ಈ ದಿನವನ್ನು ನಾಡಿನಾದ್ಯಂತ ಶ್ರದ್ಧಾ ಭಕ್ತಿಯಿಂದ ಆಚರಿಸಲಾಗುತ್ತದೆ.
ಹಿಂದೂ ಧರ್ಮದಲ್ಲಿ ಗುರು ಪೂರ್ಣಿಮೆಗೆ ವಿಶೇಷ ಮಹತ್ವವಿದೆ. ಹಿಂದೂ ಪಂಚಾಂಗದ ಪ್ರಕಾರ ಆಷಾಢ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಯಂದು ಗುರುಪೂರ್ಣಿಮೆ ಹಬ್ಬವನ್ನು ಆಚರಿಸಲಾಗುತ್ತದೆ.
ಈ ಗುರು ಪೂರ್ಣಿಮೆ ಜ್ಞಾನ, ಶಿಕ್ಷಣ ಅಥವಾ ಕೌಶಲ್ಯಗಳ ರೂಪದಲ್ಲಿ ನಾವು ಯಾರ ಆಶೀರ್ವಾದವನ್ನು ಪಡೆಯುತ್ತೇವೆಯೋ ಅವರನ್ನು ಗೌರವಿಸಲು ಮೀಸಲಾದ ದಿನವಾಗಿದೆ. ಈ ದಿನ ಹುಣ್ಣಿಮೆ ಇರುವುದರಿಂದ ಹುಣ್ಣಿಮೆ ಎಂಬ ಪದ ಬಳಕೆಯಾಗುತ್ತದೆ. ಇದನ್ನು ವ್ಯಾಸ ಹುಣ್ಣಿಮೆ ಎಂತಲೂ ಕರೆಯುತ್ತಾರೆ.ಇದು ಹಿಂದಿನ ಮತ್ತು ಪ್ರಸ್ತುತ ಜಗತ್ತಿನಲ್ಲಿ ಆಳವಾದ ಮಹತ್ವವನ್ನು ಹೊಂದಿದೆ. ಈ ದಿನವು ಗುರುಗಳಿಗೆ ಮೀಸಲಾಗಿರುವ ಕಾರಣ, ಯಾವುದೇ ಜಾತಿಯ ಹೊರತಾಗಿಯೂ ಜನರು ತಮ್ಮ ಗುರುಗಳಿಗೆ ತಮ್ಮ ಪ್ರಾರ್ಥನೆಯನ್ನು ಸಲ್ಲಿಸುತ್ತಾರೆ, ಅವರು ನೀಡಿದ ಜ್ಞಾನಕ್ಕೆ ಧನ್ಯವಾದಗಳನ್ನು ಸಮರ್ಪಿಸುತ್ತಾರೆ.
ನಮ್ಮ ಬದುಕಿನಲ್ಲಿ ದಾರಿ ದೀಪವಾಗಿ ಬೆಳಗಿ ನಮಗೆ ಸರಿಯಾದ ದಾರಿ ತೋರಿದ ಗುರುಗಳನ್ನು ಸ್ಮರಿಸಿ ನಮಿಸುವ ದಿನ.
ತಾಯಿ ಮತ್ತು ತಂದೆಯನ್ನು ಹೊರತುಪಡಿಸಿ, ವ್ಯಕ್ತಿಯ ಜೀವನದಲ್ಲಿ ಗುರುವು ಪ್ರಮುಖ ಪಾತ್ರ ವಹಿಸುತ್ತಾರೆ. ಅದರಲ್ಲೂ ಭಾರತದಲ್ಲಿ ಗುರು ಎಂದರೆ ಕೇವಲ ಶಿಕ್ಷಣ ನೀಡುವುದಷ್ಟೇ ಅಲ್ಲ, ಶಿಷ್ಯರಿಗೆ ಮೌಲ್ಯಗಳನ್ನು ಮತ್ತು ಮಹತ್ವದ ಜೀವನ ಪಾಠಗಳನ್ನು ಕಲಿಸುವ ವ್ಯಕ್ತಿ ಎಂದು ಗೌರವಿಸಲಾಗುತ್ತದೆ. ಆದ್ದರಿಂದ, ಈ ಗುರು ಪೂರ್ಣಿಮೆ ಜ್ಞಾನ, ಶಿಕ್ಷಣ ಅಥವಾ ಕೌಶಲ್ಯಗಳ ರೂಪದಲ್ಲಿ ನಾವು ಯಾರ ಆಶೀರ್ವಾದವನ್ನು ಪಡೆಯುತ್ತೇವೆಯೋ ಅವರನ್ನು ಗೌರವಿಸಲು ಮೀಸಲಾದ ದಿನವಾಗಿದೆ.
