
ಮಿಕ್ಕಿ ಮೌಸ್ ಗೆ ೯೫ ನೇ ಹುಟ್ಟುಹಬ್ಬದ ಸಂಭ್ರಮ ಕೆಂಪು ಪ್ಯಾಂಟ್ ಧರಿಸಿ ಎರಡು ಕಾಲಿನಲ್ಲಿ ಟನ್ ಟನ್ ಎಂದು ಜಿಗಿಯುವ ಮಿಕ್ಕಿ ಮೌಸ್ ನೋಡುವುದೇ ಎಲ್ಲಾ ವಯೋಮಾನದರಿಗೆ ಒಂದು ಬಗೆಯ ಸಂಭ್ರಮ-ಖುಷಿ.
ಇಂದು ವಿಶ್ವದ ನೆಚ್ಚಿನ ಕಾರ್ಟೂನ್ ಪಾತ್ರಗಳಲ್ಲಿ ಒಂದಾದ ಮಿಕ್ಕಿ ಮೌಸ್ ಗೆ ೯೫ ನೇ ಹುಟ್ಟುಹಬ್ಬದ ಸಂಭ್ರಮ.
ವಾಲ್ಟ್ ಡಿಸ್ನಿ ೧೯೨೮ ರಲ್ಲಿ ಮಿಕ್ಕಿ ಮೌಸ್ ಪಾತ್ರವನ್ನು ಸೃಷ್ಟಿಸಿದರು. ನವೆಂಬರ್ ೧೮, ೧೯೨೮ ರಂದು, ಮಿಕ್ಕಿ ಮೌಸ್ ನ್ಯೂಯಾರ್ಕ್‌ನ ಕಾಲೋನಿ ಥಿಯೇಟರ್‌ನಲ್ಲಿ ಸ್ಟೀಮ್‌ಬೋಟ್ ವಿಲ್ಲೀ ಚಿತ್ರದ ಮೂಲಕ ಪಾದಾರ್ಪಣೆ ಮಾಡಿದೆ. ಈ ಕಾರಣಕ್ಕಾಗಿ ಮಿಕ್ಕಿಯ ಹುಟ್ಟುಹಬ್ಬವನ್ನು ನವೆಂಬರ್ ೧೮ ರಂದು ಆಚರಿಸಲಾಗುತ್ತದೆ.
ಮೊದಲ ಚಲನಚಿತ್ರದಲ್ಲಿ ಮಿಕ್ಕಿಯ ಧ್ವನಿ ಸ್ವತಃ ವಾಲ್ಟ್ ಡಿಸ್ನಿಯವರದು. ೧೯೩೦ ರಲ್ಲಿ, ಮಿಕ್ಕಿ ಮೌಸ್ ಯಶಸ್ಸಿನ ಉತ್ತುಂಗವನ್ನು ತಲುಪಿದೆ . ಇದರೊಂದಿಗೆ ವಾಲ್ಟ್ ಡಿಸ್ನಿ ಅವರನ್ನು ಯಶಸ್ವಿ ವ್ಯಕ್ತಿಯನ್ನಾಗಿ ಮಾಡಿದೆ., ಪ್ರಪಂಚದ ಯಾವುದೇ ಮೌಸ್ ಮಿಕ್ಕಿಯಷ್ಟು ಮುದ್ದಾಗಿಲ್ಲ, ಮಿಕ್ಕಿ ಸಾಮಾನ್ಯವಾಗಿ ಕೆಂಪು ಶಾರ್ಟ್ಸ್, ದೊಡ್ಡ ಹಳದಿ ಬೂಟುಗಳು ಮತ್ತು ಬಿಳಿ ಕೈಗವಸುಗಳನ್ನು ಧರಿಸುತ್ತದೆ. ಅನಿಮೇಷನ್ ಜಗತ್ತು ಇಂದು ತುಂಬಾ ಮುಂದುವರಿದಿದ್ದರೂ, ಇಂದು ಅನೇಕ ಪಾತ್ರಗಳು ರೂಪುಗೊಂಡು ಮಕ್ಕಳಲ್ಲಿ ಜನಪ್ರಿಯತೆ ಗಳಿಸಿರಬಹುದು ಆದರೆ ಯಾರೂ ಡಿಸ್ನಿಯ ಮಿಕ್ಕಿ ಮೌಸ್‌ನ ಸ್ಥಾನವನ್ನು ಪಡೆಯಲು ಸಾಧ್ಯವಾಗಿಲ್ಲ ಬಹುಶಃ ಮುಂದೆ ಯಾರಿಂದಲೂ ಸಾಧ್ಯವಾಗಲಾರದು.
