ಇಂದು ಮತ್ತೆ ಸೋಂಕು ಇಳಿಕೆ


ಬೆಂಗಳೂರು ನ.6-ರಾಜ್ಯದಲ್ಲಿ ಕೊರೊನಾ ಸೋಂಕು ಪ್ರಕರಣದ ಏರಿಳಿತ ಮುಂದುವರೆದಿದೆ ನಿನ್ನೆ ಏರಿಕೆ ಕಂಡಿದ್ದ ಕೊರೊನಾ ಸೋಂಕು ಪ್ರಕರಣಗಳು ಇಂದು ಮತ್ತೆ ಇಳಿಕೆಯಾಗಿವೆ ನಿನ್ನೆಗೆ ಹೋಲಿಸಿದರೆ ಪ್ರಕರಣಗಳ ಸಂಖ್ಯೆ ಇಂದು ಕಡಿಮೆಯಾಗಿದೆ ಆದರೆ ಸೋಂಕಿನಿಂದ ಗುಣಮುಖರಾಗಿರುವ ಸಂಖ್ಯೆ ನೆನ್ನೆ ಗಿಂತ ಇಂದು ಕಡಿಮೆಯಾಗಿದೆ.

ಇಂದು ರಾಜ್ಯದಲ್ಲಿ 2960 ಜನರಿಗೆಸೊಂಕು ದೃಢ ಪಟ್ಟಿದೆ. ಗುಣಮುಖರಾದವರ ಸಂಖ್ಯೆಯು ಹೆಚ್ಚಿದ್ದುರಾಜ್ಯದಲ್ಲಿ ಇಂದು 2701 ಸೋಂಕಿತರು ಗುಣಮುಖರಾಗಿದ್ದಾರೆ ಹಾಗೆಯೇ ಸೋಂಕಿಗೆ 35 ಸೋಂಕಿತರು ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಒಟ್ಟು ಕೋವಿಡ್ ಸೋಂಕಿತರ ಸಂಖ್ಯೆ841889ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಒಟ್ಟು797204 ಕೋವಿಡ್ ಸೊಂಕಿತರು ಚೇತರಿಸಿಕೊಂಡಿದ್ದಾರೆ. ಮತ್ತು ಸದ್ಯಕ್ಕೆ ರಾಜ್ಯದಲ್ಲಿ ಒಟ್ಟು 33319ಸಕ್ರಿಯ ಸೋಂಕು ಪ್ರಕರಣಗಳಿವೆ. ಸೋಂಕಿನಿಂದ ಈವರೆಗೆ 11347ಜನ ಸಾವಿಗೀಡಾಗಿದ್ದಾರೆ. ರಾಜ್ಯದಲ್ಲಿ 901ಸೋಂಕಿತರು ತುರ್ತು ನಿಗಾ ಘಟಕದಲ್ಲಿ ದಾಖಲುಗೊಂಡು ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.

ಬೆಂಗಳೂರಿನಲ್ಲಿ ಕಳೆದ 24 ಗಂಟೆಯಲ್ಲಿ 1568ಮಂದಿಗೆ ಕೊರೊನಾ ಸೋಂಕು ಪ್ರಕರಣಗಳು ದೃಢಪಟ್ಟಿದ್ದು, ಒಟ್ಟಾರೆ ಸೋಂಕಿನ ಸಂಖ್ಯೆ 346702ಕ್ಕೆ ಏರಿಕೆಯಾಗಿದೆ. ನಗರದಲ್ಲು ಕಳೆದ24ಗಂಟೆಗಳಲ್ಲಿ ಸೊಂಕಿಗೆ 12ಮಂದಿಬಲಿಯಾಗಿದ್ದು , ಒಟ್ಟಾರೆ ಸಾವಿನ ಸಂಖ್ಯೆ 3938ಕ್ಕೆ ಏರಿಕೆಯಾಗಿದೆ. ಇಂದು 831ಮಂದಿಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ ಬೆಂಗಳೂರುನಲ್ಲಿ ಒಟ್ಟು17441 ಸಕ್ರಿಯ ಪ್ರಕರಣಗಳಿವೆ.

ಜಿಲ್ಲಾ ವಾರು ಸೊಂಕಿತರ ವಿವರ

ಬಾಗಲಕೋಟೆ 25 ಬಳ್ಳಾರಿ 66 ಬೆಳಗಾವಿ32ಬೆಂಗಳೂರು ಗ್ರಾಮಾಂತರ 69ಬೀದರ್01 ಚಾಮರಾಜನಗರ 18 ಚಿಕ್ಕಬಳ್ಳಾಪುರ 32 ಚಿಕ್ಕಮಗಳೂರು 42ಚಿತ್ರದುರ್ಗ 36ದಕ್ಷಿಣ ಕನ್ನಡ 79ದಾವಣಗೆರೆ 44ಧಾರವಾಡ 33 ಗದಗ 05ಹಾಸನ 97ಹಾವೇರಿ 06 ಕಲಬುರಗಿ 32ಕೊಡಗು 28ಕೋಲಾರ 48ಕೊಪ್ಪಳ 16ಮಂಡ್ಯ 119ಮೈಸೂರು 148ರಾಯಚೂರು 17ರಾಮನಗರ 32ಶಿವಮೊಗ್ಗ 57ತುಮಕೂರು 161ಉಡುಪಿ 61ಉತ್ತರ ಕನ್ನಡ 17ವಿಜಯಪುರ 53ಯಾದಗಿರಿ 18