
ಪ್ರತಿ ವರ್ಷ ಜುಲೈ ೧೧ ರಂದು ಪ್ರಪಂಚದಾದ್ಯಂತ ವಿಶ್ವ ಜನಸಂಖ್ಯಾ ದಿನ ಎಂದು ಆಚರಿಸಲಾಗುತ್ತದೆ. ಜಾಗತಿಕ ಸಮಸ್ಯೆಗಳು, ಹೆಚ್ಚುತ್ತಿರುವ ಜನಸಂಖ್ಯೆಯ ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲು ಜುಲೈ ೧೧, ೧೯೮೯ ರಂದು ಮೊದಲ ಬಾರಿ ಜನಸಂಖ್ಯಾ ದಿನವನ್ನು ಆಚರಿಸಲಾಯಿತು.
ನಿರಂತರವಾಗಿ ಹೆಚ್ಚುತ್ತಿರುವ ಜನಸಂಖ್ಯೆಯು ಒಂದು ದೊಡ್ಡ ಜಾಗತಿಕ ಸಮಸ್ಯೆಯಾಗಿದೆ ಎಂಬುದು ತಪ್ಪೇನಲ್ಲ.
ಜನಸಂಖ್ಯೆಯ ಏರಿಕೆ ವರವೋ ಶಾಪವೋ ಒಂದು ಅರ್ಥೈಸಲಾರದ ಮಟ್ಟಿಗೆ ತಲುಪಿದೆ.ಮಾಹಿತಿ ಪ್ರಕಾರ ಜಾಗತಿಕವಾಗಿ ಪ್ರತಿ ದಿನ ೩,೫೩,೦೦೦ ಶಿಶುಗಳು ಜನಿಸುತ್ತವೆ. ನಿರಂತರವಾಗಿ ಹೆಚ್ಚುತ್ತಿರುವ ಈ ಜನಸಂಖ್ಯೆಯನ್ನು ನಿಯಂತ್ರಿಸುವ ಅವಶ್ಯಕತೆಯಿದೆ. ಇಲ್ಲದಿದ್ದರೆ ಮೂಲಭೂತ ಅಗತ್ಯಗಳಾದ ಆಹಾರ, ನೀರು, ವಸತಿ, ಶಿಕ್ಷಣ ಮತ್ತು ಆರೋಗ್ಯ ಅಗತ್ಯಗಳನ್ನು ಪೂರೈಸಲು ಕಷ್ಟವಾಗುತ್ತದೆ ಉದ್ಯೋಗದ ತೊಡಕು, ಸಮಾಜದ ಮೇಲೆ ಒತ್ತಡ, ಅಪರಾಧಗಳ ಹೆಚ್ಚಳ, ಕೊಲೆ, ಸುಲಿಗೆ, ಮಾನವ ಕಳ್ಳ ಸಾಗಣೆ, ಚಿಕ್ಕ ಮಕ್ಕಳನ್ನು ಸಂಪಾದನೆಗೆ ಕಳುಹಿಸುವುದು, ವಿದ್ಯಾಭ್ಯಾಸದ ಕೊರತೆ ಇತ್ಯಾದಿಗಳೆಲ್ಲ ತಲೆದೋರುವುದು.ಮತ್ತು ಭೂಮಿಯ ಮೇಲಿನ ಜೀವನ ಅಸಾಧ್ಯವಾಗುತ್ತದೆ. ಜುಲೈ ೧೧, ೧೯೮೭ ರಂದು, ನಮ್ಮ ವಿಶ್ವ ಜನಸಂಖ್ಯೆಯು ಅಧಿಕೃತವವಾಗಿ ೫೦೦ ಕೋಟಿ ತಲುಪಿತು. ಜನರಲ್ಲಿ ಜನಸಂಖ್ಯೆಯ ಬಗ್ಗೆ ಅರಿವು