ಇಂದು ನಟಿ ಕಂಗನಾ ರನಾವತ್ ಜನ್ಮದಿನ. ’ಅತ್ಯುತ್ತಮ ನಟಿ ಪ್ರಶಸ್ತಿ’ ಘೋಷಣೆಯ ಖುಷಿ, ’ಥಲೈವೀ’ ಫಿಲ್ಮ್ ನ ಟ್ರೈಲರ್ ರಿಲೀಸ್

ಮಾರ್ಚ್ ೨೩ ನಟಿ ಕಂಗನಾ ರನಾವತ್ ಅವರ ೩೪ನೇ ಜನ್ಮದಿನ (೧೯೮೭) .ಈ ಬಾರಿ ಅತಿ ಹೆಚ್ಚು ಖುಷಿ. ನಿನ್ನೆ ೬೭ನೇ ರಾಷ್ಟ್ರೀಯ ಫಿಲ್ಮ್ ಪ್ರಶಸ್ತಿಯ ಘೋಷಣೆ ಆಗಿದೆ. ಕಂಗನಾ ರನಾವತ್ ಅವರಿಗೆ ತಮ್ಮ ಫಿಲ್ಮ್ ಬದುಕಿನ ನಾಲ್ಕನೇ ರಾಷ್ಟ್ರೀಯ ಪ್ರಶಸ್ತಿ ದೊರೆತಿರುವ ಖುಷಿ. ೨೦೧೯ರ ಫಿಲ್ಮ್ ಗಳನ್ನು ಈ ಬಾರಿ ಪ್ರಶಸ್ತಿಗಳಿಗೆ ಆಯ್ಕೆ ಮಾಡಲಾಗಿದೆ. ಕಳೆದ ವರ್ಷ ಕೊರೊನಾ ಕಾರಣ ಪ್ರಶಸ್ತಿ ಘೋಷಣೆ ಆಗಿರಲಿಲ್ಲ.


ಕಂಗನಾ ರನಾವತ್ ಅವರ ’ಮಣಿಕರ್ಣಿಕಾ’ ಮತ್ತು ’ಪಂಗಾ’ ಅಭಿನಯಕ್ಕಾಗಿ ಅವರಿಗೆ ಅತ್ಯತ್ತಮ ನಟಿ ರಾಷ್ಟ್ರೀಯ ಪ್ರಶಸ್ತಿ ದೊರೆತಿದೆ. ಇದಕ್ಕಿಂತ ಮೊದಲು ’ಫ್ಯಾಶನ್’ (೨೦೦೮,) ಗೆ ಪೋಷಕ ನಟಿ ಪ್ರಶಸ್ತಿ, ’ಕ್ವೀನ್’ (೨೦೧೪) ಗೆ ಅತ್ಯುತ್ತಮ ನಟಿ ಪ್ರಶಸ್ತಿ, ’ತನು ವೆಡ್ಸ್ ಮನು ರಿಟರ್ನ್ಸ್’(೨೦೧೫) ಗೆ ಅತ್ಯುತ್ತಮ ನಟಿ ಪ್ರಶಸ್ತಿ ದೊರೆತಿದೆ.ಇದೀಗ ನಾಲ್ಕನೇ ಬಾರಿ ಅತ್ಯತ್ತಮ ನಟಿ ಪ್ರಶಸ್ತಿ ಕಂಗನಾರ ಪಾಲಿಗೆ ಬಂದಿದೆ .
ಮತ್ತೊಂದೆಡೆ ಇಂದು ಕಂಗನಾರ ಅಫ್ ಕಮಿಂಗ್ ಫಿಲ್ಮ್ ’ತಲೈವೀ’ ಇದರ ಟ್ರೈಲರ್ ರಿಲೀಸ್ ಮಾಡಲಿದ್ದಾರೆ.
ಈ ಟ್ರೈಲರ್ ಮುಂಬೈ ಮತ್ತು ಚೆನ್ನೈ ಎರಡೂ ಶಹರಗಳಲ್ಲಿ ರಿಲೀಸ್ ಮಾಡಲಾಗುವುದು. ತಲೈವೀ ತಮಿಳುನಾಡಿನ ಮಾಜಿ ಸಿ ಎಂ ಜಯಲಲಿತಾರ ಬದುಕಿನ ಕಥೆಯಾಧಾರಿತ ಫಿಲ್ಮ್.
ಇಂದು ಮಂಗಳವಾರ ಕಂಗನಾ ಅವರ ಜನ್ಮದಿನ .ತಲೈವೀ ಟ್ರೈಲರ್ ಬಿಡುಗಡೆಯ ಮೊದಲು ಮೊನ್ನೆ ಚಿತ್ರೀಕರಣದ ಸಂದರ್ಭದಲ್ಲಿನ ಕೆಲವು ಫೋಟೋಗಳನ್ನು ಕಂಗನಾ ಶೇರ್ ಮಾಡಿದ್ದಾರೆ. ಈ ಫಿಲ್ಮ್ ಗಾಗಿ ಕಂಗನಾ ಅಂದು ೨೦ ಕಿಲೋ ತೂಕವನ್ನು ಹೆಚ್ಚಿಸಿದ್ದರು, ಅರ್ಥಾತ್ ಜಯಲಲಿತಾರಂತೆ ಕಾಣಲು. ಶೂಟಿಂಗ್ ನಂತರ ಇದೀಗ ಆ ತೂಕವನ್ನು ಇಳಿಸಿದ್ದಾರೆ.


