ಇಂದು ನೀಲಿಚಂದ್ರ ಗೋಚರ

ಬೆಂಗಳೂರು,ಅ.೩೧-ನೀಲಿ ಬಾನಂಗಳದಲ್ಲಿ ಇಂದು ಅಪರೂದಲ್ಲಿ ಅಪರೂಪವೆಂಬಂತೆ ಆಕರ್ಷಣೀಯ ನೀಲಿ ಚಂದ್ರ ಗೋಚರಿಸಲಿದ್ದು, ಈ ಸಮಯ ಕಣ್ತುಂಬಿಕೊಳ್ಳುವ ತವಕ ಜನರಲ್ಲಿ ಮನೆ ಮಾಡಿದೆ.
ಅಷ್ಟಕ್ಕೂ ಬಾನಂಗಳದಲ್ಲಿ ನೀಲಿ ಚಂದ್ರ ಯಾವಾಗ ಗೋಚರಿಸುತ್ತಾನೆ , ನೀಲಿ ಚಂದ್ರ ಅಂದರೆ ಏನು ಎಂಬ ಕುತೂಹಲ ಜನರನ್ನು ಕಾಡುತ್ತಿದೆ.
ಏನಿದು ನೀಲಿಚಂದ್ರ ?
ಇಂದು ರಾತ್ರಿ ಬಾನಂಗಳದಲ್ಲಿ ಖಗೋಳ ವಿಸ್ಮಯ ನಡೆಯಲಿದ್ದು, ರಾತ್ರಿ ೮.೧೯ಕ್ಕೆ ಸರಿಯಾಗಿ ನೀಲಿ ಚಂದ್ರ ಕಂಗೊಳಸಲಿದ್ದು, ಸಾಮಾನ್ಯವಾಗಿ ತಿಂಗಳಿಗೆ ಒಂದು ಹುಣ್ಣಿಮೆ ಬರುತ್ತದೆ. ಆದರೆ ಈ ಬಾರಿ ಒಂದೇ ತಿಂಗಳಿನಲ್ಲಿ ಎರಡು ಹುಣ್ಣಿಮೆ ಬಂದಿದೆ. ಈ ತಿಂಗಳ ಎರಡನೇ ಹುಣ್ಣಿಮೆಯಂದು ಗೋಚರಿಸುವ ಚಂದ್ರನನ್ನು ಬ್ಲೂ ಮೂನ್ ಎಂದು ಕರೆಯುತ್ತಾರೆ. “ಬ್ಲೂ ಮೂನ್ ಎಂದಾಕ್ಷಣ ಚಂದ್ರ ನೀಲಿ ಬಣ್ಣದಲ್ಲಿ ಕಾಣುತ್ತಾನೆ ಎಂದರ್ಥವಲ್ಲ. ಅಕ್ಟೋಬರ್ ೧ ರಂದು ಮೊದಲ ಹುಣ್ಣಿಮೆ ಬಂದರೆ ಅಕ್ಟೋಬರ್ ೩೧ ರಂದು ಇಂದು ಎರಡನೇ ಹುಣ್ಣಿಮೆ ಬಂದಿರುವುದು ಅಚ್ಚರಿ ತರಿಸಿದೆ.
ಎಷ್ಟು ಸಮಯ ಬೇಕು ?
ರಗೋರಿಯನ್ ಕ್ಯಾಲೆಂಡರ್ ಪ್ರಕಾರ ಒಂದು ಹುಣ್ಣಿಮೆಯಿಂದ ಇನ್ನೊಂದು ಹುಣ್ಣಿಮೆ ನಡುವಿನ ಅವಧಿ ೨೯ ದಿನ, ೪೪ ನಿಮಿಷ, ೩೮ ಸೆಕೆಂಡ್ ಆಗಿರುತ್ತದೆ. ೩೦ ದಿನ ತುಂಬಲು ಬಾಕಿ ಉಳಿದ ಸಮಯವೆಲ್ಲಾ ಸೇರಿ ಕೊನೆಗೆ ಒಂದು ತಿಂಗಳಲ್ಲಿ ಎರಡು ಹುಣ್ಣಿಗೆ ಬರುತ್ತದೆ. ಸಾಮಾನ್ಯವಾಗಿ ಎರಡು ಮೂರು ವರ್ಷಕ್ಕೊಮ್ಮೆ ಈ ವಿದ್ಯಮಾನ ಘಟಿಸುತ್ತದೆ. ಈ ಹಿಂದೆ ೨೦೧೮ರಲ್ಲಿ ಬ್ಲೂ ಮೂನ್ ಗೋಚರಿಸಿತ್ತು. ೩೧ ದಿನಗಳು ಇರುವ ತಿಂಗಳಿನಲ್ಲಿ ಬ್ಲೂ ಮೂನ್ ಸಾಮಾನ್ಯವಾಗಿ ಗೋಚರಿಸುತ್ತದೆ. ಆದರೆ ೩೦ ದಿನಗಳಲ್ಲಿ ಬ್ಲೂ ಮೂನ್ ಗೋಚರಿಸುವುದು ಅಪರೂಪದಲ್ಲಿ ಅಪರೂಪ ಎನ್ನಲಾಗಿದೆ.
