟ್ಜರ್ಲೆಂಡ್‌ನ ಜೀನ್-ಹೆನ್ರಿ ಡ್ಯೂನಾಂಟ್ ಸ್ಥಾಪಿಸಿದ್ದಾರೆ.