ಇಂದಿರಾ ಪುತ್ಥಳಿ ಸ್ಥಾಪಿಸಲು ಮನವಿ

ಬಳ್ಳಾರಿ ನ 19 : ನಗರದ ಮುನಿಸಿಪಲ್ ಮೈದಾನದ ಹತ್ತಿರವಿರುವ ಇಂದಿರಾ ಗಾಂದಿ ವೃತ್ತದಲ್ಲಿ ಇಂದಿರಾಗಾಂಧಿ ಅವರ ಪುತ್ಥಳಿಯನ್ನು ಸ್ಥಾಪಿಸಲು ಬಳ್ಳಾರಿ ಜಿಲ್ಲಾ ನಗರ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಜಿ.ಎಸ್.ಮಹಮ್ಮದ್ ರಫೀಕ್ ರವರ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ದೇಶದ ಮೊದಲ ಮಹಿಳಾ ಪ್ರಧಾನಿಗಳು, ಉಕ್ಕಿನ ಮಹಿಳೆ, ದೇಶದ ಧೀಮಂತ ನಾಯಕಿ ಇಂಧಿರಾ ಗಾಂಧಿ ರವರ 103 ನೇ ಜನ್ಮದಿನದ ಸಂಧರ್ಭವಾಗಿ ಇಂದಿರಾ ಪುತ್ಥಳಿ ಸ್ಥಾಪನೆಗೆ ಒತ್ತಾಯಿಸಿ ಮನವಿ ಸಲ್ಲಿಸಲಾಯಿತು.
ಈ ಸಂಧರ್ಭದಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರುಗಳಾದ ಅಲ್ಲಂ ಪ್ರಶಾಂತ್, ಉಪಾಧ್ಯಕ್ಷರಾದ ಯತೀಂದ್ರ ಗೌಡ, ಶರ್ಮಸ್ ಸಾಬ್, ಮೋಕ ರೂಪನಗುಡಿ ಬ್ಲಾಕ್ ಅಧ್ಯಕ್ಷರಾ ಅಸುಂಡಿ ನಾಗರಾಜ ಗೌಡ, ಬ್ರೂಸ್ಪೇದಟ್ ಬ್ಲಾಕ್ ಅಧ್ಯಕ್ಷ ಅರ್ಷದ್ ಅಹಮ್ಮದ್ ಗನಿ ಮೊದಲಾದವರು ಇದ್ದರು