ಇಂದು ಭಾರತೀಯ ಅಂಚೆ ದಿನ

ಭಾರತದಲ್ಲಿ ಪ್ರತಿ ವರ್ಷ ಅಕ್ಟೋಬರ್ ೧೦ ರಂದು ಭಾರತೀಯ ಅಂಚೆ ದಿನವನ್ನು ಆಚರಿಸಲಾಗುತ್ತದೆ. ಇದು ವಿಶ್ವ ಅಂಚೆ ದಿನದ ವಿಸ್ತೃತ ಆಚರಣೆಯಾಗಿದೆ.
ಈ ದಿನವು ಭಾರತ ಅಂಚೆ ಸೇವೆಯನ್ನು ಸ್ಮರಿಸುತ್ತದೆ, ಇದು ವಿಶ್ವದಲ್ಲೇ ಅತ್ಯಂತ ವ್ಯಾಪಕವಾಗಿ ಕಾರ್ಯನಿರ್ವಹಿಸುವ ಸರ್ಕಾರಿ ಅಂಚೆ ಸೇವೆಯಾಗಿದೆ. ನಮ್ಮ ಜೀವನದಲ್ಲಿ ರಾಷ್ಟ್ರೀಯ ಅಂಚೆ ಸೇವೆಯ ಪ್ರಮುಖ ಪಾತ್ರವನ್ನು ಗೌರವಿಸಲು ಭಾರತೀಯ ಅಂಚೆ ದಿನವನ್ನು ಸಹ ಆಚರಿಸಲಾಗುತ್ತದೆ.
ಅಂಚೆ ಸೇವೆಯು ವ್ಯಕ್ತಿಯಿಂದ ವ್ಯಕ್ತಿಗೆ ಸಂಪರ್ಕವನ್ನು ಉಳಿಸುವ ಏಕೈಕ ಸೇವೆಯಾಗಿದೆ. ಇದನ್ನು ಪ್ರಮುಖ ಸೇವೆಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಸಂಬಂಧಿಕರು ಪರಸ್ಪರರ ಸುಖ-ದುಃಖಗಳನ್ನು ಪತ್ರಗಳ ಮೂಲಕ ಹಂಚಿಕೊಳ್ಳುತ್ತಿದ್ದರು. ಎಷ್ಟೇ ದೂರವಿದ್ದರೂ ಪ್ರತಿಯೊಬ್ಬರಿಗೂ ಅವರದೇ ಆದ ಅಸ್ಮಿತೆ ಇದ್ದು ಇಂದಿನ ಕಾಲಘಟ್ಟದಲ್ಲಿ ಪ್ರತಿ ಕ್ಷಣದ ಸುದ್ದಿ ಕಣ್ಣು ಮಿಟುಕಿಸುವುದರಲ್ಲಿ ಸಿಗುತ್ತದೆ.ಆದರೆ ಅಕ್ಷರಗಳ ಕಾಲದ ಪ್ರೀತಿ, ಆಪ್ತತೆ ಎಲ್ಲೋ ಕಳೆದು ಹೋಗಿದೆ.
ಆಗ ಬದುಕು ಒಂದು ದಡ ಸೇರಲು ಅಂಚೆ ಪ್ರಮುಖ ಕಾರಣ ಆಗಿರುತ್ತಿತ್ತು ಸಾವಿರಾರು ಜನರು ಸರ್ಕಾರಿ ನೌಕರಿಗಳಿಗೆ ಸೇರಲು ಅಂಚೆಯಿಂದ ಬಂದ ನೇಮಕಾತಿ ಪತ್ರವೇ ಪ್ರಮುಖ ಕೊಂಡಿ.ಕಾಗದಗಳು ಪದಗಳಿಂದ ಅಲ್ಲ .ಭಾವನೆಗಳಿಂದ ತುಂಬಿರುತ್ತಿತ್ತು .ಪ್ರತಿಯೊಂದು ವಾಕ್ಯದಲ್ಲೂ ಗೌರವ ಆತ್ಮೀಯತೆ , ವಿಶ್ವಾಸ,ಸ್ನೇಹ-ಪ್ರೀತಿ ಕಾಗದ ಓದುತ್ತಿದ್ದಂತೆ ಕಣ್ಣಂಚಲಿ ತನಗೆ ತಾನೇ ನೀರು ಜಿನುಗಿ ಅಕ್ಷರ ಮುಂಜಾಗುತ್ತಿತ್ತು.ಲ್ಯಾಂಡ್ ಲೈನ್ ಫೋನು ಚಾಲ್ತಿಗೆ ಬಂದು ಅಂಚೆ ಚಕ್ರಾಧಿಪತ್ಯದಿಂದ ಕೆಳಗಿಳಿಯಿತು . ನಂತರದ ಎಸ್ ಟಿ ಡಿ,ಐಎಸ್ ಡಿ ಫೋನು ಬೂತುಗಳು, ಒಂದು ರೂಪಾಯಿಯ ಕಾಯಿನ್ ಬೂತುಗಳು, ಮೊಬೈಲುಗಳು, ಖಾಸಗೀ ಕೊರಿಯರ್ ಸಂಸ್ಥೆಗಳ
ನಡುವೆ ಅಂಚೆ ಇಲಾಖೆಗೆ ಮೊದಲಿನ ಗತ್ತು ಉಳಿಯಲಿಲ್ಲ.