ಮೂಡಿಸುವ ಸಲುವಾಗಿ, ಅಮೇರಿಕನ್ ಕೌನ್ಸಿಲ್ ಆಫ್ ಅಡ್ಮಿನಿಸ್ಟ್ರೇಷನ್ ೧೯೮೯ ರಲ್ಲಿ ವಿಶ್ವ ಜನಸಂಖ್ಯಾ ದಿನವನ್ನು ಆಚರಿಸಲು ನಿರ್ಧರಿಸಲಾಯಿತು. ಜನವರಿ ೧, ೨೦೧೪ ರಂತೆ, ವಿಶ್ವದ ಜನಸಂಖ್ಯೆಯು ಸುಮಾರು ೭೧೩ ಕೋಟಿ,. ೨೦೧೫ ಜನವರಿ ೧ ರ ಜನಗಣತಿಯ ಪ್ರಕಾರ, ಈ ಜನಸಂಖ್ಯೆಯು ಸುಮಾರು ಏಳುನೂರ ಹದಿನಾಲ್ಕು ಕೋಟಿ. ಈ ಜನಸಂಖ್ಯೆಯ ಸುಮಾರು ೬೦ ಪ್ರತಿಶತದಷ್ಟು ಜನರು ಏಷ್ಯಾ ಖಂಡದಲ್ಲಿ ವಾಸಿಸುತ್ತಿದ್ದಾರೆ. ಚೀನಾದಲ್ಲಿ ೧೪೫ ಕೋಟಿ, ಭಾರತದಲ್ಲಿ ೧೪೦ ಕೋಟಿ, ಆಫ್ರಿಕಾದಲ್ಲಿ ೧೨ ಪ್ರತಿಶತ, ಯುರೋಪ್‌ನಲ್ಲಿ ೧೧ ಪ್ರತಿಶತ, ಉತ್ತರ ಅಮೆರಿಕದಲ್ಲಿ ೮ ಪ್ರತಿಶತ ಮತ್ತು ದಕ್ಷಿಣ ಅಮೇರಿಕಾದಲ್ಲಿ ೫.೫ ಪ್ರತಿಶತದಷ್ಟು ಜನರು ವಾಸಿಸುತ್ತಿದ್ದಾರೆ ಎಂದು ಅಂಕಿ ಅಂಶಗಳು ತಿಳಿಸುತ್ತದೆ.
ನಮ್ಮ ಕರ್ನಾಟಕವು ಸುಮಾರು ೭ ಕೋಟಿ ಜನಸಂಖ್ಯೆಯನ್ನು ಹೊಂದಿದೆ ಮತ್ತು ಭಾರತದ ಜನಸಂಖ್ಯೆಯು ೧೪೦ ಕೋಟಿಗಿಂತ ಹೆಚ್ಚು ಎಂಬುದು ಸತ್ಯ. ಅತಿ ದೊಡ್ಡ ವಿಪರ್ಯಾಸವೆಂದರೆ ಜನಸಂಖ್ಯೆ ಹೆಚ್ಚಾದಂತೆ ಮೂಲಭೂತ ಅವಶ್ಯಕತೆಗಳು ಮತ್ತು ಸೌಲಭ್ಯಗಳು ದೊರೆಯುತ್ತಿಲ್ಲ. ಇದು ನೂರಾರು ಸಮಸ್ಯೆಗಳಿಗೆ ಕಾರಣವಾಗಿದೆ. ಒಂದು ದೇಶದ ಪ್ರಗತಿ ಮತ್ತು ಪರಿಪೂರ್ಣ ಅಭಿವೃದ್ಧಿಗೆ ಮಾನವನ ಸಾಮರ್ಥ್ಯ ಎಷ್ಟು ಅವಶ್ಯವೋ, ಏರುತ್ತಿರುವ ಜನಸಂಖ್ಯೆಯೂ ಬೆಳವಣಿಗೆಯನ್ನು ತಡೆಯುತ್ತದೆ ಎಂಬುದು ನಂಬಬೇಕಾದ ಕಹಿ ಸತ್ಯ.