ಶೂಟಿಂಗ್ ಸಂದರ್ಭದ ಚಿತ್ರಗಳನ್ನು ಕಂಗನಾ ಶೇರ್ ಮಾಡುತ್ತಾ – “ತಲೈವೀ ಟ್ರೇಲರ್ ಲಾಂಚ್ ಗಾಗಿ ಇನ್ನು ಕೆಲವೇ ಕ್ಷಣಗಳು” ಎಂದಿದ್ದಾರೆ. “ದೇಹದ ತೂಕವನ್ನು ಹೆಚ್ಚಿಸುವುದು ಮತ್ತು ೨೦ ಕಿಲೋ ತೂಕ ಇಳಿಸುವುದು ಸುಲಭದ ಸಂಗತಿಯಾಗಿರಲಿಲ್ಲ. ಇದೊಂದು ಸವಾಲಾಗಿತ್ತು” ಎಂದಿದ್ದಾರೆ ಕಂಗನಾ.
ಕಳೆದ ಐದು ತಿಂಗಳ ಹಿಂದೆಯೇ ಸೋಶಿಯಲ್ ಮೀಡಿಯಾದಲ್ಲಿ ತನ್ನ ದೇಹದ ತೂಕವನ್ನು ಹೆಚ್ಚಿಸುತ್ತಿರುವುದನ್ನು ಕಂಗನಾ ತಿಳಿಸಿದ್ದರು. ಅವರು ಆ ಸಂದರ್ಭದಲ್ಲಿ ಯೋಗ ಸೆಶನ್ ನ ಕೆಲವು ಫೋಟೋಗಳನ್ನೂ ಹಾಕಿದ್ದರು. “ಶೀಘ್ರ ಮಲಗೋದು ಮತ್ತೆ ಜಾಗಿಂಗ್, ವಾಕ್… ಏನೆಲ್ಲ ನನ್ನ ಜೊತೆಗಿತ್ತು ಆ ಸಂದರ್ಭದಲ್ಲಿ” ಎಂದಿದ್ದರು.
ತಲೈವೀ ಜಯಲಲಿತಾರ ಬಯೋಗ್ರಫಿ. ಎಪ್ರಿಲ್ ೨೩ರಂದು ಈ ಫಿಲ್ಮ್ ಹಿಂದಿ ತಮಿಳು ತೆಲುಗು ಭಾಷೆಗಳಲ್ಲಿ ರಿಲೀಸ್ ಆಗಲಿದೆ . ಎ ಎಲ್. ವಿಜಯ್ ನಿರ್ದೇಶನದಲ್ಲಿ ನಿರ್ಮಿಸಿರುವ ಈ ಫಿಲ್ಮ್ ಕಳೆದ ವರ್ಷ ಜೂನ್ ೨೬ಕ್ಕೆ ಬಿಡುಗಡೆಯಾಗಬೇಕಿತ್ತು. ಆದರೆ ಕೊರೊನಾ ಲಾಕ್ಡೌನ್ ಕಾರಣ ಏಳು ತಿಂಗಳ ಕಾಲ ಶೂಟಿಂಗ್ ನಡೆಯಲಿಲ್ಲ. .ಕಳೆದ ಅಕ್ಟೋಬರ್೪ ರಿಂದ ಮತ್ತೆ ಕಂಗನಾ ಶೂಟಿಂಗ್ ಗೆ ಹಾಜರಾಗಿದ್ದರು.