ಕಂಪನಿಯು ಮುಂದುವರಿಯಲು ವಾಲ್ಟ್ ಡಿಸ್ನಿಗೆ ಹೊಸ ಕಾರ್ಟೂನ್ ಪಾತ್ರದ ಅಗತ್ಯವಿತ್ತು ,ಅವರ ಚಿತ್ರಕಾರರು ಹಸುಗಳು, ಗೂಳಿಗಳು, ಕುದುರೆಗಳು, ಕಪ್ಪೆಗಳು, ಬೆಕ್ಕುಗಳು ಮತ್ತು ನಾಯಿಗಳನ್ನು ರಚಿಸಿದರು, ಆದರೆ ವಾಲ್ಟ್ ಯಾವುದೇ ಪಾತ್ರಗಳನ್ನು ಇಷ್ಟಪಡಲಿಲ್ಲ. ಒಂದು ದಿನ ವಾಲ್ಟ್ ಡಿಸ್ನಿ ಕಛೇರಿಯಲ್ಲಿ ಓಡಾಡುವ ಇಲಿಯನ್ನು ಗಮನಿಸಿದರು.ತಕ್ಷಣವೇ ಅವರ ಕಲ್ಪನೆಯಲ್ಲಿ ಮಿಕ್ಕಿ ಮೌಸ್ ಜನನವಾಯಿತು.
ಇದಕ್ಕೂ ಮೊದಲು, ವಾಲ್ಟ್ ಡಿಸ್ನಿ ಈ ಹೊಸ ಇಲಿ ಪಾತ್ರಕ್ಕೆ ಮಾರ್ಟಿಮರ್ ಎಂದು ಹೆಸರಿಟ್ಟಿದ್ದರು. ಇದು ಅವರ ಪತ್ನಿ ಲಿಲಿಯನ್ ಇಷ್ಟವಾಗಲಿಲ್ಲ. ನಂತರ ಈ ಹೆಸರನ್ನು ಮಿಕ್ಕಿ ಮೌಸ್ ಎಂದು ಬದಲಾಯಿಸಲಾಯಿಗಿದೆ.
ಮಿಕ್ಕಿ ಮೌಸ್ ತನ್ನ ಮೊದಲ ಪದ ಹಾಟ್‌ಡಾಗ್ ಕಾರ್ನಿವಲ್ ಕಿಡ್ ನಲ್ಲಿ ಮಾತನಾಡಿದೆ ಇದರೊಂದಿಗೆ ಮಿಕ್ಕಿ ಮೌಸ್ ಕಾರ್ಟೂನ್ ಜಗತ್ತಿನಲ್ಲಿ ಮೊದಲ ಮಾತನಾಡುವ ಪಾತ್ರವಾಯಿತು. ಡಿಸ್ನಿ ಸಂಗೀತಗಾರ ಮತ್ತು ನಟ ಜಿಮ್ಮಿ ಮೆಕ್‌ಡೊನಾಲ್ಡ್ ೧೯೪೬ ರಲ್ಲಿ ಮಿಕ್ಕಿಯ ಧ್ವನಿಯಾದರು. ಮಿಕ್ಕಿ ಮೌಸ್ ಆರಂಭದಲ್ಲಿ ಕಪ್ಪು ಮತ್ತು ಬಿಳಿ ವರ್ಣದಾಗಿತ್ತು.ನಂತರ ೧೯೩೫ ರಲ್ಲಿ ಬಣ್ಣದಲ್ಲಿ ಪರಿವರ್ತನೆ ಹೊಂದಿದೆ
ಮಿಕ್ಕಿ ಮೌಸ್ ೧೦ ಬಾರಿ ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದೆ, ಅದರಲ್ಲಿ ’ಲೆಂಡ್ ಎ ಪಾವ್’ ಅತ್ಯುತ್ತಮ ಅನಿಮೇಟೆಡ್ ಕಿರುಚಿತ್ರ ಪ್ರಶಸ್ತಿಯನ್ನು ಪಡೆದುಕೊಂಡಿದೆ.