ಜಗತ್ತಿನ ಜನಸಂಖ್ಯೆ ೨೦೧೯ರಲ್ಲಿ ೭೭೨ ಕೋಟಿಗೆ ಬಂದು ತಲುಪಿದೆ. ಚೀನಾ ೧೪೨ ಕೋಟಿ ಜನಸಂಖ್ಯೆ ಮೂಲಕ ಮೊದಲ ಸ್ಥಾನದಲ್ಲಿದ್ದರೆ ಭಾರತ ೧೩೬.೮ ಕೋಟಿ ಜನಸಂಖ್ಯೆ ಹೊಂದುವ ಮೂಲಕ ೨ನೇ ಸ್ಥಾನದಲ್ಲಿ ಮುಂದುವರಿದಿದೆ. ಇದು ವಿಶ್ವಕ್ಕೆ ಹೋಲಿಸಿದರೆ ಶೇ. ೧೯ ಮತ್ತು ಶೇ. ೧೮ರಷ್ಟು. ಅದರ ನಂತರದ ಸ್ಥಾನದಲ್ಲಿ ಅಮೆರಿಕ ಇದ್ದು ೩೨ ಕೋಟಿ ಮತ್ತು ಇಂಡೋನೇಷ್ಯಾ ೨೭ ಕೋಟಿ ಜನಸಂಖ್ಯೆ ಹೊಂದಿವೆ.
೨೦೨೩ ರ ಅಂಕಿಅಂಶಗಳ ಪ್ರಕಾರ, ವಿಶ್ವದ ಜನಸಂಖ್ಯೆಯು ೮೦೦ ಕೋಟಿ ದಾಟಿದೆ.
೨೦೨೭ರ ರ ವೇಳೆಗೆ, ಭಾರತವು ಚೀನಾವನ್ನು ಹಿಂದಿಕ್ಕಿ ಜನಸಂಖ್ಯೆಯ ವಿಷಯದಲ್ಲಿ ಮೊದಲ ಸ್ಥಾನಕ್ಕೆ ಏರಲಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ. ಇದರ ಜೊತೆಗೆ ೨೦೫೦ರ ಅವಧಿಯಲ್ಲಿ ಭಾರತದ ಜನಸಂಖ್ಯೆಗೆ ಹೆಚ್ಚುವರಿಯಾಗಿ ೨೭ ಕೋಟಿ ಜನಸಂಖ್ಯೆ ಸೇರ್ಪಡೆಯಾಗಲಿದೆ. ಪ್ರಸಕ್ತ ಶತಮಾನದ ಅಂತ್ಯಕ್ಕೆ ಅಂದರೆ ೨೧೦೦ನೇ ಇಸವಿಗೆ ವಿಶ್ವದ ಜನಸಂಖ್ಯೆ ೧,೧೦೦ ಕೋಟಿ ತಲುಪಲಿದೆ ಎಂದು ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ವ್ಯವಹಾರಗಳ ವಿಭಾಗದ ಅಧ್ಯಯನ ವರದಿ ಹೇಳಿದೆ. ೨೦೫೦ರ ವೇಳೆಗೆ ವಿಶ್ವದ ಒಟ್ಟು ಜನಸಂಖ್ಯೆಯಲ್ಲಿ ಆಗಲಿರುವ ಒಟ್ಟು ಏರಿಕೆಯಲ್ಲಿ ಶೇಕಡ ೫೦ಕ್ಕಿಂತ ಹೆಚ್ಚು ಪಾಲು ಕೇವಲ ಒಂಬತ್ತು ದೇಶಗಳಲ್ಲಿ ಇರಲಿದೆ. ಅವುಗಳೆಂದರೆ ಭಾರತ, ನೈಜೇರಿಯಾ, ಪಾಕಿಸ್ತಾನ, ಕಾಂಗೋ, ಇಥಿಯೋಪಿಯಾ, ತಾಂಜೇನಿಯಾ, ಇಂಡೋನೇಷ್ಯಾ, ಈಜಿಪ್ತ್ ಮತ್ತು ಅಮೆರಿಕ.