ಗುರುವಿನ ಕೃಪೆಗೆ ಪಾತ್ರರಾಗಲು ಗುರುಪೂರ್ಣಿಮೆ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ.
ಆಷಾಢ ಮಾಸದ ಹುಣ್ಣಿಮೆಯಂದು ಆಚರಿಸಲಾಗುವ ಈ ಹಬ್ಬವನ್ನು ಹಿಂದೂ ಧರ್ಮದಲ್ಲಿ ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಈ ದಿನ ಗುರುವಿನ ಆರಾಧನೆ ಮಾಡುವುದರಿಂದ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ ಸಿಗುತ್ತದೆ ಎಂದು ನಂಬಲಾಗಿದೆ.
ಹಿಂದೂ ಪಂಚಾಂಗದ ಪ್ರಕಾರ ಆಷಾಢ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಯಂದು ಗುರುಪೂರ್ಣಿಮೆ ಹಬ್ಬವನ್ನು ಆಚರಿಸಲಾಗುತ್ತದೆ. ಈ ದಿನವನ್ನು ವ್ಯಾಸ ಪೂರ್ಣಿಮಾ ಎಂದೂ ಕರೆಯುತ್ತಾರೆ. ಏಕೆಂದರೆ ಮಹಾಭಾರತ ಮಹಾಕಾವ್ಯವನ್ನು ರಚಿಸಿದ ಮಹರ್ಷಿ ವೇದವ್ಯಾಸರು ಹುಟ್ಟಿದ್ದು ಇದೇ ದಿನ.
ಗುರುಪೂರ್ಣಿಮೆಯ ಮೂಲ ಕಥೆ
ಹಿಂದೂ ಪುರಾಣಗಳಲ್ಲಿ ಶ್ರೇಷ್ಠ ಗುರುಗಳಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿರುವ ವ್ಯಾಸ ಮಹರ್ಷಿಯ ಜನನದೊಂದಿಗೆ ಗುರು ಪೂರ್ಣಿಮೆಯ ಹಿಂದಿನ ಕಥೆ ಸಂಬಂಧಿಸಿದೆ. ಪುರಾಣಗಳ ಪ್ರಕಾರ ವ್ಯಾಸರು ಈ ಶುಭದಿನದಲ್ಲಿ ಜನಿಸಿದರು. ಅವರು ಪವಿತ್ರ ಹಿಂದೂ ಮಹಾಕಾವ್ಯವಾದ ಮಹಾಭಾರತ ಕಾವ್ಯವನ್ನು ರಚಿಸಿದರು. ಗುರು ಪೂರ್ಣಿಮೆಯು ವ್ಯಾಸರ ಜ್ಞಾನ, ಆಧ್ಯಾತ್ಮಿಕ ಮತ್ತು ಸಾಹಿತ್ಯ ಜ್ಞಾನಕ್ಕೆ ನೀಡಿದ ಕೊಡುಗೆಗಳನ್ನು ಗೌರವಿಸುವ ದಿನವಾಗಿದೆ. ಜ್ಞಾನವನ್ನು ನೀಡುವ ಮತ್ತು ತಮ್ಮ ಶಿಷ್ಯರಿಗೆ ಜ್ಞಾನದ ಹಾದಿಯಲ್ಲಿ ಮಾರ್ಗದರ್ಶನ ನೀಡುವ ಎಲ್ಲಾ ಗುರು-ಗುರುಗಳಿಗೆ ಕೃತಜ್ಞತೆ ಸಲ್ಲಿಸುವ ಸಮಯವೂ ಹೌದು.
