ಇಂದು ಕೊರೊನಾ ಕೊಂಚ ಇಳಿಕೆ

ಬೆಂಗಳೂರು ನ.5 ರಾಜ್ಯದಲ್ಲಿ ಕರೋನಾ ಸೋಂಕಿನ ಹಾವು-ಏಣಿಯಾಟ ಮುಂದುವರೆದಿದ್ದು ಇಂದು ನೆನ್ನೆಗಿಂತ ಪ್ರಕರಣಗಳು ಇಳಿಕೆಯಾಗಿದೆ
ಕೆಲದಿನಗಳಿಂದ ಸೋಂಕು ಪ್ರಕರಣಗಳು ಸತತವಾಗಿ ಇಳಿಮುಖವಾಗುತ್ತಿದ್ದು ಜನ ನೆಮ್ಮದಿಯ ನಿಟ್ಟಿಸಿರು ಬಿಟ್ಟಿದ್ದರು ಆದರೆ ನಿನ್ನೆ ಪ್ರಕರಣ ಕೊಂಚ ಏರಿಕೆ ಕಂಡಿತ್ತು ಇಂದು ಮತ್ತೆ ಸೋಂಕು ಇಳಿಕೆಯಾಗಿದೆ ಹಾಗೆಯೇ ಸೋಂಕಿತರಸಾವಿನ ಸಂಖ್ಯೆ ಕೂಡ ಕಡಿಮೆಯಾಗಿದೆ ಗುಣಮುಖರಾಗುವ ಸಂಖ್ಯೆಯುಹೆಚ್ಚಾಗಿದೆ
ರಾಜಧಾನಿ ಬೆಂಗಳೂರಿನಲ್ಲೂ ಸೋಂಕು ಇಂದು ಇಳಿಕೆಯಾಗಿದೆ. ಇಂದು ರಾಜ್ಯದಲ್ಲಿ 3156 ಜನರಿಗೆಸೊಂಕು ದೃಢ ಪಟ್ಟಿದೆ
ಗುಣಮುಖರಾದವರ ಸಂಖ್ಯೆಯು ಹೆಚ್ಚಿದ್ದುರಾಜ್ಯದಲ್ಲಿ ಇಂದು5723 ಸೋಂಕಿತರು ಗುಣಮುಖರಾಗಿದ್ದಾರೆ ಹಾಗೆಯೇ ಸೋಂಕಿಗೆ 31 ಸೋಂಕಿತರು ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಒಟ್ಟು ಕೋವಿಡ್ ಸೋಂಕಿತರ ಸಂಖ್ಯೆ838929 ಕ್ಕೆ ಏರಿಕೆಯಾಗಿದೆ.
ರಾಜ್ಯದಲ್ಲಿ ಒಟ್ಟು794503 ಕೋವಿಡ್ ಸೊಂಕಿತರು ಚೇತರಿಸಿಕೊಂಡಿದ್ದಾರೆ. ಮತ್ತು ಸದ್ಯಕ್ಕೆ ರಾಜ್ಯದಲ್ಲಿ ಒಟ್ಟು 33095 ಸಕ್ರಿಯ ಸೋಂಕು ಪ್ರಕರಣಗಳಿವೆ. ಸೋಂಕಿನಿಂದ ಈವರೆಗೆ 11312ಜನ ಸಾವಿಗೀಡಾಗಿದ್ದಾರೆ.
ರಾಜ್ಯದಲ್ಲಿ 916ಸೋಂಕಿತರು ತುರ್ತು ನಿಗಾ ಘಟಕದಲ್ಲಿ ದಾಖಲುಗೊಂಡು ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.ಬೆಂಗಳೂರಿನಲ್ಲಿ ಕಳೆದ 24 ಗಂಟೆಯಲ್ಲಿ 1627ಮಂದಿಗೆ ಕೊರೊನಾ ಸೋಂಕು ಪ್ರಕರಣಗಳು ದೃಢಪಟ್ಟಿದ್ದು, ಒಟ್ಟಾರೆ ಸೋಂಕಿನ ಸಂಖ್ಯೆ 345134ಕ್ಕೆ ಏರಿಕೆಯಾಗಿದೆ.
ನಗರದಲ್ಲುಕಳೆದ24ಗಂಟೆಗಳಲ್ಲಿ ಸೊಂಕಿಗೆ 09ಮಂದಿಬಲಿಯಾಗಿದ್ದು , ಒಟ್ಟಾರೆ ಸಾವಿನ ಸಂಖ್ಯೆ 3926ಕ್ಕೆ ಏರಿಕೆಯಾಗಿದೆ.
ಇಂದು3708ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ ಬೆಂಗಳೂರುನಲ್ಲಿ ಒಟ್ಟು16716 ಸಕ್ರಿಯ ಪ್ರಕರಣಗಳಿವೆ

ಜಿಲ್ಲಾವಾರು ಸೊಂಕಿತರ ವಿವರ

ಬಾಗಲಕೋಟೆ 15ಬಳ್ಳಾರಿ 46 ಬೆಳಗಾವಿ39ಬೆಂಗಳೂರು ಗ್ರಾಮಾಂತರ 53ಬೀದರ್06 ಚಾಮರಾಜನಗರ 26 ಚಿಕ್ಕಬಳ್ಳಾಪುರ 104ಚಿಕ್ಕಮಗಳೂರು 50ಚಿತ್ರದುರ್ಗ 29ದಕ್ಷಿಣ ಕನ್ನಡ 83ದಾವಣಗೆರೆ 54ಧಾರವಾಡ 58 ಗದಗ 11ಹಾಸನ 138ಹಾವೇರಿ 22ಕಲಬುರಗಿ 31ಕೊಡಗು 36ಕೋಲಾರ 57ಕೊಪ್ಪಳ 08ಮಂಡ್ಯ 103ಮೈಸೂರು 169ರಾಯಚೂರು 10ರಾಮನಗರ 31ಶಿವಮೊಗ್ಗ 27ತುಮಕೂರು 181ಉಡುಪಿ 47ಉತ್ತರ ಕನ್ನಡ 45ವಿಜಯಪುರ 36ಯಾದಗಿರಿ 14