ಇಂದು ಕಾಲೇಜು ವಿದ್ಯಾರ್ಥಿಗೆ ನ್ಯಾಯ ಒದಗಿಸಲು ಮನವಿ

ಜಗಳೂರು.ಮೇ.೫: ಇಂದು ಜಗಳೂರು ಪಟ್ಟಣದಲ್ಲಿ ಎಸ್ ಎಫ್ ಐ  ಹಾಗೂ ಪ್ರಗತಿಪರ ಸಂಘಟನೆಯ ನೇತೃತ್ವದಲ್ಲಿ ಜಗಳೂರು ತಾಲ್ಲೂಕಿನ ತಾಲೂಕು ದಂಡಾಧಿಕಾರಿ ಡಾ. ನಾಗವೇಣಿ ಅವರಿಗೆ ಮನವಿ ಸಲ್ಲಿಸಿದರು ನಂತರ ಎಸ್.ಎಫ್.ಐ ಜಿಲ್ಲಾ ಸಂಚಾಲಕರಾದ ಮಹಲಿಂಗಪ್ಪ ಎಚ್ ಎಮ್ ಹೊಳೆ ಮಾತನಾಡಿ ಪೂಜಾ ಎನ್ ಆರ್  ತಂದೆ ರಾಜಣ್ಣ ಎಂಬುವ ಜಗಳೂರು ತಾಲೊಕು ಕಸವನಳ್ಳಿ ಕೊರಚರಟ್ಟಿ ಗ್ರಾಮದ ವಿದ್ಯಾರ್ಥಿ ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೋಕಿನ ಪಟ್ಟಣದ  ಕಾಲೇಜಿ ಆಗಿರುವ ಇಂದು ಕಾಲೇಜಿನಲ್ಲಿ
ದ್ವಿತೀಯ ವರ್ಷದ ಕಲಾ ವಿಭಾಗದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು  ಇಂದು ಕಾಲೇಜಿನ ವಿದ್ಯಾರ್ಥಿ ನಿಲಯದ ಬಹುಮಹಡಿ ಕಟ್ಟಡದಿಂದ ಬಿದ್ದು ಆತ್ಮಹತ್ಯೆ ಗೆ ಯತ್ನ ಮಾಡಿಕೊಂಡು ತನ್ನ ಎರಡು ಕಾಲುಗಳ ಮೂಳೆಗಳು ಹಾಗೂ ಬೆನ್ನು ಮೂಳೆ ಸಂಪೂರ್ಣ ಮುರಿದಿದೆ ವಿದ್ಯಾರ್ಥಿನಿಯ ಆತ್ಮಹತ್ಯೆ ಗೆ ಪ್ರಮೂಖ ಕಾರಣವೆಂದರೆ ವಿದ್ಯಾರ್ಥಿನಿ ಪೂಜಾ ಎನ್ ಅರ್ ಸುಮಾರು ತಿಂಗಳಿಂದ ವಿದ್ಯಾರ್ಥಿ ನಿಲಯದ ಶುಲ್ಕ ಹಾಗೂ ಕಾಲೇಜಿನ ಶೈಕ್ಷಣಿಕ ಶುಲ್ಕವನ್ನು ಪಾವತಿ ಮಾಡಿರಲಿಲ್ಲ ಅದೂದ್ದರಿಂದ ಆಡಳಿತ ಮಂಡಳಿಯವರು ಎಲ್ಲಾ ವಿದ್ಯಾರ್ಥಿಗಳ ಎದುರುಗಡೆ ತುಂಬಾ ನಿಕೃಷ್ಟ ಮತ್ತು ಅಮಾನವಿಯಾವಾಗಿ ವಿದ್ಯಾರ್ಥಿನಿಗೆ  