ಇಂದಿರಾ ಕ್ಯಾಂಟಿಲ್ ಉಪಹಾರ ಸೇವಿಸಿದ ಮುಖ್ಯಾಧಿಕಾರಿ

ಚಿಂಚೋಳಿ,ಮೇ.29- ಇಲ್ಲಿನ ಇಂದಿರಾ ಕ್ಯಾಂಟೀನಗೆ ಪುರಸಭೆ ಅಧಿಕಾರಿ ಚಂದ್ರಕಾಂತ ಪಾಟೀಲ ಅವರು ಭೇಟಿಮಾಡಿ ಸಾಮಾನ್ಯರೊಂದಿಗೆ ಉಪಹಾರ ಸೇವಿಸಿದರು.
ಮಾತನಾಡಿದ ಅವರು, ಲಾಕ್‍ಡೌನ್ ಅವಧಿಯಲ್ಲಿ ಬಡವರಿಗೆ ಉಚಿತ ಊಟ ಉಪಹಾರದ ವ್ಯವಸ್ಥೆ ಈ ಕ್ಯಾಂಟಿನ್‍ನಲ್ಲಿ ಕಲ್ಪಿಸಲಾಗಿದ್ದು, ಇದರ ಸದುಪಯೋಗವನ್ನು ವಲಸೆ ಕಾರ್ಮಿಕರು, ಬಡವರು ಪಡೆದುಕೊಳ್ಳುವಂತೆ ಕರೆ ನೀಡಿದರು.
ಇಲ್ಲಿನ ಇಂದಿರಾ ಕ್ಯಾಂಟಿನ ಸಿಬ್ಬಂದಿಗಳು ಗುಣಮಟ್ಟದ ಆಹಾರ ಮತ್ತು ಉಪಹಾರವನ್ನು ಸಿದ್ದಪಡಿಸುವ ಮೂಲಕ ಊಟ ಮಾಡುವವರಿಂದ ಮೆಚ್ಚುಗೆ ಪಡೆಯಬೇಕು ಎಂದು ಸಲಹೆ ನೀಡಿದರು.
ತಾವು ಸೇವಿಸಿರುವ ಉಪಹಾರ ಅತ್ಯುತ್ತಮವಾಗಿದ್ದು, ಇದೆ ಗುಣಮಟ್ಟವನ್ನು ಕಾಪಾಡಿಕೊಮಡು ಹೋಗುವಂಎ ಹೇಳಿದರು.
ರಾಜ್ಯ ಸರ್ಕಾರವು ಲಾಕ್‍ಡೌನ್ ಅವಧಿಯವರೆಗೂ ಇಲ್ಲಿನ ಬಡವರ ಅನುಕೂಲಕ್ಕಾಗಿ ಈ ಇಂದಿರಾ ಕ್ಯಾಂಟೀನ್ನಲ್ಲಿ ಉಚಿತ ಆಹಾರ ಪೂರೈಕೆ ಮಾಡಲಾಗುತ್ತಿದೆ ಎಂದರು.