ಇಂದಿರಾ ಕ್ಯಾಂಟೀನ್ ಪರಿಶೀಲನೆ

ಹಿರಿಯೂರು: ಮೇ.19- ಇಲ್ಲಿನ ಇಂದಿರಾ ಕ್ಯಾಂಟೀನ್ ಗೆ ನಗರಸಭೆ ಅಧ್ಯಕ್ಷರಾದ ಶಂಶುನ್ನೀಸ ಹಾಗು ಪೌರಾಯುಕ್ತರಾದ, ಲೀಲಾವತಿ  ತಮ್ಮ ತಂಡದೊಂದಿಗೆ ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು,  ಲಾಕ್ ಡೌನ್ ಪ್ರಯುಕ್ತ ಸರ್ಕಾರ ಬಡವರಿಗೆ ಉಚಿತ  ಆಹಾರದ ವ್ಯವಸ್ಥೆ ಕಲ್ಪಿಸಿದ್ಧು ಶುಚಿ ರುಚಿಯೊಂದಿಗೆ, ಸಮರ್ಪಕವಾಗಿ ವಿತರಿಸುವಂತೆ ಸೂಚಿಸಿದರು, ಈ ಸಂದರ್ಭದಲ್ಲಿ ನಗರಸಭೆ ಉಪಾಧ್ಯಕ್ಷ ಬಿ.ಎನ್ ಪ್ರಕಾಶ್ ,  ಸದಸ್ಯ ಕೇಶವ ಮೂರ್ತಿ, ಕಂದಾಯ ಅಧಿಕಾರಿ ಜಯ್ಯಪ್ಫ ದುರ್ಗೇಶ್,  ಸಾದತ್ ಉಲ್ಲಾ ಇದ್ದರು.