ಇಂದು ಗಾಲಿ ಜನಾರ್ದನ ರೆಡ್ಡಿ ಸೇಡಂಗೆ ಆಗಮನ: ಕಾರ್ಯಕರ್ತ ಬೃಹತ್ ಸಮಾವೇಶದಲ್ಲಿ ಬಾಗಿ : ಜಿ ಲಲ್ಲೇಶ್ ರೆಡ್ಡಿ

ಸೇಡಂ,ಮಾ,09: ಮಾಜಿ ಸಚಿವರು ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕರಾದ ಗಾಲಿ ಜನಾರ್ದನ ರೆಡ್ಡಿ ಹಾಗೂ ಅವರ ಧರ್ಮಪತ್ನಿ ಶ್ರೀಮತಿ ಅರುಣಾ ಲಕ್ಷ್ಮಿ ಜನಾರ್ದನ ರೆಡ್ಡಿ ಪಟ್ಟಣಕ್ಕೆ ಆಗಮಿಸುತ್ತಾರೆ. ಪಟ್ಟಣದ ಎರಡು ಕಚೇರಿಗಳು ಸುಲಾಪೇಟ್, ನಡುಗುಂದಾದಲ್ಲಿರುವ ಕಚೇರಿ ಉದ್ಘಾಟಿಸಿಲಿದಾರೆ. ಚಿಂಚೋಳಿ ರಸ್ತೆಯಿಂದ 2 ಸಾವಿರಕ್ಕೂ ಹೆಚ್ಚು ಪಕ್ಷದ ಬೆಂಬಲಿಗರು ವೀರ ಶೈವ ಲಿಂಗಾಯತ ಕಲ್ಯಾಣ ಮಂಟಪದಿಂದ ಬೈಕ್ ರ್ಯಾಲಿ ಮೂಲಕ ಕಾರ್ಯಕರ್ತರ ಬೃಹತ್ ಸಮಾವೇಶ ಆಯೋಜಿಸಿರುವ ಕ್ರೀಡಾಂಗಣದವರೆಗೆ ಬರ ಮಾಡಿಕೊಳ್ಳಲಾಗುವುದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಭ್ಯರ್ಥಿ ಜಿ ಲಲ್ಲೇಶ್ ರೆಡ್ಡಿ ಹೇಳಿದ್ದರು.
ಪಟ್ಟಣದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಬೃಹತ್ ಸಮಾವೇಶದಲ್ಲಿ ತಾಲೂಕಿನಲ್ಲಿರುವ ಗ್ರಾಪಂ ಜಿಪಂ ಸದಸ್ಯರು, ಸಂಸ್ಥಾಪಕರ ನೇತೃತ್ವದಲ್ಲಿ ಪಕ್ಷ ಸೇರ್ಪಡೆ ಅಗಲಿದ್ದಾರೆ ಎಂದರು. ಈ ವೇಳೆಯಲ್ಲಿ ಶರಣ ರೆಡ್ಡಿ ಜಿಲೇಡಪಲ್ಲಿ, ವೀರ ರೆಡ್ಡಿ, ಶಿವಲಿಂಗ ರೆಡ್ಡಿ ಪಾಟೀಲ್ ಬೆನಕನಹಳ್ಳಿ ಇದ್ದರು.