
ಬೀದರ, ಆ. 13 ಃ 12ನೇ ಶತಮಾನದಲ್ಲಿ ವಿಶ್ವಕ್ಕೆ ಕಾಯಕದ ಮಹತ್ವ, ವಚನಗಳ ಮೂಲಕ ವಿಶ್ವಕ್ಕೆ ಸಮಾನತೆಯ ಸಂದೇಶ ಸಾರಿದ ವಿಶ್ವಗುರು ಬಸವಣ್ಣನವರ ಸಂದೇಶಗಳನ್ನು ಮರಣವೇ ಮಹಾನವಮಿ, ತುಮಾರೆ ಶಿವಾ ಔರ್ ಕೋಹಿ ನಹಿ ಎಂಬ ವಿಶ್ವಗುರು ಬಸವಣ್ಣನವರ 38 ವಚನಗಳ ನೃತ್ಯರೂಪಕ ಸೇರಿದಂತೆ ಇತರೆ ನಾಟಕಗಳ ಮೂಲಕ ದೇಶದ 30 ಮಹಿಳಾ ಕಲಾವಿದರ ತಂಡ ಒಳಗೊಂಡಂತೆ ಚಿತ್ರದುರ್ಗ ಜಿಲ್ಲೆಯ ಸಾಣೇಹಳ್ಳಿ ಶ್ರೀ ಪಂಡಿತಾರಾಧ್ಯ ಶಿವಕುಮಾರ ಶಿವಾಚಾರ್ಯ ಸ್ವಾಮಿಗಳ ನೇತೃತ್ವದಲ್ಲಿ ಭಾರತದ 10 ರಾಜ್ಯಗಳ 21 ಪ್ರಮುಖ ನಗರಗಳಲ್ಲಿ ಸುಮಾರು 12 ಸಾವಿರಕ್ಕೂ ಹೆಚ್ಚು ಕಿ.ಮೀ ಸಂಚರಿಸಿ 45 ಪ್ರದರ್ಶನ ನೀಡಿ, ಬೀದರ ಜಿಲ್ಲೆಗೆ ಆಗಮಿಸುತ್ತಿರುವ ಪೂಜ್ಯರ ಸ್ವಾಗತಕ್ಕಾಗಿ ಪೂರ್ವಭಾವಿ ಸಭೆಯನ್ನು ದಿನಾಂಕ 13-08-2013 ರಂದು ಸಂಜೆ 5 ಗಂಟೆಗೆ ಬೀದರ ನಗರದ ಡಾ. ಚನ್ನಬಸವ ಪಟ್ಟದ್ದೇವರು ರಂಗ ಮಂದಿರದ ಒಳಾಂಗಣದಲ್ಲಿ ಕರೆಯಲಾಗಿದೆ ಎಂದು ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ಅಧ್ಯಕ್ಷರಾದ ವಿಜಯಕುಮರ ಸೋನಾರೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಸಭೆಯಲ್ಲಿ ಕಲ್ಯಾಣ ಕರ್ನಾಟಕ ಭಾಗ ಸೇರಿದಂತೆ ಬೀದರ ಜಿಲ್ಲೆಯ ಕಲಾವಿದರು, ಚಿಂತಕರು, ಸಾಹಿತಿಗಳು, ಸಂಘಟಕರು, ಹೆಚ್ಚಿನ ಸಂಖ್ಯೆಯಲ್ಲಿ ಭಾಗವವಹಿಸಿ, ಈ ಸಭೆಯನ್ನು ಯಶಸ್ವಿಗೊಳಿಸಬೇಕು ಎಂದು ಕೋರಿದ್ದಾರೆ.