ಇಂದು ಚೆನ್ನೈಗೆ ಲಕ್ನೊ ಸವಾಲು

ಲಕ್ನೊ: ಸೋತು ನಿರಾಸೆ ಅನುವಿಸಿರುವ ಲಕ್ನೊ ಸೂಪರ್ ಜೈಂಟ್ಸ್ ತವರಿನಲ್ಲಿ ಇಂದು ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಲಿದೆ.
ಇಲ್ಲಿನ ಏಕನಾ ಮೈದಾನದಲ್ಲಿ ನಡೆಯಲಿರುವ ಪಂದ್ಯದಲ್ಲಿ ಲಕ್ನೊ ಸೂಪರ್ ಜೈಂಟ್ಸ್ ತಂಡ ಸತತ ಸೋಲುಗಳನ್ನು ಕಂಡಿದೆ. ಚೆನ್ನೈ ತಂಡ ಧೋನಿ ಕೃಪೆಯಿಂದ ಗೆಲ್ಲುತ್ತಾ ಬಂದಿದೆ. ಲಕ್ನೊ ತಂಡ ಬ್ಯಾಟಿಂಗ್ ವಿಭಾಗದಲ್ಲಿ ಯಶಸ್ಸು ಕಂಡಿಲ್ಲ. ದಾಳಿಯನ್ನು ಹೇಗೆ ಎದರಿಸುತ್ತೆ ಅನ್ನೋದರ ಮೇಲೆ ಯಶಸ್ಸು ನಿಂತಿದೆ.
ಮತೀಶ ಪತಿರನಾ ಯಾರ್ಕರ್ ಎಸೆತಗಳ ನೆರವಿನಿಂದ ಡೆತ್ ಓವರ್ಗಳಲ್ಲಿ ಮಿಂಚುತ್ತಿದ್ದಾರೆ. ಮುಸ್ತಾಫಿಜುರ್ ರೆಹಮಾನ್ ವಿಭಿನ್ನವಾಗಿ ಎಸೆತಗಳನ್ನು ಹಾಕಿ ಯಶಸ್ಸು ಕಂಡಿದ್ದಾರೆ. ಏಕನಾ ಮೈದಾನ ಸ್ಪಿನ್ನರ್ಗಳಿಗೆ ನೆರವು ನೀಡುವುದರಿಂದ ರವೀಂದ್ರ ಜಡೇಜಾ ಸ್ಪಿನ್ ಜಾದೂ ಮಾಡಬೇಕಿದೆ.ನ್ನು ಲಕ್ನೊ ತಂಡದಲ್ಲಿ ಮಹೀಶ್ ತೀಕ್ಷಣ ಹೆಚ್ಚುವರಿ ಸ್ಪಿನ್ನರ್ರಾಗಿ ಆಡಬಹುದಾಗಿದೆ.
ಈ ಋತುವಿನಲ್ಲಿ ಮೊದಲ ಇನ್ನಿಂಗ್ಸ್ ಆಡಿದ ತಂಡ ಹೆಚ್ಚೆಂದರೆ 175 ರನ್ ಹೊಡೆದಿದೆ. ನಾಯಕ ಧೋನಿ ಕಠಿಣ ಪಿಚ್ನಲ್ಲಿ ಹೆಚ್ಚು ರನ್ ಗಳಿಸಲು ತಂತ್ರ ಮಾಡಬಹುದು.
ಲಕ್ನೊ ತಂಡಕ್ಕೂ ಗಾಯದ ಸಮಸ್ಯೆಗಳಿವೆ. ಯುವ ವೇಗಿ ಮಯಾಂಕ್ ಯಾದವ್ ಗಾಯಕ್ಕೆ ಗುರಿಯಾಗಿ ಹೊರಗುಳಿದಿದ್ದಾರೆ. ಮಯಾಂಕ್ ಇಂದಿನ ಪಂದ್ಯದಲ್ಲಿ ಆಡುವ ಬಗ್ಗೆ ಖಚಿತ ಮಾಹಿತಿಯಿಲ್ಲ. ಸ್ಪಿನ್ ವಿಭಾಗದಲ್ಲಿ ರವಿ ಬಿಷ್ಣೋಯಿ ಗೂಗ್ಲಿ ಹಾಕಿದ್ದಾರೆ. ಆದರೆ 6 ಪಂದ್ಯಗಳಿಂದ 4 ವಿಕೆಟ್ ಪಡೆದಿದ್ದಾರೆ.
ಬಿಷ್ಣೋಯಿ ಮತ್ತು ಶಿವಂ ದುಬೆ ನಡುವೆ ಕದನಕುತೂಹಲ ಮೂಡಿಸಿದೆ.ಲಕ್ನೊ ತಂಡಕ್ಕೆ ಬ್ಯಾಟಿಂಗ್ ದೊಡ್ಡ ಸವಾಲಾಗಿದೆ. ಎರಡು ಅರ್ಧ ಶತಕ ಹೊಡೆದಿರುವ ಕ್ವಿಂಟಾನ್ ಡಿಕಾಕ್ ಕಳೆದ ಮೂರು ಪಂದ್ಯಗಳಲ್ಲಿ ವಿಫಲರಾಗಿದ್ದಾರೆ.
ಇಂಪ್ಯಾಕ್ಟ್ ಪ್ಲೇಯರ್ ಆಗಿರುವ ಆಲ್ರೌಂಡರ್ ಕೃಣಾಲ್ ಪಾಂಡ್ಯ 6 ಪಂದ್ಯಗಳಿಂದ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿಲ್ಲ.ಕೃಣಾಲ್ ಫಿನಿಶರ್ ಆಗಿ ಕಾರ್ಯನಿರ್ವಹಿಸುತ್ತಿಲ್ಲ.ನಾಯಕ ಕೆ.ಎಲ್.ರಾಹುಲ್ (204ರನ್) ಅತ್ಯುತ್ತಮ ಪ್ರದರ್ಶನ ನೀಡಿಲ್ಲ. ಆಯುಷ್ ಬದೋನಿ ಸ್ಥಾನ ಉಳಿಸಿಕೊಳ್ಳಲು ಹೋರಾಡಬೇಕಿದೆ. ನಿಕೊಲೊಸ್ ಪೂರಾನ್ 6 ಪಂದ್ಯಗಳಿಂದ 19 ಸಿಕ್ಸರ್ ಹೊಡೆದು ಗಮನ ಸೆಳೆದಿದ್ದಾರೆ.