ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯ ಉದ್ಘಾಟನೆ

ಕಲಬುರಗಿ:ಸೆ.9:ನಗರದ ಶರಣ ಸಿರಸಗಿ ಮಡ್ಡಿಯಲ್ಲಿರುವ ಜನ ಶಿಕ್ಷಣ ಸಂಸ್ಥಾನ ಗುಲಬರ್ಗಾ ಕಛೇರಿಯಲ್ಲಿ ದಿನಾಂಕ 09-09-2022 ರಂದು ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯ ಉದ್ಘಾಟನೆ ಮಾಡಲಾಯಿತು.

ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯ ಸಹಾಯಕ ಪ್ರಾದೇಶಿಕ ನಿರ್ದೇಶಕರಾದ ಡಾ|| ಬಿ. ಎನ್. ದೇವೆಂದ್ರ ರವರು ವಿಶ್ವವಿದ್ಯಾಲಯದ ಬಗ್ಗೆ ವಿಸ್ತಾರವಾಗಿ ಮಾಹಿತಿ ನೀಡಿ ವಿದ್ಯಾರ್ಥಿಗಳು ಪ್ರವೇಶ ಪಡೆಯಲು ಹುರಿದುಂಬಿಸಿದರು.

ಜನ ಶಿಕ್ಷಣ ಸಂಸ್ಥಾನ ಗುಲಬರ್ಗಾದ ನಿರ್ದೇಶಕರಾದ ಶ್ರೀ ಸುರೇಂದ್ರ ಪೋಲಿಸ್ ಪಾಟೀಲ್ ರವರು ಮಾತನಾಡುತ್ತಾ ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯವು ನಮ್ಮ ಜನ ಶಿಕ್ಷಣ ಸಂಸ್ಥಾನ ಗುಲಬರ್ಗಾ ಸಹಯೋಗದೊಂದಿಗೆ ಮುಂದಿನ ದಿನಗಳಲ್ಲಿ ಅನೇಕ ವಿದ್ಯಾರ್ಥಿಗಳು ತಮ್ಮ ಉನ್ನತ ವ್ಯಾಸಂಘವನ್ನು ಮಾಡುತ್ತಾರೆಂದು ವಿಶ್ವಾಸ ವ್ಯಕ್ತಪಡಿಸಿದರು.

ವೇದಿಕೆ ಮೇಲೆ ಪಾರ್ವತಿ ಹಿರೇಮಠ, ಜ್ಯೋತಿ, ಬಸವರಾಜ ಧಾಬಾ, ಸಿದ್ದಣಗೌಡ ಬಿರಾದಾರ ಹಾಗೂ ಇನ್ನಿತರರು ಉಪಸ್ಥಿತರಿದ್ದರು.