ಇಂದಿರಾ ಗಾಂಧಿ ಜನ್ಮದಿನಾಚರಣೆ

ಲಕ್ಷ್ಮೇಶ್ವರ, ನ20: ದೇಶದ ಮಾಜಿ ಪ್ರಧಾನಿ ದಿ. ಇಂದಿರಾ ಗಾಂಧೀಜಿಯವರ 108ನೇ ಜನ್ಮ ದಿನೋತ್ಸವವನ್ನು ಮಾಜಿ ಶಾಸಕ ಜಿ. ಎಸ್. ಗಡ್ಡದೇವರಮಠ ಅವರ ನಿವಾಸದಲ್ಲಿ ಆಚರಿಸಲಾಯಿತು. ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.
ಬಳಿಕ ಮಾತನಾಡಿದ ಮಾಜಿ ಶಾಸಕ ಜಿ. ಎಸ್. ಗಡ್ಡದೇವರಮಠ ಅವರು ಈ ದೇಶದಲ್ಲಿ ಬಡವರು, ಹಿಂದುಳಿದವರು, ದಲಿತರು, ಅಲ್ಪಸಂಖ್ಯಾತರು, ಬುಡಕಟ್ಟು ಜನಾಂಗದವರ ಏಳಿಗೆಗಾಗಿ ಶ್ರಮಿಸಿದ ಇಂದಿರಾಜಿಯವರು “ಉಳುವವನೇ ಒಡೆಯ” ಎಂಬ ಕಾನೂನು ಜಾರಿಗೆ ತರುವ ಮೂಲಕ ಕ್ರಾಂತಿಯನ್ನು ಮಾಡಿದರು. ಅವರ ಸತತ ಪರಿಶ್ರಮದಿಂದಾಗಿ ಜಗತ್ತಿನಲ್ಲಿಯೇ ಭಾರತ ಒಂದು ಶಕ್ತಿಯುತ ದೇಶವಾಗಿ ಹೊರ ಹೊಮ್ಮಿತಲ್ಲದೇ ಪ್ರಬಲ ರಾಷ್ಟ್ರಗಳ ಸಾಲಿಗೆ ಸೇರಿತು ಎಂದು ಹೇಳಿದರು.
ಈ ಸಂದರ್ಭದಲ್ಲಿ ಲಕ್ಷ್ಮೇಶ್ವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿ. ಆರ್. ಕೊಪ್ಪದ, ಎಂ. ಎಸ್. ದೊಡ್ಡಗೌಡರ, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಂಬರೀಶ್ ತೆಂಬದಮನಿ, ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮವ್ವ ಕುರಿ, ಪುರಸಭೆ ಸದಸ್ಯ ವಿಜಯ ಕರಡಿ, ಮುಖಂಡ ತಿಪ್ಪಣ್ಣ ಸಂಶಿ, ಶಿವಾನಂದ ಲಿಂಗಶೆಟ್ಟಿ, ವೀರೇಂದ್ರ ಭಜಂತ್ರಿ, ಸದಾನಂದ್ ಸಂಭಾಜಿ ಸೇರಿದಂತೆ ಅನೇಕರಿದ್ದರು.