ಇಂದಿರಾ ಕ್ಯಾಂಟೀನ್‍ಗೆ ಬಜೆಟ್‍ನಲ್ಲಿ ನೀಡದೆ ದ್ರೋಹ

ಮೈಸೂರು:ಏ:09: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಜಾರಿಗೆ ತಂದಿದ್ದ ಮಹತ್ವಾಕಾಂಕ್ಷೆಯ ಯೋಜನೆ ಇಂದಿರಾ ಕ್ಯಾಂಟೀನ್‍ಗೆ ಬಜೆಟ್‍ನಲ್ಲಿ ಹಣ ನೀಡದೆ ದ್ರೋಹ ಬಗೆಯಲಾಗುತ್ತಿದೆ ಎಂದು ಆರೋ ಪಿಸಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗ ಗಳ ಜಾಗೃತ ವೇದಿಕೆ ವತಿಯಿಂದ ಇಂದಿರಾ ಕ್ಯಾಂಟೀನ್ ಉಳಿಸಿ ನಿಧಿ ಸಂಗ್ರಹ ಅಭಿಯಾನ ನಡೆಸಲಾಯಿತು.
ಕಾಡಾ ಕಛೇರಿ ಬಳಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಕರ್ನಾಟಕ ರಾಜ್ಯ ಹಿಂದುಳಿದ ಜಾಗೃತ ವೇದಿಕೆಯ ರಾಜ್ಯಾಧ್ಯಕ್ಷ ಕೆ.ಎಸ್.ಶಿವರಾಮು ಬಿಜೆಪಿ ನೇತೃತ್ವದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಬಡವರ ವಿರೋಧಿಯಾಗಿದ್ದಾರೆ. ಬಡವರು ಹಸಿವಿನಿಂದ ನರಳಬಾರದು ಎಂಬ ಉದ್ದೇಶದಿಂದ 2017ರಲ್ಲಿ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರ ಇಂದಿರಾ ಕ್ಯಾಂಟೀನ್ ಆರಂಭಿಸಿತು. ಕಡು ಬಡತನದಲ್ಲಿರುವ ಕೂಲಿಕಾರ್ಮಿಕರು, ಆಟೋ, ಮತ್ತು ಟ್ಯಾಕ್ಸಿ ಚಾಲಕರು ದೂರದ ಊರುಗಳಿಂದ ಆಸ್ಪತ್ರೆಗಳಿಗೆ ಬರುವ ಬಡ ಜನರಿಗೆ ಕಡಿಮೆ ದರದಲ್ಲಿ ಊಟ ಉಪಹಾರವನ್ನು ಪೂರೈಸುವ ವ್ಯವಸ್ಥೆಯನ್ನು ಇಂದಿರಾ ಕ್ಯಾಂಟೀನ್ ಮಾಡುತ್ತಿತ್ತು. ಇದರಿಂದ ಲಕ್ಷಾಂತರ ಮಂದಿ ಬಡವರಿಗೆ ಉಪಯೋಗವಾಗುತ್ತಿತ್ತು. ಒಂದು ವರ್ಷಕ್ಕೆ 200ಕೋಟಿ ರೂ. ಸರ್ಕಾರ ನೀಡಿದರೆ ಇಂದಿರಾ ಕ್ಯಾಂಟೀನ್ ನ್ನು ಯಾವುದೇ ಅಡೆತಡೆ ಇಲ್ಲದೆ ನಡೆಸಬಹುದು. ಆದರೆ 2.5ಲಕ್ಷ ಕೋಟಿ ಬಜೆಟ್ ಮಂಡಿಸಿರುವ ರಾಜ್ಯ ಸರ್ಕಾರ 200ಕೋಟಿ ಅಲ್ಪ ಮೊತ್ತವನ್ನು ಬಡವರ ಯೋಜನೆಗೆ ನೀಡದೆ ಇವ ರನ್ನು ವಂಚಿಸುತ್ತಿರುವುದ ಅಕ್ಷಮ್ಯ ಅಪರಾಧ. ಆ ಮೂಲಕ ಬಿಜೆಪಿ ದುರ್ಬಲ ವಿರೋಧಿಯಾಗಿದೆ ಎಂದು ಆರೋಪಿಸಿದರು.
ಈಗಲಾದರೂ ಸರ್ಕಾರ ಎಚ್ಚೆತ್ತು ಬಡವರ ಯೋಜನೆಗಳ ಕತ್ತುಹಿಸುಕದೆ ಇಂತಹ ಯೋಜನೆಗಳಿಗೆ ಅನುದಾನ ಒದಗಿಸಿ ಇಂದಿರಾ ಕ್ಯಾಂಟೀನ್ ಗಳಿಗೆಮರುಜೀವ ನೀಡಿ ಕಡುಬಡ ವರ ಅನ್ನ ನೀಡುವ ಕೆಲಸವಾಗಬೇಕು. ಬಡವರ ಅನ್ನ ಕಸಿಯುವ ಕೆಲಸವನ್ನು ಸರ್ಕಾರ ಕೂಡಲೇ ಕೈಬಿಡಬೇಕೆಂದು ಒತ್ತಾಯಿ ಸಿದರು.
ಸಾಂಕೇತಿಕವಾಗಿ ನಿಧಿ ಸಂಗ್ರಹಿಸಿ ಮುಖ್ಯಮಂತ್ರಿಗಳ ನಿಧಿಗೆ ಅರ್ಪಿ ಸುವ ಮೂ ಲಕ ಹಣ ಸಹಾಯ ಮಾಡುತ್ತಿರುವುದಾಗಿ ತಿಳಿಸಿದರು.
ಅಭಿಯಾನದಲ್ಲಿ ಎಂ.ಲೋಕೇಶ್ ಕುಮಾರ್, ಆರ್ ಕೆ.ರವಿ, ಎಂ.ಮಹೇಂದ್ರ, ರೋಹಿತ್, ಯೋಗೇಶ್, ಹೆಚ್.ಎಸ್.ಪ್ರಕಾಶ್, ದೀಪಕ್ ಪುಟ್ಟಸ್ವಾಮಿ, ಮಹೇಸ್ ಸೋಸಲೆ, ಶೈಲೇಂದ್ರ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.