ಇಂದಿರಾ ನಗರದಲ್ಲಿ ಶಾಸಕ ಸೋಮಶೇಖರ ರೆಡ್ಡಿ ಪ್ರಚಾರ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಏ.10: ಇಲ್ಲಿನ  35 ವಾರ್ಡಿನ ಇಂದಿರಾ ನಗರದಲ್ಲಿ ಇಂದು ಬೆಳಿಗ್ಗೆ ನಗರ ಶಾಸಕ ಗಾಲಿ ಸೋಮಶೇಖರ ರೆಡ್ಡಿ ಅವರು ತಮ್ಮನ್ನು ನಗರದ ಅಭಿವೃದ್ಧಿಗಾಗಿ ಮತ್ತೊಮ್ಮೆ ಆಯ್ಕೆ ಮಾಡಿ ಎಂದು ಮನೆ ಮನೆಗೆ ತೆರಳಿ ಮತಯಾಚನೆ ಮಾಡಿದರು.
ವಾರ್ಡಿಗೆ ಬಂದ ಶಾಸಕರನ್ನು ಅಂಬೇಡ್ಕರ್ ಸಂಘದ ಜಿಲ್ಲಾ ಅಧ್ಯಕ್ಷ ಬಿ.ಕೆ.ಅನಂತಕುಮಾರ್, ಮಾಜಿ ಅಧ್ಯಕ್ಷ ರಾಮಪ್ಪ, ವೀರಬಸಪ್ಪ, ಕಲ್ಲಪ್ಪ, ಭೀಮ್ದಾಸ್, ಎ.ಈರಪ್ಪ  ಇನ್ನಿತರ ದಲಿತ ಮುಖಂಡರು ಸ್ವಾಗತಿಸಿ ಅವರೊಂದಿಗೆ ಪ್ರಚಾರ ಕಾರ್ಯದಲ್ಲಿ ಪಾಲ್ಗೊಂಡರು. 
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಎಸ್ಸಿ ಮೀಸಲಾತಿ ಹೆಚ್ಚಳ  ಮತ್ತು ವರ್ಗೀಕರಣವನ್ನು ನಮ್ಮ ಬಿಜೆಪಿ ಸರ್ಕಾರ ಮಾಡಿದೆ. ದಲಿತರ ಉದ್ದಾರದ ಮಾತಾಡಿ ಅವರಿಂದ ಈವರೆಗೆ ಮತ ಪಡೆದು ಆಳಿದ ಕಾಂಗ್ರೆಸ್ ಮಾಡದ್ದನ್ನು ಬಿಜೆಪಿ ಮಾಡಿದೆ. ಅದಕ್ಕಾಗಿ ಬಿಜೆಪಿಗೆ ಮತ ನೀಡಿ ಎಂದು ಮನವಿ ಮಾಡಿದರು.‌
ಸ್ಥಳೀಯ ಮುಖಂಡರಾದ ಪ್ರತಾಪ್ ರೆಡ್ಡಿ, ಶಿವಾನಂದ್, ಪಾಲಿಕೆ ಸದಸ್ಯ ಶ್ರೀನಿವಾಸ್ ಮೋತ್ಕರ್ ಮೊದಲಾದವರು ಇದ್ದರು.