ಗಡಿ ಕಾಯುವ ಯೋಧನ ಪತ್ರವನ್ನು ಆತನ ಕುಟುಂಬಿಕರಿಗೆ ತಂದು ತಲುಪಿಸುವುದರಿಂದ ಹಿಡಿದು, ರೈತನೊಬ್ಬ ಪಟ್ಟಣದಲ್ಲಿ ಓದುತ್ತಿರುವ ತನ್ನ ಮಗನಿಗೆ ಮನಿ ಆರ್ಡರ್ ಮಾಡುವವರೆಗೆ ಭಾರತ ಮತ್ತು ಭಾರತೀಯರನ್ನು ಒಂದುಗೂಡಿಸುವಲ್ಲಿ ಅಂಚೆ ಸೇವೆಗಳು ಮಹತ್ವದ ಪಾತ್ರವನ್ನು ನಿಭಾಯಿಸಿವೆ.
ಮೂರು ದಿನ ಸಮಯ ಕೇಳುತ್ತಿದ್ದ ಸುದ್ದಿ ಈಗ ಮೂರು ಸೆಂಕೆಂಡಿನಲ್ಲಿ ತಲುಪುತ್ತಿದೆ
ಅಂಚೆಯಣ್ಣ ಬರೇ ಪತ್ರಗಳನ್ನು ರವಾನಿಸುವ ವ್ಯಕ್ತಿ ಮಾತ್ರವಲ್ಲದೇ ಮನುಷ್ಯನಿಂದ ಮನುಷ್ಯನಿಗೆ, ಊರಿನಿಂದ ಊರಿಗೆ ಎಲ್ಲ ಸುದ್ದಿ ಸಮಾಚಾರಗಳನ್ನು ಅವುಗಳ ಭಾವನೆಗಳ ಸಮೇತ ದಾಟಿಸುವ ಒಂದು ಸಂಪರ್ಕ ಸೇತು. ಅವನು ಧರಿಸುವ ಸಮವಸ್ತ್ರವನ್ನು ನೋಡುವುದೇ ಏನು ಒಂದು ಸಂಭ್ರಮ.ಗ್ರಾಮೀಣ ಪ್ರದೇಶದಲ್ಲಿಗಳಲ್ಲಂತೂ ಪ್ರತಿಯೊಂದು ಮನೆಯ ವ್ಯಕ್ತಿಯ ಸಂಪೂರ್ಣ ಮಾಹಿತಿ ಅವನ ಚೀಲದಲ್ಲಿ ರುತ್ತದೆ.
ಸೈಕಲ್ ತಿಳಿದುಕೊಂಡು, ಸುದ್ದಿಗಳ ತುಂಬಿದ ಚೀಲವನ್ನು ಹೆಗಲಲ್ಲಿ ಹೇರಿಕೊಂಡು, ಚರ್ಮದ ಎಕ್ಕಡವನ್ನು ಧರಿಸಿಕೊಂಡು, ಬೆವರು ಸುರಿಸಿಕೊಂಡು ಮನೆಯಿಂದ ಮನೆಗೆ ,ವ್ಯಕ್ತಿ ಯಿಂದ ವ್ಯಕ್ತಿಗೆ ಸುದ್ದಿ ಹಂಚುವ ದೇವರೂಪಿ ಮಾನವ ಈ ಅಂಚೆಯಣ್ಣ.
