ಇಂದು ಕೋವಿಡ್ ಲಸಿಕೆ ಕೂಡ್ಲಿಗಿ ತಾಲೂಕಿನಲ್ಲಿ 12500 ಡೋಸ್ ಟಾರ್ಗೆಟ್

ಸಂಜೆವಾಣಿ ವಾರ್ತೆ
ಕೂಡ್ಲಿಗಿ.ಸೆ. 29 :- ಮಹಾಮಾರಿ ಕೊರೋನಾ ನಿಯಂತ್ರಣಕ್ಕೆ ಕೋವಿಡ್ ಲಸಿಕೆ ಪ್ರತಿಯೊಬ್ಬರಿಗೂ ಮುಟ್ಟಬೇಕು ಎನ್ನುವ ನಿಟ್ಟಿನಲ್ಲಿ ಜಿಲ್ಲಾಡಳಿತವು ಇಂದು ಬೆಳಿಗ್ಗೆಯಿಂದಲೇ ತಾಲೂಕ ಆಡಳಿತದ  ಮೂಲಕ ಆಯಾ ಪಿಹೆಚ್ ಸಿ ಗೆ ಇಂತಿಷ್ಟು ಕೊವ್ಯಾಕ್ಸಿನ್ ಮತ್ತು ಕೋವಿಶಿಲ್ಡ್ ವೈಲ್ ನೀಡಿ 12500 ಜನರಿಗೆ ಇಂದು ಲಸಿಕೆ ನೀಡುವ ಗುರಿ  ಮುಟ್ಟುವಂತೆ  ಕೂಡ್ಲಿಗಿ ಮತ್ತು ಕೊಟ್ಟೂರು ತಾಲೂಕಿನ  ಆರೋಗ್ಯ ಇಲಾಖೆಯ ಸಿಬ್ಬಂದಿಗಳನ್ನು ನೇಮಿಸಿದೆ.
ಕೂಡ್ಲಿಗಿ ಮತ್ತು ಕೊಟ್ಟೂರು ತಾಲೂಕಿನ ಪಟ್ಟಣ ಮತ್ತು ಗ್ರಾಮಾಂತರ ಪ್ರದೇಶದ ವ್ಯಾಪ್ತಿಯ ಶಾಲಾ ಆವರಣ, ದೇವಸ್ಥಾನ ಸೇರಿದಂತೆ ಹೊಲದಲ್ಲಿರುವ ಜನರ ಹಾಗೂ ಮನೆಮನೆಗೂ ಬೇಟಿ ನೀಡುವ ಮೂಲಕ ಆರೋಗ್ಯ ಇಲಾಖೆ ಸಿಬ್ಬಂದಿಗಳು ಕೋವಿಡ್ ಲಸಿಕೆ ನೀಡುವಲ್ಲಿ ಮುಂದಾಗಿದ್ದಾರೆ.                                                                                                                                                         ಬೆಳಗಟ್ಟ, ಗುಡೇಕೋಟೆ, ಹುಡೇಂ, ಆಲೂರು, ಹೊಸಹಳ್ಳಿ, ಉಜ್ಜಿನಿ, ತೂಲಹಳ್ಳಿ, ಕೊಟ್ಟೂರು, ತಿಮ್ಮಲಾಪುರ,  ಪಿಹೆಚ್ ಸಿ ವ್ಯಾಪ್ತಿಯಲ್ಲಿ ಎಂಟು ಸಾವಿರ ಕೋವಿಶಿಲ್ಡ್ ಮತ್ತು ನಾಲ್ಕು ಸಾವಿರದ ಐನೂರು ಕೊವ್ಯಾಕ್ಸಿನ್ ಲಸಿಕೆ ನೀಡುವ ಗುರಿ ಇಂದು ಕೂಡ್ಲಿಗಿ ಮತ್ತು ಕೊಟ್ಟೂರು ತಾಲೂಕಿನ ವ್ಯಾಪ್ತಿಯಲ್ಲಿ ಇಂದು ಬೆಳಿಗ್ಗೆಯಿಂದಲೇ ಲಸಿಕೆ ಹಾಕುವಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಮುಂದಾಗಿದ್ದಾರೆ ಪಟ್ಟಣದ ಎಸ್ ಎ ವಿ ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ತಿಮಲಾಪುರ ಪಿಎಚ್ ಸಿಓ ಗಿರಿಜಾ, ಬಿ ಎಂ. ವೀರೇಶ, ಆರ್. ಈರಣ್ಣ, ಚಾಲಕ ರಾಮು ಇತರರಿದ್ದರು ಅದರಂತೆ ಆಯಾ ಭಾಗದ ವೈದ್ಯರು ಗ್ರಾಮ ಲೆಕ್ಕಾಧಿಕಾರಿಗಳು ಶಿಕ್ಷಕರು, ಪಿಡಿಒ ಕಂದಾಯ ನಿರೀಕ್ಷಕರು ಸೇರಿದಂತೆ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತರು ಈ ಲಸಿಕೆ ಅಭಿಯಾನದಲ್ಲಿ ಭಾಗವಹಿಸಿ ಕೋವಿಡ್ ಲಸಿಕೆ ನೀಡುವಲ್ಲಿ ಮುಂದಾಗಿದ್ದರೆಂದು ತಿಳಿದಿದೆ.