ಬೌದ್ಧ ಮತ್ತು ಜೈನ ಧರ್ಮಗಳಲ್ಲೂ ಗುರು ಪೂರ್ಣಿಮಾವನ್ನು ಆಚರಿಸಲಾಗುತ್ತದೆ
ಬೌದ್ಧ ಮತ್ತು ಜೈನ ಧರ್ಮಗಳ ಜೊತೆಗೆ ಸನಾತನ ಧರ್ಮದಲ್ಲಿ (ಹಿಂದೂ ಧರ್ಮ) ಗುರು ಪೂರ್ಣಿಮಾವನ್ನು ಹಬ್ಬವಾಗಿ ಆಚರಿಸಲಾಗುತ್ತದೆ. ಈ ದಿನ ಬೌದ್ಧ ಧರ್ಮದ ಅನುಯಾಯಿಗಳು ಗೌತಮ ಬುದ್ಧನನ್ನು ಪೂಜಿಸಿದರೆ, ಜೈನ ಧರ್ಮದ ಅನುಯಾಯಿಗಳು ಮಹಾವೀರನನ್ನು ಗುರು ಎಂದು ಪೂಜಿಸುತ್ತಾರೆ.
ಉತ್ತರ ಪ್ರದೇಶದ ಸಾರನಾಥದಲ್ಲಿ ಈ ದಿನ ಬುದ್ಧನು ತನ್ನ ಮೊದಲ ಧರ್ಮೋಪದೇಶವನ್ನು ನೀಡಿದ ನೆನಪಿಗಾಗಿ ಬೌದ್ಧರು ಈ ದಿನವನ್ನು ಆಚರಿಸುತ್ತಾರೆ.
ಯೋಗ ಸಂಪ್ರದಾಯದ ಪ್ರಕಾರ, ಈ ದಿನವು ಶಿವನು ಸುಪ್ತಋಷಿಗಳಿಗೆ ಯೋಗವನ್ನು ಕಲಿಸಲು ಪ್ರಾರಂಭಿಸಿದ ಮತ್ತು ಅಧಿಕೃತವಾಗಿ ಮೊದಲ ಗುರುವಾಗ ಕ್ಷಣವನ್ನು ಸೂಚಿಸುತ್ತದೆ.
ಈ ದಿನ ಹಿಂದೂ ಸನ್ಯಾಸಿಗಳು ತಮ್ಮ ಗುರುಗಳಿಗೆ ಪೂಜೆ ಸಲ್ಲಿಸುತ್ತಾರೆ.
ಭಾರತೀಯ ಶಾಸ್ತ್ರೀಯ ಸಂಗೀತ ಮತ್ತು ನೃತ್ಯ ಅಧ್ಯಯನ ಮಾಡುವ ಗುರು ಶಿಷ್ಯ ಪರಂಪರೆಯ ಅನುಯಾಯಿಗಳು ಈ ಪವಿತ್ರ ದಿನವನ್ನು ಆಚರಿಸುತ್ತಾರೆ.
ಗುರು ಬ್ರಹ್ಮ ಗುರುರ್ ವಿಷ್ಣು
ಗುರು ದೇವೋ ಮಹೇಶ್ವರಃ
ಗುರು ಸಾಕ್ಷಾತ್ ಪರ ಬ್ರಹ್ಮ
ತಸ್ಮೈ ಶ್ರೀ ಗುರವೇ ನಮಃ.
ಗುರು ಪೂರ್ಣಿಮೆಯ ಶುಭಾಶಯಗಳು!