ಇಂದು ಕಜಾಪದಿಂದ ಜನಪದ ಕಲಾವಿದ ದಿ.ಬೀರಪ್ಪ ಯಡಿಯಾಪುರ ಅವರ 7ನೇ ವರ್ಷದ ನುಡಿನಮನ ಕಾರ್ಯಕ್ರಮ

ಕುಕನೂರು ಜ 12 :ಕನ್ನಡ ಜನಪದ ಪರಿಷತ್ ಕುಕನೂರ ತಾಲೂಕ ಘಟಕದಿಂದ ಗೀಗೀ ಪದಕಾರ ತತ್ವಪದಕಾರ ಕನ್ನಡ ಜನಪದ ಅಕಾಡಮಿ ಪ್ರಶಸ್ತಿ ಪುರಸ್ಕೃತ ದಿ. ಬೀರಪ್ಪ ಯಡಿಯಾಪುರ ಅವರ 7ನೇ ವರ್ಷದ ನುಡಿನಮನ ಕಾರ್ಯಕ್ರಮವು ಪಟ್ಟಣದ ಸ್ಥಳೀಯ ಕೋಳಿಪೇಟಿಯ ಇಟಗಿ ಮಸೂತಿ ಬಯಲು ರಂಗಮಂದಿರದಲ್ಲಿ ಬುಧುವಾರ ಸಂಜೆ 6ಗಂಟೆಗೆ ನಡೆಯಲಿದೆ .
ಈ ಕಾರ್ಯಕ್ರಮದಲ್ಲಿ ಪರಮಪೂಜ್ಯ ಶ್ರೀ ಡಾ. ಮಹಾದೇವ ದೇವರು ಅನ್ನದಾನೇಶ್ವರ ಶಾಖಾ ಮಠ ಹಾಗೂ ವಿರುಪಾಕ್ಷಯ್ಯ ಗುರುವಿನಮಠದ ಶ್ರೀಗಳು ಸಾನ್ನಿಧ್ಯ ವಹಿಸಲಿದ್ದಾರೆ ಕ್ಷೇತ್ರದ ಶಾಸಕ ಹಾಲಪ್ಪ ಆಚಾರ್ ಅವರು ಕಾರ್ಯಕ್ರಮವನ್ನ ಉದ್ಘಾಟಿಸಲಿದ್ದಾರೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಾನಪದ ಪರಿಷತ್ ಜಿಲ್ಲಾ ಅಧ್ಯಕ್ಷ ಮಂಜುನಾಥ ಗೊಂಡಬಾಳ ಅವರು ವಹಿಸಲಿದ್ದಾರೆ ಮುಖ್ಯ ಅತಿಥಿಗಳಾಗಿ ಮುಖಂಡ ನವೀನಕುಮಾರ ಗುಳಗಣ್ಣನವರ್ ಪಟ್ಟಣ ಪಂಚಾಯಿತಿ ಅಧ್ಯಕ್ಷ ಶಂಬಣ್ಣ ಜೋಳದ್ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಜಗನ್ನಾಥಗೌಡ ಪಾಟೀಲ್ ಪಪಂ ಉಪಾಧ್ಯಕ್ಷೆ ಗೀತಾ ಮಾಂಹತೇಶ ಜಂಗಲಿ ಮುಖಂಡರಾದ ಕಳಕಪ್ಪ ಕಂಬಳಿ ಶರಣಪ್ಪ ಗುಂಗಾಡಿ ಜಿಪಂ ಮಾಜಿ ಅಧ್ಯಕ್ಷ ರಾಮಣ್ಣ ಭಜಂತ್ರಿ ಕಲಾವಿದರಾದ ಜೀವನಸಾಬ್ ಬಿನ್ನಾಳ ಮೈಬುಬಸಾಬ್ ಕಿಲ್ಲೇದಾರ್ ಮಲ್ಲಿಕಾರ್ಜುನ್ ಭಿನ್ನಾಳ ದೇವಪ್ಪ ಸೋಬಾನದ್ ಪಟ್ಟಣ ಪಂಚಾಯಿತಿ ಸದಸ್ಯರಾದ ಮಹೇಶ ಕವಲೂರು ಕನಕಪ್ಪ ಬ್ಯಾಡರ್ ಗ್ರಾಪಂ ಸದಸ್ಯರಾದ ಮಹೇಶ್ ಗಾವರಾಳ ಬಸವರಡ್ಡಿ ಬೀಡನಾಳ ಶೇಖಪ್ಪ ಕಂಬಳಿ ಕೇಶವ್ ಜುಮ್ಮನ್ನವರ್ ರೇವಣಪ್ಪ ಹಿರೇಕುರುಬರ ಶರಣಪ್ಪ ಚೆಂಡೂರು ಪ್ರಕಾಶ ಬೋರಣ್ಣವರ ಕಾಸಿಂಸಾಬ್ ಚೋಕಾಲಿ ದೇವಪ್ಪ ಸೋಬಾನದ್ ಶಿವಣ್ಣ ರಾಯರಡ್ಡಿ ಚನ್ನಬಸ್ಸಪ್ಪ ಬಳ್ಳಾರಿ ಪತ್ರಕರ್ತರ ಸಂಘದ ಅಧ್ಯಕ್ಷ ರುದ್ರಪ್ಪ ಭಂಡಾರಿ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ರಾಮಣ್ಣ ಭಜಂತ್ರಿ ಇತರರು ಹಾಗೂ ಜನಪದ ಕಾರ್ಯಕ್ರಮವನ್ನು ನಡೆಸಿಕೊಡಲು ಗೀಗೀ ಪದಕಾರ ಶರಣಪ್ಪ ಚಳಮರದ ಕಲಾತಂಡ ಹಾಗೂ ಕು. ಅಕ್ಷತಾ ಬಣ್ಣದಬಾವಿ ಭರ್ಮಪ್ಪ ಸಾಬಳ್ಳಿ ಈರಣ್ಣ ಓಲಿ ಮಂಜುನಾಥ ಗೊರ್ಲೆಕೊಪ್ಪ ವಿಜಯಲಕ್ಷ್ಮಿ ಮಂಡಲಗೇರಿ ರವಿಕುಮಾರ್ ಮೇಣದಾಳ ಇತರರು ಕಾರ್ಯಕ್ರಮಕ್ಕೆ ಭಾಗವಹಿಸಲಿದ್ದಾರೆ ಎಂದು ಕನ್ನಡ ಜಾನಪದ ಪರಿಷತ್ತಿನ ತಾಲ್ಲೂಕು ಅಧ್ಯಕ್ಷ ಮುರಾರಿ ಭಜಂತ್ರಿ ಪ್ರಧಾನ ಕಾರ್ಯದರ್ಶಿ ಅಡಿವೆಪ್ಪ ಬೋರಣ್ಣವರ ರಮೇಶ್ ಗಜಕೋಶ್ ಮತ್ತು ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು ತಿಳಿಸಿದ್ದಾರೆ.
ಪೋಟೋ: ಗೀಗೀಪದಕಾರ ತತ್ವಪದಕಾರ ದಿ.ಬೀರಪ್ಪ ಯಡಿಯಾಪುರ