ಇಂತಹ ಪರಿಸ್ಥಿತಿಯಲ್ಲಿ ರಾಷ್ಟ್ರೀಯ ಅಂಚೆ ದಿನವು ನಮಗೆ ಆ ಹಳೆಯ ದಿನಗಳನ್ನು ನೆನಪಿಸುತ್ತದೆ.
ಭಾರತ ಅಂಚೆಯನ್ನು ಮೊದಲು ೧೮೫೪ ರಲ್ಲಿ ಲಾರ್ಡ್ ಡಾಲ್ಹೌಸಿ ಸ್ಥಾಪಿಸಿದರು ಮತ್ತು ಭಾರತದಲ್ಲಿ ಸುಧಾರಿತ ಸಂವಹನಕ್ಕಾಗಿ ಮೊದಲ ಕ್ರಾಂತಿಕಾರಿ ಹೆಜ್ಜೆಗಳಲ್ಲಿ ಒಂದಾಗಿದೆ. ಭಾರತೀಯ ಅಂಚೆ ದಿನವು ಭಾರತದಲ್ಲಿ ಅಂಚೆ ಸೇವೆಯು ನಿರ್ವಹಿಸಿದ ಪಾತ್ರದ ಬಗ್ಗೆ ಕೃತಜ್ಞತೆಯನ್ನು ವ್ಯಕ್ತಪಡಿಸಲು ಮತ್ತು ಜಾಗೃತಿ ಮೂಡಿಸಲು ಒಂದು ದಿನವಾಗಿದೆ
ರಾಷ್ಟ್ರೀಯ ಅಂಚೆ ದಿನ
ರಾಷ್ಟ್ರೀಯ ಅಂಚೆ ದಿನ ಅಥವಾ ಭಾರತೀಯ ಅಂಚೆ ದಿನವನ್ನು ರಾಷ್ಟ್ರೀಯ ಮಟ್ಟದಲ್ಲಿ ಭಾರತೀಯ ಅಂಚೆ ವ್ಯವಸ್ಥೆಯ ಪಾತ್ರದ ಬಗ್ಗೆ ಜಾಗೃತಿ ಮೂಡಿಸಲು ಆಚರಿಸಲಾಗುತ್ತದೆ. ತಂತ್ರಜ್ಞಾನದೊಂದಿಗೆ ನಮ್ಮ ಜೀವನವು ವೇಗವಾಗಿ ಮತ್ತು ಸುಲಭವಾಗಿದೆ ಮತ್ತು ಜನರು ನಮ್ಮಿಂದ ಎಷ್ಟು ದೂರದಲ್ಲಿದ್ದರೂ ನಾವು ಅವರೊಂದಿಗೆ ಸುಲಭವಾಗಿ ಸಂಪರ್ಕ ಸಾಧಿಸಬಹುದು. ಕೆಲವು ದಶಕಗಳ ಹಿಂದೆ, ಇದು ದೂರದ ಕನಸಾಗಿತ್ತು ಮತ್ತು ಪೋಸ್ಟ್ ಮೂಲಕ ಸಂವಹನದ ಏಕೈಕ ವಿಧಾನವಾಗಿತ್ತು. ಭಾರತೀಯ ಅಂಚೆ ಸೇವೆಯಲ್ಲಿ ತೊಡಗಿರುವವರಿಗೆ ಗೌರವ ಸಲ್ಲಿಸಲು ರಾಷ್ಟ್ರೀಯ ಅಂಚೆ ದಿನವನ್ನು ಆಚರಿಸಲಾಗುತ್ತದೆ.
ಜಗತ್ತು ಡಿಜಿಟಲ್ ಆಗಿದ್ದರೂ, ಜನರು ಇನ್ನೂ ವಿವಿಧ ಉದ್ದೇಶಗಳಿಗಾಗಿ ಅಂಚೆ ಸೇವೆಗಳನ್ನು ಅವಲಂಬಿಸಿದ್ದಾರೆ. ಭಾರತೀಯ ಅಂಚೆ ದಿನವು ಜನರನ್ನು ಸಂಪರ್ಕಿಸಲು ಭಾರತ ಪೋಸ್ಟ್ ಮಾಡಿದ ನಿರಂತರ ಪ್ರಯತ್ನವನ್ನು ಗೌರವಿಸುವ ಒಂದು ಮಾರ್ಗವಾಗಿದೆ.