ಇಂದು ಅಂಬಾಭವಾನಿ ಮೂರ್ತಿ ಮೆರವಣಿಗೆ

ರಾಯಚೂರು.ಅ.೧೫- ಇಂದು ಶಕ್ತಿನಗರದಲ್ಲಿ ಮಾತಾ ಅಂಬಾಭವಾನಿ ಮೂರ್ತಿಯನ್ನು ಇಂದು ಸಿಂಹಾಸದ ಮೇಲೆ ಮೆರವಣಿಗೆ ಮೂಲಕ ಸ್ಥಾಪನೆ ಮಾಡಲಾಗುತ್ತಿದೆ ಇಂದು ಸಾಯಂಕಾಲ ಆರತಿಯನ್ನು ದೇವಿಗೆ ಬೆಳಗಿ ನಂತರ ಮುತ್ತೈದೆ ಮಹಿಳೆಯರಿಗೆ ಅರಿಶಿಣ ಕುಂಕುಮ ಹಚ್ಚಿ ಕಂಕಣವನ್ನು ಕಟ್ಟುವ ಮೂಲಕ ವಿಶೇಷ ಪೂಜೆಯನ್ನು ಮಾಡಲಾಗುವುದು ಎಂದು ದೇವಸ್ಥಾನದ ಪುಜಾರಿಗಳು ಪ್ರಕಟಣೆಯಲ್ಲಿ ತಿಳಿಸಿದರು.
ನಮ್ಮ ಕಂಕಣವನ್ನು ಹಾಗೂ ಮುತ್ತೈದೆತನ ಭದ್ರವಾಗಿ ಇರಲಿ ಎಂದು ಒಬ್ಬತ್ತು ದಿನ ದೇವಿ ಪೂಜೆಗೆ ಯಾವ ಬಣ್ಣದ ಸೀರೆಯನ್ನು ಉಡಿಸುತ್ತಾರೆ ಅದೇ ಬಣ್ಣದ ಸಾರಿಯಲ್ಲಿ ಮಹಿಳೆಯರು ಎಲ್ಲರೂ ಸೇರಿ ಉಟ್ಟಿಕೊಂಡು ದೇವಿಗೆ ಪೂಜೆಯನ್ನು ಸಲ್ಲಿಸಿ ದೇವಿಯ ಮುಂದೆ ಕೋಲಾಟವನ್ನು ಆಡುತ್ತೇವೆ ಎಂದು ಮಹಿಳಾ ಭಕ್ತದಿಗಳು ತಿಳಿಸಿದರು.
ವಿಶೇಷವಾಗಿ ಶಕ್ತಿನಗರದಲ್ಲೆ ಸೂಗೂರೇಶ್ವರ ಕಾಲೋನಿಯಲ್ಲಿ ದೇವಿಯನ್ನು ಸ್ಥಾಪನೆ ಮಾಡಲಾಗುತ್ತದೆ ಒಂಬತ್ತು ದಿನ ನಮಗೆ ಸಂತೋಷದ ದಿನವಾಗುತ್ತದೆ ಎಂದು ಶಶಿಕಲಾ ಅವರು ತಿಳಿಸಿದರು.
ದೇವಿಯ ಪೂಜೆಯಲ್ಲಿ ಚಲಪತಿ ನರೇಶ್ ತಂತಿ, ಸಿದ್ದಪ್ಪ, ಬಬಿತ ಶಶಿಕಲಾ ಭೀಮರಾಯ ಸುದರ್ಶನ್ ರೆಡ್ಡಿ, ನವೀನ್ ಸೂರ್ಯ ಪ್ರಕಾಶ್, ವಿಜಯ್ ಶರಣ ಕೃಷ್ಣವೇಣಿ, ಮೀನಾಕ್ಷಿ, ಸರಸ್ವತಿ, ಅರುಣ, ನಿವೇದಿತಾ, ಮೀನಾಕ್ಷಿ, ಗೌಡಪ್ಪ ಗೌಡ. ಪೂಜಾ, ವಿಶ್ವನಾಥ್ ಸಜ್ಜನ್ ಸೇರಿದಂತೆ ಅನೇಕ ಭಕ್ತದಿಗಳು ಸೇರಿದಂತೆ ಉಪಸ್ಥಿತರಿದ್ದರು.