ಲಿಂಗ ಅಸಮಾನತೆ.ಬಾಲ್ಯವಿವಾಹ,ಜನರಲ್ಲಿ ಲೈಂಗಿಕತೆ, ಸಂತಾನೋತ್ಪತ್ತಿ ಮತ್ತು ಆರೋಗ್ಯದ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕಾದ ಅನಿರ್ವಾತೆ ಇದೆ.
ಬಡತನ, ಅನಕ್ಷರತೆ, ಅಜ್ಞಾನ, ಅನಾರೋಗ್ಯ, ಅತ್ಯಾಚಾರ, ಅಸುರಕ್ಷಿತ ಜೀವನ ಶೈಲಿಯಂತಹ ಹೆಚ್ಚಿನ ಜಾಗತಿಕ ಸಮಸ್ಯೆಗಳ ಬಗ್ಗೆ ಇಂದಿನ ಯುವಕರು ಮತ್ತು ಯುವತಿಯರು ಅರಿತುಕೊಂಡರೆ ಪರಿಣಾಮಕಾರಿಯಾಗಿ ಜನಸಂಖ್ಯೆ ನಿಯಂತ್ರಿಸಬಹುದು. ಪ್ರತಿಯೊಬ್ಬ ಪ್ರಜೆಯು ಜನಸಂಖ್ಯೆ ಬಗ್ಗೆ ಅರಿತು ಒಳ್ಳೆಯ ನಿರ್ಣಯ ಕೈಗೊಳ್ಳಬೇಕು. ಎಲ್ಲರೂ ಉತ್ತಮ ಆರೋಗ್ಯ ಹೊಂದಿ ನೆಮ್ಮದಿ ಜೀವನ ಸಾಗಿಸಲು ಚಿಕ್ಕ ಕುಟುಂಬ ಹೊಂದಬೇಕು.
ಜವಾಬ್ದಾರಿ ಮತ್ತು ಹೆಚ್ಚು ಕಾಳಜಿ ವಹಿಸಿ ಜನಸಂಖ್ಯಾ ಸ್ಫೋಟದ ದುಷ್ಪರಿಣಾಮಗಳ ಬಗ್ಗೆ ಮತ್ತು ಅವರ ಜವಾಬ್ದಾರಿಯನ್ನು ಸೂಕ್ತವಾಗಿ ನಿರ್ವಹಿಸಬೇಕು.
ಜನಸಂಖ್ಯೆಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು.
ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಜನಸಂಖ್ಯೆ ಸಿಡಿದೆದ್ದು ಮೂರು ಹೊತ್ತಿನ ಊಟಕ್ಕೂ ಹರಸಾಹಸ ಪಡಬೇಕಾದ ಪರಿಸ್ಥಿತಿ ಎದುರಾಗಲಿದೆ. ಪ್ರತಿಯೊಬ್ಬ ನಾಗರಿಕನು ತನ್ನ ಜವಾಬ್ದಾರಿಯನ್ನು ಅರಿತು ಅದನ್ನು ಸೂಕ್ತವಾಗಿ ನಿಭಾಯಿಸುವುದು ಅನಿವಾರ್ಯವಾಗಿದೆ. ಅದರಲ್ಲಿ ನಮ್ಮೆಲ್ಲರ ಒಳಿತೂ ಜಗತ್ತಿನ ಒಳಿತೂ ಅಡಗಿದೆ.
ಈ ವರ್ಷದ ವಿಶ್ವ ಜನಸಂಖ್ಯಾ ದಿನ ಧ್ಯೇಯ ವಾಕ್ಯ ಲಿಂಗ ಸಮಾನತೆಯ ಶಕ್ತಿಯನ್ನು ಹೊರಹಾಕುವುದು ನಮ್ಮ ಪ್ರಪಂಚದ ಅನಂತ ಸಾಧ್ಯತೆಗಳನ್ನು ತೆರೆಯಲು ಮಹಿಳೆಯರು ಮತ್ತು ಹುಡುಗಿಯರ ಧ್ವನಿಯನ್ನು ಹೆಚ್ಚಿಸುವುದು ಆಗಿದೆ.