ಮಿಕ್ಕಿಯನ್ನು ಪ್ರಸಿದ್ಧ ಆನಿಮೇಟರ್ ಉಬ್ ಐವರ್ಕ್ಸ್ ರಚಿಸಿದರು ಮತ್ತು ಡಿಸ್ನಿ ಸ್ವತಃ ಮಿಕ್ಕಿಯ ಧ್ವನಿಯನ್ನು ೧೯೪೭ ರವರೆಗೆ ಒದಗಿಸಿದರು. ಮಿಕ್ಕಿ ಈಗ ತನ್ನ ಗೆಳತಿ ಮಿನ್ನೀ ಮೌಸ್ ಮತ್ತು ಅವನ ಸ್ನೇಹಿತರಾದ ಡೊನಾಲ್ಡ್ ಡಕ್, ಗೂಫಿ ಮತ್ತು ಪ್ಲುಟೊ ಅವರೊಂದಿಗೆ ಬರಲು ಪ್ರಾರಂಭಿಸಿದೆ .ಮಿಕ್ಕಿ ೧೦೦ ಕ್ಕೂ ಹೆಚ್ಚು ಕಾರ್ಟೂನ್ ಕಿರುಚಿತ್ರಗಳಲ್ಲಿ ಕಾಣಿಸಿಕೊಂಡಿದೆ ಮತ್ತು ಪ್ರಪಂಚದಾದ್ಯಂತ ಜನಪ್ರಿಯವಾಗಿದೆ.
ಮಿಕ್ಕಿ ಮೌಸ್ ಎಲ್ಲರ ಮೆಚ್ಚಿನ ಕಾರ್ಟೂನ್ ಆಗಿದೆ. ದೊಡ್ಡವರಿರಲಿ ಚಿಕ್ಕವರಿರಲಿ ಎಲ್ಲರಿಗೂ ಮಿಕ್ಕಿ ಮೌಸ್ ಬಗ್ಗೆ ಅಪಾರವಾದ ಕ್ರೇಜ್ ಇದೆ .ಹುಟ್ಟುಹಬ್ಬದ ಕೇಕ್‌ನಲ್ಲಿ ಮಿಕ್ಕಿ ಮೌಸ್ ,ಬಟ್ಟೆಯ ಮೇಲೆ ಮಿಕ್ಕಿಯ ಚಿತ್ರವಿರಲಿ, ಚಹಾದ ಕಫ್,ವಾಚ್, ಗೋಡೆಯ ಗಡಿಯಾರ,ಒಟ್ಟಿನಲ್ಲಿ ಮಿಕ್ಕಿ ಮೌಸ್ ಚಿತ್ರವು ಸಾರ್ವತ್ರಿಕವಾಗಿ ಬಳಕೆಯಲ್ಲಿದೆ.
ವಾಲ್ಟ್ ಡಿಸ್ನಿಯ ಅನಿಮೇಟೆಡ್ ಕಾರ್ಟೂನ್‌ಗಳಿಂದ ಮಿಕ್ಕಿ ಅತ್ಯಂತ ಜನಪ್ರಿಯ ಪಾತ್ರವಾಗಿದೆ.