ಇಂದು ಜಿಲ್ಲಾಧಿಕಾರಿಗಳೊಂದಿಗೆ ನೇರ ಫೊನ್ ಇನ್ ಕಾರ್ಯಕ್ರಮ

ರಾಯಚೂರು,ಏ.೨೧- ರಾಯಚೂರು ಆಕಾಶವಾಣಿ ಎಫ್.ಎಂ ಕೇಂದ್ರದಲ್ಲಿ ಏ.೨೨ ರಂದು ಸಂಜೆ ೭ ಗಂಟೆ ೪೫ ನಿಮಿಷದಿಂದ ರಾಯಚೂರು ಜಿಲ್ಲಾಧಿಕಾರಿ ಆರ್. ವೆಂಕಟೇಶ ಕುಮಾರ್ ಅವರೊಂದಿಗೆ ನೇರ ಫೋನ್ ಇನ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ರಾಯಚೂರು ಜಿಲ್ಲೆಯಲ್ಲಿ ಕೊರೋನಾ ನಿಯಂತ್ರಣ ಕ್ರಮಗಳು, ಲಸಿಕೆ ನೀಡುವ ವ್ಯವಸ್ಥೆ ಮತ್ತು ಕರ್ಫ್ಯೂ ನಿಯಮಾವಳಿಗಳು ಈ ಕುರಿತಾದ ಕೇಳುಗರ ಪ್ರಶ್ನೆಗಳಿಗೆ ರಾಯಚೂರು ಜಿಲ್ಲೆಯ ಜಿಲ್ಲಾಧಿಕಾರಿಗಳಾದ ಆರ್. ವೆಂಕಟೇಶ ಕುಮಾರ್ ಅವರು ಉತ್ತರಿಸಲಿದ್ದಾರೆ.
ಕೇಳುಗರು ರಾಯಚೂರು ಆಕಾಶವಾಣಿ ಮೊಬೈಲ್ ಸಂಖ್ಯೆ : ೯೪೪೯೮೧೭೩೨೨, ಅಥವಾ ದೂರವಾಣಿ ಸಂಖ್ಯೆ ೦೮೫೩೨-೨೨೩೩೬೫ ಸಂಖ್ಯೆಗಳೀಗೆ ಕರೆ ಮಾಡಿ ಕೊರೋನಾ ಕುರಿತಾದ ಪ್ರಶ್ನೆಗಳಿಗೆ ಜಿಲ್ಲಾಧಿಕಾರಿಗಳಿಂದ ಉತ್ತರ ಪಡೆಯಬಹುದಾಗಿದೆ ಎಂದು ಆಕಾಶವಾಣಿ ಮುಖ್ಯಸ್ಥರಾದ ಡಾ. ಬಿ.ಎಂ ಶರಭೇಂದ್ರಸ್ವಾಮಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.