’ಸಿಲ್ ಸಿಲಾ’ ಮತ್ತು ’ಕಹೋ ನ ಪ್ಯಾರ್ ಹೈ’ ಇಂತಹ ಫಿಲ್ಮ್ ಗಳ ಲೇಖಕ ಸಾಗರ್ ಸರಹದೀ ನಿಧನ

ದಿಗ್ಗಜ ಫಿಲ್ಮ್ ಮೇಕರ್ ಮತ್ತು ರೈಟರ್ ಸಾಗರ್ ಸರಹದೀ ಹೃದಯಾಘಾತದಿಂದ ನಿನ್ನೆ ಮಾರ್ಚ್ ೨೨ ರಂದು ಮುಂಬೈಯಲ್ಲಿ ನಿಧನರಾದರು. ಅವರಿಗೆ ೮೮ ವರ್ಷವಾಗಿತ್ತು. ಕೆಲವು ಸಮಯದಿಂದ ಅವರು ಮುಂಬಯಿಯ ಒಂದು ಕಾರ್ಡಿಯಾಕ್ ಕೇರ್ ಹಾಸ್ಪಿಟಲ್ ನಲ್ಲಿ ಐಸಿಯುನಲ್ಲಿದ್ದರು.
ಸರಹದೀ ಅವರು ಸ್ಮಿತಾ ಪಾಟೀಲ್, ನಾಸಿರುದ್ದಿನ್ ಶಾ ಅಭಿನಯದ ಬಾಜಾರ್ (೧೯೮೨) ನ್ನು ನಿರ್ದೇಶಿಸಿದ್ದರು. ಫಾರೂಖ್ ಶೇಖ್ ,ನಾಸಿರುದ್ದೀನ್ ಶಾ,ಶಬನಾ ಅಜ್ಮಿ ಅಭಿನಯದ ’ಲೋರಿ’ (೧೯೮೪) ಇದರ ನಿರ್ಮಾಪಕರಾಗಿದ್ದರು. ಹೃತಿಕ್ ರೋಶನ್, ಅಮಿಷಾ ಪಟೇಲ್ ಅಭಿನಯದ ಕಹೋ ನ ಪ್ಯಾರ್ ಹೈ ಫಿಲ್ಮ್ ನ ಸ್ಕ್ರೀನ್ ರೈಟರ್ ಆಗಿದ್ದರು. ಖ್ಯಾತ ಲೇಖಕ ನಿರ್ದೇಶಕರಾದ ಇವರು ಕಭೀ ಕಭೀ, ನೂರೀ ,ಚಾಂದ್ ನಿ ,ದೂಸ್ರಾ ಆದ್ಮಿ, ಸಿಲ್ ಸಿಲಾ….. ಇಂತಹ ಫಿಲ್ಮ್ ಗಳ ಲೇಖಕರೂ ಆಗಿದ್ದರು.


ಹನೀ ಇರಾನಿ- ರವಿ ಕಪೂರ್ ರ ಜೊತೆಗೂಡಿ ಕಹೋ ನ ಪ್ಯಾರ್ ಹೈ ಫಿಲ್ಮ್ ನ ಸ್ಕ್ರೀನ್ ಪ್ಲೇ ಬರೆದಿದ್ದರು.
ರಿಷಿ ಕಪೂರ್- ದಿವ್ಯಾ ಭಾರತಿ ಮತ್ತು ಶಾರುಖ್ ಖಾನ್ ಅಭಿನಯದ ’ದೀವಾನ’ ಸ್ಕ್ರಿಪ್ಟ್ ಬರೆದವರು. ಇವರ ಡೈಲಾಗ್ಸ್ ಬರೆದ ಫಿಲ್ಮ್ ಗಳೆಲ್ಲ ಯಶಸ್ಸು ಕಂಡಿತ್ತು. ಕಭೀ ಕಭೀ, ನೂರೀ, ಚಾಂದಿನಿ, (೧೯೮೯) ಇಂತಹ ಫಿಲ್ಮ್ ಗಳೆಲ್ಲ ಯಾವತ್ತೂ ಮರೆಯುವಂಥದ್ದಲ್ಲ.
ಸರಹದೀ ಅವರ ಜನ್ಮ ೧೯೩೩ ರಲ್ಲಿ ಉತ್ತರಪಶ್ಚಿಮ ಸೀಮಾಂತ ಪ್ರಾಂತದಲ್ಲಿ ಆಗಿತ್ತು.ಅವರ ತಂದೆ-ತಾಯಿ ಇರಿಸಿದ ಹೆಸರು ಗಂಗಾ ಸಾಗರ್ ತಲವಾರ್. ಫಿಲ್ಮ್ ಗೆ ಬಂದ ನಂತರ ಅವರು ತಮ್ಮ ಹೆಸರು ಬದಲಿಸಿ ಸಾಗರ್ ಸರಹದೀ ಎಂದಿರಿಸಿದರು. ಅವರು ಉರ್ದು ಬರಹಗಾರರಾಗಿದ್ದರು.

ಕೋವಿಡ್ ೧೯ ಎರಡನೇ ಅಲೆ: ಮತ್ತೆ ಬಾಕ್ಸಾಫೀಸ್ ಗೆ ಹೊಡೆತ.