ಖಗೋಳ ತಜ್ಞರ ಅಭಿಮತ
ಇದು ಖಗೋಳದಲ್ಲಿ ಸಹಜ ಪ್ರಕ್ರಿಯೆಯಾಗಿದ್ದು, ಸ್ವಾಭಾವಿಕ ಹುಣ್ಣಿಮೆಯಾಗಿದೆ. ಆದರೆ ಅಪರೂಪವಷ್ಟೇ. ಎಲ್ಲಾ ಹುಣ್ಣಿಮೆ ರೀತಿಯೇ ಈ ಹುಣ್ಣಿಮೆ ಕೂಡ. ಬ್ಲೂ ಮೂನ್ ಎಂದಾಕ್ಷಣ ಚಂದ್ರನ ಬಣ್ಣ ನೀಲಿ ಇರುವುದಿಲ್ಲ. ಬ್ಲೂ ಮೂನ್ ಗೂ ಬಣ್ಣಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಹಿರಿಯ ವಿಜ್ಞಾನಿ ಡಾ.ಆನಂದ ತಿಳಿಸಿದ್ದಾರೆ.
ಜ್ಯೋತಿಷಿಗಳು ಏನು ಹೇಳುತ್ತಾರೆ ?
ಈ ಬಾರಿಯ ಬ್ಲೂ ಮೂನ್ ಶುಭಕಾರಕವಾಗಿದ್ದು, ನೀಲಿ ಚಂದ್ರನ ದರ್ಶನದಿಂದ ಲೋಕ ಕ್ಷೇಮ, ಶಾಂತಿ, ನೆಮ್ಮದಿ ಕಾಣಲಿದೆ. ಆದರೆ, ಕೆಲವು ಜನರಿಗೆ ಈ ಬ್ಲೂ ಮೂನ್ ಬಾಧಕಾರಕವಾಗಲಿದೆ. ಶೀಘ್ರವೇ ಕೊರೊನಾದಿಂದ ಜಗತ್ತಿಗೆ ಮುಕ್ತಿ ಸಿಗಲಿದೆ ಎಂದು ಗವಿ ಗಂಗಾಧರ ದೇವಾಲಯದ ಅರ್ಚಕ ಸೋಮಸುಂದರ ದೀಕ್ಷಿತ್ ತಿಳಿಸಿದ್ದಾರೆ.
ಈ ಬಾರಿಯ ಹುಣ್ಣಿಮೆಯಿಂದ ಒಂದಿಷ್ಟು ಜನಕ್ಕೆ, ಒಂದಿಷ್ಟು ರಾಶಿಯವರಿಗೆ ಸಮಸ್ಯೆಯಾಗಬಹುದು. ದೇವಿ ಅಥವಾ ಪರಶಿವನ ಆರಾಧನೆಯಿಂದ ಒಳಿತಾಗಲಿದೆ. ಮುಂಬರುವ ದಿನಗಳಲ್ಲಿ ಪ್ರಾಕೃತಿಕ ವೈಪ್ಯರಿತ್ಯ ಆಗಲಿದೆ. ಕೋವಿಡ್ ಮಹಾಮಾರಿಯಿಂದ ಸದ್ಯದಲ್ಲೆ ಮುಕ್ತಿ ಸಿಗಲಿದೆ ಎಂದು ಖ್ಯಾತ ಜ್ಯೋತಿಷಿ ಆನಂದ ಗುರೂಜಿ ತಿಳಿಸಿದ್ದಾರೆ.
ಬ್ಲೂ ಮೂನ್ ಹಿಂದಿನ ದಿನವೇ ದುರಂತ
ಬ್ಲೂ ಮೂನ್ ಹಿಂದಿನ ದಿನವೇ ವಿಶ್ವದ ಹಲವೆಡೆ ಸಾವು-ನೋವು ಸಂಭವಿಸಿದೆ. ತೀವ್ರ ಭೂಕಂಪಕ್ಕೆ ಟರ್ಕಿ, ಗ್ರೇಸ್, ಬಲ್ಗೇರಿಯಾ ತತ್ತರಿಸಿದ್ದು, ನೂರಾರು ಕಟ್ಟಡಗಳು ಧರೆಗುರುಳಿವೆ. ಇಪ್ತತ್ತಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದು, ನೂರಾರು ಮಂದಿ ಗಾಯಗೊಂಡಿದ್ದಾರೆ. ಈ ಮಿನಿ ಸುನಾಮಿಯಿಂದ ಟರ್ಕಿಯ ನಗರಗಳಿಗೆ ನೀರು ನುಗ್ಗಿದೆ. ಗ್ರೇಸ್ ರಾಜ್ಯಧಾನಿ ಅಥೆನ್ಸ್, ಸಮೋವ ದ್ವೀಪ ಸಮೂಹ, ಬಲ್ಗೇರಿಯಾದಲ್ಲೂ ಭೂಮಿ ಕಂಪಸಿದ್ದು, ಜನರಲ್ಲಿ ಭಯ ಮೂಡಿಸಿದೆ.