ಇಂದಿರಾ ಕ್ಯಾಂಟೀನ್ ಬಂದ್ವಾರದೊಳಗೆ  ಆರಂಭದ ಭರವಸೆ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ:ಜ,30- ಕಳೆದ ಹಲವು ದಿನಗಳಿಂದ ಬಂದ್ ಆಗಿರುವ ನಗರದ ಐದು ಇಂದಿರಾ ಕ್ಯಾಂಟೀನ್ ಗಳು ಬರುವ ಒಂದು ವಾರದಲ್ಲಿ ಕಾರ್ಯಾರಂಭ ಮಾಡಲಿವೆ ಎಂದು ನಗರ ಶಾಸಕ‌ ಭರತ್ ರೆಡ್ಡಿ ಹೇಳಿದ್ದಾರೆ.
ಸಂಜೆವಾಣಿಯೊಂದಿಗೆ ಮಾತನಾಡಿದ ಅವರು ಈ ಹಿಂದೆ ನಗರದ ಇಂದಿರಾ ಕ್ಯಾಂಟೀನ್ ನಡೆಸುತ್ತಿದ್ದವರ ಟೆಂಡರ್ ಅವಧಿ ಮುಗಿದಿದೆ.‌ಅದಕ್ಕಾಗಿ ಹೊಸ ಟೆಂಡರ್ ಕರೆದಿದ್ದು. ಅದು ಅಂತಿಮಗೊಂಡಿದ್ದು ಕಾರ್ಯಾದೇಶವಾಗಬೇಕಿದೆ ಬಹುತೇಕ ವಾರದೊಳಗೆ ಮತ್ತೆ ಈ ಕ್ಯಾಂಟೀನ್ ಗಳು ಎಂದಿನಂತೆ ಆರಂಭವಾಗಲಿವೆ ಎಂದಿದ್ದಾರೆ.
ನಗರದ ವಿಮ್ಸ್, ಜಿಲ್ಲಾ ಆಸ್ಪತ್ರೆ, ಬೆಳಗಲ್ಲು ಕ್ರಾಸ್, ಎಪಿಎಂಸಿ ಆವರಣ ಮತ್ತು ಬುಡಾ ಆವರಣದಲ್ಲಿನ  ಈ ಕ್ಯಾಂಟೀನ್ ಗಳು ನಡೆಯುತ್ತಿದ್ದವು. ಇಲ್ಲಿ ದುಡಿಯುವ ಬಡ ಜನರಷ್ಟೇ ಅಲ್ಲದೆ,  ಕಾಲೇಜಿಗೆ ಬರುವ ವಿದ್ಯಾರ್ಥಿಗಳು   ಹೆಚ್ಚಿನದಾಗಿ ಉಪಹಾರ ಮತ್ತು ಊಟ ಮಾಡುತ್ತಿದ್ದರು. ಕಡಿಮೆ ಧರದಲ್ಲಿ ದೊರೆಯುತ್ತಿತ್ತು. ಈಗ ಇಲ್ಲದಾಗಿ ನಮಗೆ ತೊಂದರೆ ಆಗಿದೆ ಎನ್ನುತ್ತಾರೆ ನಗರದ ಸರ್ಕಾರಿ ಐಟಿಐ ಕಾಲೇಜಿನ‌ ವಿದ್ಯಾರ್ಥಿ ಮಲ್ಲಿಕಾರ್ಜುನ.
ಈ ಹಿಂದೆ ಕ್ಯಾಂಟೀನ್ ನಡೆಸುತ್ತಿದ್ದವರಿಗೆ ಸರ್ಕಾರ ಪೇಮೆಂಟ್ ಮಾಡಿಲ್ಲ ಎಂದು ಬಂದ್ ಮಾಡಲಾಗಿದೆಂದು ಹೇಳಲಾಗುತ್ತಿದೆ.
ಏನೇ ಆಗಲಿ ಕಡಿಮೆ ಧರದಲ್ಲಿ  ಬಡವರ ಹೊಟ್ಟೆ ತುಂಬಿಸುವ ಇಂದಿರಾ ಕ್ಯಾಂಟೀನ್ ಗಳು ಬಂದ್ ಆಗಬಾರದು ಎಂಬುದು ಜನರ ಬೇಡಿಕೆ ಆಗಿದೆ.