ಮಾರ್ಚ್ ತಿಂಗಳಿನಿಂದ ಓಟಿಟಿ ಪ್ಲಾಟ್ ಫಾರಂ ಬೇಡ ,ಟಾಕೀಸುಗಳಲ್ಲಿ ಸಿನಿಮಾ ಬಿಡುಗಡೆ ಮಾಡೋಣ ಎಂದು ಹೊರಟರೆ, ಇದೀಗ ಮಹಾರಾಷ್ಟ್ರದಲ್ಲಿ ಕೋವಿಡ್-೧೯ ಎರಡನೆ ಅಲೆಯ ಹರಡುವಿಕೆಯಿಂದ ಮತ್ತೆ ಸಿನಿಮಾ ಟಾಕೀಸುಗಳಲ್ಲಿ ೫೦ ಪ್ರತಿಶತ ಸೀಟುಗಳು ಮಾತ್ರ ಮೀಸಲು ಇರುವ ಕಾರಣ ಹಲವು ಫಿಲ್ಮ್ ಗಳು ಹೊಡೆತ ಅನುಭವಿಸುತ್ತಿವೆ.


’ಮುಂಬಯಿ ಸಾಗಾ’ ಬಾಕ್ಸ್ ಆಫೀಸ್ ನಲ್ಲಿ ಅಂತಹ ಪವಾಡವೇನೂ ಸೃಷ್ಟಿಸಲಿಲ್ಲ. ಇದರಲ್ಲಿ ಪ್ರಸಿದ್ಧ ನಟ-ನಟಿಯರು ಇದ್ದರೂ ಕೇವಲ ಮೊದಲೆರಡು ದಿನಗಳಲ್ಲಿ ೫.೨೨ ಕೋಟಿ ರೂಪಾಯಿ ಕಲೆಕ್ಷನ್ ಮಾತ್ರ ಮಾಡಿದೆ. ಮೊದಲ ದಿನ ೨.೮೨ ಕೋಟಿ ರೂ, ಎರಡನೇ ದಿನ ೨.೪೦ ಕೋಟಿ ರೂ.ಕಲೆಕ್ಷನ್ ಮಾಡಿಕೊಟ್ಟಿದೆ.


ಈ ಫಿಲ್ಮ್ ನ ಪಬ್ಲಿಸಿಟಿ ಕೂಡ ಬಹಳ ಜಬರ್ದಸ್ತ್ ಇತ್ತು. ಫಿಲ್ಮ್ ನ ಕಲೆಕ್ಷನ್ ಮಾತ್ರ ಕೋವಿಡ್ ಮಹಾಮಾರಿಯ ಕಾರಣ ಪ್ರಭಾವ ಬೀರಿದೆಯಂತೆ. ಮಹಾರಾಷ್ಟ್ರದಲ್ಲಿ ಈ ಫಿಲ್ಮ್ ಉತ್ತಮ ಪ್ರದರ್ಶನ ನೀಡುವ ಉಮೇದು ಇರಿಸಲಾಗಿತ್ತು .ಆದರೆ ಕೆಲವು ರಾಜ್ಯಗಳಲ್ಲಿ ೫೦ ಪ್ರತಿಶತ ಪ್ರೇಕ್ಷಕರ ಉಪಸ್ಥಿತಿಯಲ್ಲಿ ಪ್ರದರ್ಶಿಸಿದ್ದರಿಂದ ಕಲೆಕ್ಷನ್ ಇಳಿಕೆಯಾಗಿದೆ.
ಅತ್ತ ಸಂದೀಪ ಅಂಡ್ ಪಿಂಕಿ ಫರಾರ್ ಫಿಲ್ಮ್ ಕೂಡಾ ಬಾಕ್ಸಾಫೀಸ್ ಕಲೆಕ್ಷನ್ ನಲ್ಲಿ ೨ ದಿನದಲ್ಲಿ ಕೇವಲ ಹನ್ನೊಂದು ಲಕ್ಷ ರೂ.ಮಾತ್ರ ಕಲೆಕ್ಷನ್ ಮಾಡಿತ್ತು. ಮೊದಲ ದಿನ ಐದು ಲಕ್ಷ ರೂ, ಎರಡನೇ ದಿನ ೬ ಲಕ್ಷ ರೂ ಕಲೆಕ್ಷನ್ ಮಾಡಿದೆ. ವಾಹ್ ಅರ್ಜುನ್ ಕಪೂರ್… ಎಂದು ತಮಾಷೆ ಮಾಡಿದ್ದಾರೆ ಕ್ರಿಟಿಕ್ಸ್ ಕಮಲ್ ರಶೀದ್.