ಇಂದು ಕಾರಟಗಿ ಪುರಸಭೆಯ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ

ಕಾರಟಗಿ:ನ:05: ಕಾರಟಗಿ ಪುರಸಭೆಯ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ಇಂದು ನಡೆಯಲಿದೆ. ಕ್ಷೇತ್ರದ ಹಾಲಿ ಶಾಸಕ ಹಾಗೂ ಮಾಜಿ ಶಾಸಕರ ನಡುವೆ ಪೈಪೋಟಿ ಏರ್ಪಾಟ್ಟಿದೆ. ಪುರಸಭೆ ಒಟ್ಟು 23 ಬಲದ ಸದಸ್ಯರು ಪಟ್ಟಿಯಲ್ಲಿ 12 ಕಾಂಗ್ರೇಸ್ ಸದಸ್ಯರು, 10 ಬಿಜೆಪಿ ಸದಸ್ಯರು ಒಬ್ಬರು ಪಕ್ಷೇತರ ಸದಸ್ಯರಿದ್ದಾರೆ.
ಸ್ಥಳಿಯವರಾದ ಮಾಜಿಸಚಿವ ನಾಗಪ್ಪ ಸಾಲೋಣಿ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಕಾಂಗ್ರೇಸ್ ತೊರೆದು ಬಿಜೆಪಿ ಸೇರ್ಪಡೆಯಾಗಿ ಶಾಸಕ ಬಸವರಾಜ ರೊಂದಿಗೆ ಸ್ಥಳಿಯ ಪುರಸಭೆಯನ್ನು ಬಿಜೆಪಿವಶ ಮಾಡಿಕೊಳ್ಳುಲು ತಯಾರಿ ಮಾಡಿಕೊಂಡಿದ್ದಾರೆ.
ಇತ್ತ ಮಾಜಿ ಶಾಸಕ ಶಿವರಾಜ ತಂಗಡಿಗಿಯವರು ಶತಾಗತಾಯಮಾಡಿ ಕಾರಟಗಿ ಪುರಸಭೆಯನ್ನು ಕೈವಶ ಮಾಡಿಕೊಳ್ಳಲು ಹೆಣಗಾಡುತ್ತಿದ್ದಾರೆ.
ಕೊಪ್ಪಳ ಜಿಲ್ಲಾ ಪಂಚಾಯತಿ ಕೈವಶವಾಗಿ ವಿಜಯ ಪತಾಕೆ ಹಾರಿಸಿದ್ದಾರೆ. ಕಣವಾಗಿ ಏರ್ಪಟ್ಟಿದ್ದ ಗಂಗಾವತಿ ನಗರಸಭೆ ಕಾಂಗ್ರೆಸ್ ತೆಕ್ಕಗೆ ಬಂದಿದ್ದು ಈಗ ಹೇಗಾದರು ಮಾಡಿ ಕಾರಟಗಿ ಪುರಸಭೆಯನ್ನು ಕೈ ಅಧಿಕಾರ ಪಡೆಯಲು ಹೆಣಗಾಡುತ್ತಿದ್ದಾರೆ.
ಸಂಜೆಯೊಳೆಗೆ ಕಾರಟಗಿ ಪುರಸಭೆಯ ಗದ್ದುಗೆ ಯಾರಿಗೆ ಎಂಬವುದು ತಿಳಿಯಲಿದೆ. ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ. ಉಪಾಧ್ಯಕ್ಷ ಸ್ಥಾನಕ್ಕೆ ಪರಿಶಿಷ್ಟಪಂಗಡ ದವರಿಗೆ ಮೀಸಲಾಗಿದೆ.
ಸದಸ್ಯರು ನಿರಾಸಕ್ತಿ: ಕಳೆದಸಲ ಅಯ್ಕೆಯಾದ ಸದಸ್ಯರುಗಳಿಗೆ ಪುರಸಭೆಯಲ್ಲಿ ಅನುದಾನ ತಾತ್ಸರದಿಂದ ಅಧಿಕಾರಿಗಳ ಮಾಹಿತಿಯಿಂದ ಸದಸ್ಯರುಗಳು ಅಭಿವೃದ್ಧಿ ಕಾಮಗಾರಿಗೆ ಉತ್ಸಹ ತೋರುತ್ತಿಲ್ಲಾ. ಪಟ್ಟಣದ ವಾರ್ಡ್ ಗಳಲ್ಲಿ ಅರ್ಧಕ್ಕೆ ನಿಂತ ಕಾಮಾಗಾರಿಗಳಿಗೆ ಇನ್ನೂ ಉತ್ತೇಜನ ನೀಡಿಲ್ಲವೆಂದು ವಾರ್ಡನ ನಿವಾಸಿಗಳು ಅಳಲು ತೊಡಿಕೊಳ್ಳತ್ತಿದ್ದಾರೆ.
ಪುರಸಭೆ ಸದಸ್ಯರಾದ ನಾವುಗಳು ಅನುದಾನದ ಕೊರೆತೆಯಿಂದ ಅಭಿವೃದ್ಧಿ ಕಾಮಗಾರಿಗಳಿಗೆ ನಿರಾಸಕ್ತಿವಾಗುತ್ತದೆ ಎಂದು ಸದಸ್ಯರೊಬ್ಬರು ಅಳಲು ತೊಡಿಕೊಂಡಿದ್ದಾರೆ.