ಮಾತನಾಡಿದ್ದು ಅಲ್ಲದೆ ಜಾತಿನಿಂದನೆ  ವಿದ್ಯಾರ್ಥಿನಿಯು ಅವಮಾನ ತಾಳಲಾರದೆ ಆತ್ಮಹತ್ಯೆ ಗೆ ಪ್ರಯತ್ತಿಸಿದ್ದಳೆ ಇಂತಹ ಘಟನೆ ನಡೆದರೂ ವಿದ್ಯಾರ್ಥಿನಿಗೆ ಯಾವುದೇ ಚಿಕಿತ್ಸೆ ಕೊಡಿಸಿದೆ ಆಡಳಿತ ಮಂಡಳಿ ತುಂಬಾ ನಿರ್ಲಕ್ಷ್ಯ ವಹಿಸಿದ್ದಲ್ಲದೆ ಒಬ್ಬ ಪ್ರತಿಭಾವಂತ ವಿದ್ಯಾರ್ಥಿನಿಯ ಜೀವಕ್ಕೆ ಕುತ್ತು ತಂದಿದೆ ಅವರಿಗೆ ಸೂಕ್ತ ಪರಿಹಾರ ನೀಡಬೇಕು ಎಂದರು 
ನಂತರ ಎಸ್.ಎಫ್.ಐ  ಜಿಲ್ಲಾ ಜಿಲ್ಲಾಧ್ಯಕ್ಷಅನಂತರಾಜ ಬಿ ಎಮ್ ಮಾತನಾಡಿ ಇಂದು ವಿದ್ಯಾರ್ಥಿನಿಯು ಜೀವನ್ಮರಣದ ಹೋರಾಟ ನಡೆಸುತ್ತಿದ್ದಾಳೆ ಪ್ರಕರಣಕ್ಕೆ ಸಂಭದಿಸಿದಂತೆ ಕೊಟ್ಟೂರು ಠಾಣೆಯಲ್ಲಿ  ದೂರು ದಾಖಲಿಸಿದ್ದರೂ ಸಹ ಆರೋಪಿಗಳನ್ನ  ಬಂದಿಸುವಲ್ಲಿ ಪೋಲಿಸ್ ಇಲಾಖೆ ವಿಪಲವಾಗಿದೆ ಈ ಕೂಡಲೇ ಆರೊಪಿಗಳನ್ನು ಬಂಧಿಸಬೇಕು ಹಾಗೂ ವಿದ್ಯಾರ್ಥಿ ಪೂಜಾ ಎನ್ ಆರ್ ಗೆ ಪರಿಹಾರ ಕೊಡಬೇಕು ಇಲ್ಲವಾದರೆ ಮುಂದಿನ ದಿನಗಳಲ್ಲಿ  ಎಸ್ ಎಫ್ ಐ ನೇತೃತ್ವದಲ್ಲಿ ಪ್ರಗತಿಪರ ಸಂಘಟನೆಯ ಜೊತೆಯಲ್ಲಿ  ಕೊಟ್ಟೂರಿನ ಇಂದು ಕಾಲೇಜು ಮುಂದೆ ಹಾಗೂ ಪೋಲಿಸ್ ಠಾಣೆ ಮುಂದೆ ಪ್ರತಿಭಟನೆ ಮಾಡಲಾಗುವುದು ಎಂದು ತಿಳಿಸಲಾಯಿತು.ಈ ಸಂದರ್ಭದಲ್ಲಿ ಪೂಜಾಳ ತಂದೆ ರಾಜಪ್ಪ ಅನಂತರಾಜ ಬಿ ಎಮ್ ಎಸ್ ಎಫ್ ಐ ಜಿಲ್ಲಾ ಸಂಚಾಲಕರು .ಹೊರಾಟಗಾರರಾದ ಮಹಲಿಂಗಪ್ಪ ಎಚ್ ಎಮ್ ಹೊಳೆ .ಮಾನವ ಭಂದುತ್ವ ವೇದಿಕೆಯ ಧನ್ಯಕುಮಾರ್ ಡಿ.ಎಸ್ ಎಸ್.ನ ಸತೀಶ್ ಮಲೆಮಾಚಿಕೆರೆ ಉಪಸ್ಥಿತರಿದ್ದರು