
ಲಿಂಗಸುಗೂರು,ಮೇ.೦೬- ಕೆಆರ್‌ಪಿಪಿ ಪಕ್ಷದ ಅಧ್ಯಕ್ಷ ಗಾಳಿ ಜನಾರ್ಧನರೆಡ್ಡಿ ಆಗಮಿಸಲಿದ್ದು ಮಧ್ಯಾಹ್ನ ೩ಗಂಟೆಗೆ ಲಕ್ಷ್ಮೀಗುಡಿಯಿಂದ ಪ್ರಮುಖ ಬೀದಿಗಳ ಮಖಾಂತರ ರೋಡ ಶೋ ಮುಖಾಂತರ ಗಡಿಯಾರ ಚೌಕ ಹತ್ತಿರ ಬಹಿರಂಗ ಸಭೆ ಉದ್ದೇಶಿಸಿ ಮಾತನಾಡಲಿರುವ ಎಂದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಭ್ಯರ್ಥಿ ನೀರಾವರಿ ತಜ್ಞ ಆರ್. ರುದ್ರಯ್ಯ ಹೇಳಿದರು.
ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ನಾರಾಯಣ ಪೂರ ಜಲಾಶಯ ಪಕ್ಕದಲ್ಲಿದ್ದರು ಲಿಂಗಸುಗೂರ ಹಾಗೂ ಮುದಗಲ್ ಪಟ್ಟಣಕ್ಕೆ ಸರಿಯಾಗಿ ಕುಡಿಯುವ ನೀರು ಪೊರೈಕೆ ಯಾಗುತ್ತಿಲ್ಲಾ ಗ್ರಾಮೀಣ ಭಾಗದಲ್ಲಿ ಮೂಲಸೌಕರ್ಯ ಅನೇಕ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಐದು ವರ್ಷ ಆಡಳಿತ ಶಾಸಕರ ಕಾರ್ಯ ಶೂನ್ಯವಾಗಿದೆಂದರು.ಮಾಜಿ ಶಾಸಕ ಮಾನಪ್ಪ ವಜ್ಜಲ್ ಸಹೋದರ ಗುತ್ತಿಗೆ ಪಡೆದ ನಂದವಾಡಗಿ ಏತ ನೀರಾವರಿ ಕಾಮಗಾರಿಯಲ್ಲಿ ಹಾಗೂ ಬಲದಂಡೆ ಅಧುನಿಕರಣ ಕಾಮಗಾರಿಯಲ್ಲ ಭಾರಿ ಅವ್ಯವಹಾರ ನಡೆದಿದ್ದ ಸಮಗ್ರ ತನಿಖೆಯಾಗಬೇಕು. ಅವ್ಯವಹಾರ ಮುಚ್ಚಿ ಹಾಕಲು ಪುನ ಶಾಸಕನಾಗಲು ಬಿಜೆಪಿಯಿಂದ ಸ್ಫರ್ಧಿಸಿದ್ದು ಮತದಾರರಿಗೆ ಮೋಸಮಾಡುದಾಗಿದೆ.
ಕ್ಷೇತ್ರದ ಅಭಿವೃದ್ದಿಗಾಗಿ ಸಂಪೂರ್ಣ ನೀರಾವರಿ ಯೋಜನೆಗಳ ಜಾರಿಗೆ ಮತದಾರರು ಬೆಂಬಲಿಸಿ ಅರ್ಶಿವದಿಸಲು ರುದ್ರಯ್ಯ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ಶಂಕರಗೌಡ ಅಮರಾವತಿ ಸಂಗಣ್ಣ ಬಯ್ಯಾಪೂರ ಪಿಡ್ಡನಗೌಡ ಶರಣಪ್ಪ ಮೇಟಿ ಹೆಸರೂರ ಇದ್ದರು.